LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅನಂತ್ ಅಂಬಾನಿಯವರ ‘ಚಾಂಪಿಯನ್ಸ್ ಆಫ್ ಕೇರ್’ಅಭಿಯಾನ ಆರಂಭ: ಕರ್ನಾಟಕದ ಮೂರು ಪ್ರಾಣಿ ಕಲ್ಯಾಣ ಸಂಸ್ಥೆಗಳ ಜತೆಗೆ ವಂತಾರಾ ಪಾಲುದಾರಿಕೆ

ಜಾಮ್‌ನಗರ : ದೇಶಾದ್ಯಂತ ಪ್ರಾಣಿಗಳ ರಕ್ಷಣೆ ಮತ್ತು ಕಲ್ಯಾಣಕ್ಕಾಗಿ ಅನಂತ್ ಅಂಬಾನಿ ಅವರು ‘ಚಾಂಪಿಯನ್ಸ್ ಆಫ್ ಕೇರ್’ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಇದರ ಭಾಗವಾಗಿ ಕರ್ನಾಟಕದ ಮೂರು ಪ್ರಾಣಿ ಕಲ್ಯಾಣ ಸಂಸ್ಥೆಗಳ ಜತೆಗೆ ವಂತಾರಾ ಪಾಲುದಾರಿಕೆ ವಹಿಸಿದೆ.

ಮಂಗಳೂರಿನ ಆನಿಮಲ್‌ ಕೇರ್‌ ಟ್ರಸ್ಟ್‌, ಬೆಂಗಳೂರಿನ ಕಂಪಾಶನ್‌ ಅನ್‌ ಲಿಮಿಟೆಡ್‌ ಪ್ಲಸ್‌ ಆಕ್ಷನ್‌ (ಸಿಯುಪಿಎ) ಮತ್ತು ಬಳ್ಳಾರಿಯ ವಸುಧೈವ ಕುಟುಂಬಕಮ್‌ ಸಂಸ್ಥೆಯ ಜತೆಗೆ ವಂತಾರಾ ಪಾಲುದಾರಿಕೆ ವಹಿಸಿದೆ.

ವಂತಾರಾ  ಸಂಸ್ಥೆಯ ಈ ಅಭಿಯಾನದೊಂದಿಗೆ ದೇಶಾದ್ಯಂತ ಒಟ್ಟು 50ಕ್ಕೂ ಹೆಚ್ಚು ಪ್ರಾಣಿ ಕಲ್ಯಾಣ ಸಂಸ್ಥೆಗಳು ಕೈಜೋಡಿಸಿವೆ.  ಇದರ ಮೂಲಕ ಪ್ರತಿವರ್ಷ ಅಂದಾಜು 20 ಲಕ್ಷಕ್ಕೂ ಅಧಿಕ ಪ್ರಾಣಿಗಳಿಗೆ ಚಿಕಿತ್ಸೆ, ರಕ್ಷಣೆ, ಆಶ್ರಯ, ಆಹಾರ ಹಾಗೂ ಇತರೆ ಅಗತ್ಯ ನೆರವು ತಲುಪಿಸುವ ಗುರಿ ಹೊಂದಲಾಗಿದೆ.

ಈ ಅಭಿಯಾನದಡಿ ಬೀದಿ ನಾಯಿಗಳು ಮತ್ತು ಬೆಕ್ಕುಗಳು, ಕೈಬಿಡಲ್ಪಟ್ಟ ಅಥವಾ ಗಾಯಗೊಂಡ ಪ್ರಾಣಿಗಳ ಜೊತೆಗೆ ಜಾನುವಾರುಗಳು, ಕತ್ತೆಗಳು ಹಾಗೂ ಕುದುರೆಗಳಿಗೂ ನೆರವು ಸಿಗಲಿದೆ. ಆಯಾ ಸಂಘಟನೆಗಳ ಬೇಡಿಕೆಗೆ ತಕ್ಕಂತೆ ಅವುಗಳಿಗೆ ಆಂಬುಲೆನ್ಸ್‌ಗಳು, ರಕ್ಷಣಾ ಉಪಕರಣಗಳು, ವೈದ್ಯಕೀಯ ಚಿಕಿತ್ಸೆ ಹಾಗೂ ಪರೀಕ್ಷಾ ಯಂತ್ರಗಳು, ಆಶ್ರಯ ತಾಣಗಳು ಮತ್ತು ತರಬೇತಿಯಂತಹ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ಈ ಕುರಿತು ಮಾತನಾಡಿರುವ ಅನಂತ್ ಅಂಬಾನಿ, “ಪ್ರತಿ ದಿನ ಅನೇಕ ಜನರು ತಮ್ಮ ಬಳಿಯಿರುವ ಮಿತ ಸಂಪನ್ಮೂಲಗಳಲ್ಲೇ ಅಶಕ್ತ ಪ್ರಾಣಿಗಳ ಆರೈಕೆ ಮಾಡುತ್ತಿದ್ದಾರೆ. ‘ಚಾಂಪಿಯನ್ಸ್ ಆಫ್ ಕೇರ್’ ಮೂಲಕ ನಾವು ಅವರೊಂದಿಗೆ ನಿಂತು ಈ ಮಹತ್ಕಾರ್ಯವನ್ನು ಮತ್ತಷ್ಟು ಬಲಪಡಿಸಲು ಬಯಸುತ್ತೇವೆ. ನಮಗೆ ‘ಪ್ರತಿ ಜೀವವೂ ಮುಖ್ಯ’  ಎನ್ನುವುದರ ನಿಜವಾದ ಅರ್ಥವೇ ಇದು” ಎಂದು ತಿಳಿಸಿದ್ದಾರೆ.

ವಂತಾರಾ ಹಾಗೂ ಈ ಅಭಿಯಾನದಲ್ಲಿ ಪಾಲ್ಗೊಂಡಿರುವ ಸಂಸ್ಥೆಗಳು ಒಟ್ಟಾಗಿ ಕಾರ್ಯನಿರ್ವಹಿಸಲು ಒಡಂಬಡಿಕೆಗೆ  ಸಹಿ ಹಾಕಿವೆ. ಇದರಡಿ ಮಾಹಿತಿ, ಅನುಭವ ಹಾಗೂ ಸಂಪನ್ಮೂಲಗಳನ್ನು ಪರಸ್ಪರ ಹಂಚಿಕೊಳ್ಳಲಾಗುವುದು. ಇದರಿಂದ ಪ್ರಾಣಿ ರಕ್ಷಣೆಯಲ್ಲಿ ತೊಡಗಿರುವ ಸಂಸ್ಥೆಗಳಿಗೆ ಅತ್ಯುತ್ತಮ ನೆರವು ಲಭ್ಯವಾಗಲಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS: ರೆಬೆಲ್ ಸ್ಟಾರ್ ಅಂಬರೀಶ್‌ಗೆ ಮರಣೋತ್ತರ ‘ಕರ್ನಾಟಕ ರತ್ನ’ ನೀಡಿ: ಸರ್ಕಾರಕ್ಕೆ ಸಚಿವ ರಾಮಲಿಂಗಾರೆಡ್ಡಿ ಪತ್ರದೆಹಲಿಯ ನಿವಾಸಿ ಆಯುಕ್ತ ಸಮೀರ್ ಶುಕ್ಲಗೆ ಬೀಳ್ಕೊಡುಗೆ ನೀಡಿದ ಈಶ್ವರ ಖಂಡ್ರೆBREAKING: KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ನಿವಾಸದ ಮೇಲೆ ED ದಾಳಿಚಿಕ್ಕಮಗಳೂರಲ್ಲಿ: ಕೆರೆಯಲ್ಲಿ ಈಜಲು ತೆರಳಿದ್ದ ಮೂವರು ಬಾಲಕರು ನೀರುಪಾಲುಜನರಲ್ಲಿ ಭಯ ಭೀತಿಯನ್ನು ಹುಟ್ಟಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ: ಛಲವಾದಿ ನಾರಾಯಣಸ್ವಾಮಿ‘ದಿ ವಾನ್’ ಸಕ್ಸಸ್ ನಡುವೆ ಆಧ್ಯಾತ್ಮಿಕ ಕಥೆ ಬಿಚ್ಚಿಟ್ಟ ತಮನ್ನಾ: ನಟ ಸಿದ್ಧಾರ್ಥ್ ಮಲ್ಹೋತ್ರಾಗೆ ಸದ್ಗುರು ಆಶ್ರಮದ ಕನೆಕ್ಷನ್!ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ ಮೈತ್ರಿಕೂಟದಿಂದ ತೀವ್ರಗೊಂಡ ಪ್ರತಿಭಟನೆ: ಚುನಾವಣಾ ಆಯೋಗಕ್ಕೆ ಮುತ್ತಿಗೆ ಯತ್ನದೆಹಲಿಯ ನಿವಾಸಿ ಆಯುಕ್ತ ಸಮೀರ್ ಶುಕ್ಲಗೆ ಸಚಿವ ಈಶ್ವರ ಖಂಡ್ರೆ ಬೀಳ್ಕೊಡುಗೆಅನಂತ್ ಅಂಬಾನಿಯವರ ‘ಚಾಂಪಿಯನ್ಸ್ ಆಫ್ ಕೇರ್’ಅಭಿಯಾನ ಆರಂಭ: ಕರ್ನಾಟಕದ ಮೂರು ಪ್ರಾಣಿ ಕಲ್ಯಾಣ ಸಂಸ್ಥೆಗಳ ಜತೆಗೆ ವಂತಾರಾ ಪಾಲುದಾರಿಕೆಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದವರಿಗೆ ₹1 ಕೋಟಿ, ಬೆಳ್ಳಿ ಗೆದ್ದವರಿಗೆ ₹75 ಲಕ್ಷ ನಗದು ಬಹುಮಾನ: ಸಿಎಂ ಘೋಷಣೆ