LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಟೀಮ್ ಇಂಡಿಯಾ ವಿರುದ್ಧದ ಸರಣಿಗೆ ಕಿವೀಸ್ ಡಬಲ್ ಪ್ಲಾನ್: ಎರಡು ಬೇರೆ ಬೇರೆ ಏಕದಿನ ತಂಡಗಳನ್ನು ಘೋಷಿಸಿದ ನ್ಯೂಜಿಲ್ಯಾಂಡ್!

ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಶೀಘ್ರದಲ್ಲೇ ಆರಂಭವಾಗಲಿರುವ ಐದು ಪಂದ್ಯಗಳ ಬಹುನಿರೀಕ್ಷಿತ ಏಕದಿನ ಸರಣಿಗಾಗಿ ಕಿವೀಸ್ ಕ್ರಿಕೆಟ್ ಮಂಡಳಿಯು ಎರಡು ಪ್ರತ್ಯೇಕ ತಂಡಗಳನ್ನು ಘೋಷಣೆ ಮಾಡಿದೆ. ತಂಡದ ನಾಯಕತ್ವವನ್ನು ಆಲ್ರೌಂಡರ್ ಮಿಚೆಲ್ ಸ್ಯಾಂಟ್ನರ್ ಅವರಿಗೆ ವಹಿಸಲಾಗಿದ್ದು, ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಯುವ ಆಟಗಾರ ರಚಿನ್ ರವೀಂದ್ರ ಪ್ರಮುಖ ತಂಡಕ್ಕೆ ಮರಳಿದ್ದಾರೆ. ಜೊತೆಗೆ ಸ್ಪೋಟಕ ಬ್ಯಾಟರ್ ಫಿನ್ ಅಲೆನ್, ವೇಗಿ ಲೋಕಿ ಫಾರ್ಗುಸನ್ ಹಾಗೂ ಟಿಮ್ ಸೀಫರ್ಟ್ ಕೂಡ ಏಕದಿನ ತಂಡಕ್ಕೆ ಮರಳಿರುವುದು ಕಿವೀಸ್ ಪಡೆಗೆ ಹೆಚ್ಚಿನ ಬಲ ತಂದುಕೊಟ್ಟಿದೆ.

ಈ ಹಿಂದೆ ಭಾರತದ ನೆಲದಲ್ಲೇ ನಡೆದ ಏಕದಿನ ಸರಣಿಯಲ್ಲಿ ಭರ್ಜರಿ ಜಯ ಸಾಧಿಸಿ ಇತಿಹಾಸ ನಿರ್ಮಿಸಿದ್ದ ನ್ಯೂಜಿಲ್ಯಾಂಡ್ ತಂಡವು, ಈ ಬಾರಿಯೂ ಅದೇ ರೀತಿಯ ಸಫಲತೆಯನ್ನು ಮುಂದುವರಿಸುವ ಗುರಿ ಹೊಂದಿದೆ. ನವೆಂಬರ್ 4ರಿಂದ ಆಕ್ಲೆಂಡ್‌ನಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಅದಕ್ಕೂ ಮುನ್ನ ಎರಡೂ ತಂಡಗಳ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಮುಂಬರುವ ಟೆಸ್ಟ್ ಸರಣಿಯ ಸಿದ್ಧತೆಯ ಭಾಗವಾಗಿ ಕೊನೆಯ ಎರಡು ಏಕದಿನ ಪಂದ್ಯಗಳಿಗೆ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಹೊಸ ಆಟಗಾರರನ್ನು ಸೇರ್ಪಡೆಗೊಳಿಸಲು ನಿರ್ಧರಿಸಲಾಗಿದೆ.

ತಂಡದ ವಿವರಣೆ ನೋಡುವುದಾದರೆ, ಮೊದಲ ಮೂರು ಏಕದಿನ ಪಂದ್ಯಗಳಿಗೆ ಡೆವೊನ್ ಕಾನ್ವೇ, ಟಾಮ್ ಲ್ಯಾಥಮ್, ಡೆರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್ ಮತ್ತು ಮ್ಯಾಟ್ ಹೆನ್ರಿ ಅವರಂತಹ ಪ್ರಮುಖ ಆಟಗಾರರು ಲಭ್ಯವಿರಲಿದ್ದಾರೆ. ಆದರೆ ನವೆಂಬರ್ ಕೊನೆಯಲ್ಲಿ ನಡೆಯಲಿರುವ ಟೆಸ್ಟ್ ಸರಣಿಗಾಗಿ ಈ ಹಿರಿಯ ಆಟಗಾರರು ಮೂರನೇ ಪಂದ್ಯದ ನಂತರ ವೆಲ್ಲಿಂಗ್ಟನ್‌ಗೆ ತೆರಳಲಿದ್ದಾರೆ. ಹೀಗಾಗಿ ನಾಲ್ಕು ಮತ್ತು ಐದನೇ ಪಂದ್ಯಗಳಿಗೆ ಕ್ರಿಸ್ಟಿಯನ್ ಕ್ಲಾರ್ಕ್, ಮ್ಯಾಟ್ ಫಿಶರ್, ಸಿಫರ್ಟ್ ಹಾಗೂ ಫಿನ್ ಅಲೆನ್ ಸೇರಿದಂತೆ ಯುವ ಪಡೆ ಕಣಕ್ಕಿಳಿಯಲಿದೆ.

ಮೊದಲ 3 ಪಂದ್ಯಗಳಿಗೆ ನ್ಯೂಜಿಲ್ಯಾಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚ್ಯಾಪ್‌ಮನ್, ಡೆವೊನ್ ಕಾನ್ವೇ, ಜೇಕಬ್ ಡಫ್ಫಿ, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಟಾಮ್ ಲ್ಯಾಥಮ್, ಡೆರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ನೇಥನ್ ಸ್ಮಿತ್, ವಿಲ್ ಯಂಗ್, ಬ್ಲೇರ್ ಟಿಕ್ನರ್.

ಕೊನೆಯ 2 ಪಂದ್ಯಗಳಿಗೆ ನ್ಯೂಜಿಲ್ಯಾಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚ್ಯಾಪ್‌ಮನ್, ಕ್ರಿಸ್ಟಿಯನ್ ಕ್ಲಾರ್ಕ್, ಜೇಕಬ್ ಡಫ್ಫಿ, ಮ್ಯಾಟ್ ಫಿಶರ್, ಲೋಕಿ ಫಾರ್ಗುಸನ್, ಮಿಚ್ ಹ್ಯಾ, ನಿಕ್ ಕೆಲ್ಲಿ, ಟಿಮ್ ಸೀಫರ್ಟ್,ಬ್ಲೇರ್ ಟಿಕ್ನರ್, ವಿಲ್ ಯಂಗ್.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯುವಜನತೆಗೆ ಶಿಕ್ಷಣದ ಜೊತೆ ಸಂಸ್ಕಾರ ನೀಡಿ: ಸಾಗರದಲ್ಲಿ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಕರೆನಮ್ಮ ಮೆಟ್ರೋ 'ಪಿಂಕ್ ಲೈನ್‌'ಗೆ BMTC ಫೀಡರ್ ಬಸ್ ಸೇವೆ: ಕಿಕ್ಕಿರಿದ ರಸ್ತೆಗಳಿಗಾಗಿ 7 ಮೀಟರ್ ಮಿನಿ ಬಸ್‌ಗಳುಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವೈದ್ಯಕೀಯ, ಇಂಜಿನಿಯರಿಂಗ್‌ನಲ್ಲಿ ಶೇ.7.5ರಷ್ಟು ಮೀಸಲಾತಿ ಜಾರಿ: ಸಚಿವ ಮಧು ಬಂಗಾರಪ್ಪಬ್ರಾಹ್ಮಣ ಮಂಡಳಿ ನಿರ್ದೇಶಕರ ಕಡೆಗಣನೆ: ಶಿವಮೊಗ್ಗ ಪಾಲಿಕೆ ಆಯುಕ್ತರ ವಿರುದ್ಧ ಮಾಲತೇಶ್ ಅಸಮಾಧಾನದಸರಾ ಆಮಂತ್ರಣದಲ್ಲಿ ಶಿಷ್ಟಾಚಾರ ಉಲ್ಲಂಘನೆ: ಶಿವಮೊಗ್ಗ ಪಾಲಿಕೆ ಆಯುಕ್ತರ ವಿರುದ್ಧ ಸಿಎಂಗೆ ದೂರು ನೀಡಲು ಮಾಲತೇಶ್ ನಿರ್ಧಾರಸಾಗರದ ಹೊಸಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು: ಮುಗಿಲು ಮುಟ್ಟಿದ ಪೋಷಕರ ಆಕ್ರಂದನಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಖ್ಯಾತ ನಟ ನಾನಾ ಪಾಟೇಕರ್ ಸಾವಿನ ಕಾರಣ: ಹೃದಯಾಘಾತ ದೃಢಪಡಿಸಿದ ವೈದ್ಯರುಅಜ್ಜಿ ಮರಣದ ನಂತರ ಮನೆಗೆ ಮರಳಲು ನಿರಾಕರಿಸಿದ್ರಾ ಅಭಿಜೀತ್ ದೀಪ್ಕೆ..?: ವಿಡಿಯೋ ಬಿಡುಗಡೆ ಮಾಡಿದ ದೆಹಲಿ ಪೊಲೀಸರುಸಂಭೋಗ ಮತ್ತು ಯೋಗದ ನಡುವಿನ ಸಂಬಂಧ ಏನು? ಇಲ್ಲಿದೆ ಓದಿ!ಪದವೀಧರರಿಗೆ ಗುಡ್ ನ್ಯೂಸ್: ರೈಲ್ವೆ ನೇಮಕಾತಿ ಮಂಡಳಿಯಿಂದ 3,548 ಪದವೀಧರ ಮಟ್ಟದ ಹುದ್ದೆಗಳ ನೇಮಕ