LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮನ್ಯುಸೂಕ್ತ ಪಠಣದಿಂದ ಆಂತರಿಕ, ಬಾಹ್ಯ ಶತ್ರುಗಳ ನಾಶ: ಸಾಗರದಲ್ಲಿ ಬಾಳಗಾರು ಜಯತೀರ್ಥಾಚಾರ್

ಸಾಗರ: ಶ್ರೀ ಉತ್ತರಾದಿ ಮಠದ ಪೀಠಾಧಿಪತಿಗಳಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆರೋಗ್ಯ ಪೂರ್ಣ ಸುಧಾರಣೆಗಾಗಿ ನಗರದ ಮಾಧ್ವ ಸಂಘದ ಆಶ್ರಯದಲ್ಲಿ ಸ್ಥಳೀಯ ಮಧ್ವ ಮಂದಿರದಲ್ಲಿ ಆಯೋಜಿಸಲಾಗಿದ್ದ ಸಪ್ತಾಹದ ಮನ್ಯುಸೂಕ್ತ ಪಠಣ ಹಾಗೂ ಹೋಮವು ಭಕ್ತಿಭಾವದಿಂದ ಸಂಪನ್ನಗೊಂಡಿತು.

​ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧಾರ್ಮಿಕ ವಿಧಿವಿಧಾನ ನೆರವೇರಿಸಿ ಮಾತನಾಡಿದ ಉತ್ತರಾದಿ ಮಠದ ಶಿವಮೊಗ್ಗ ಜಿಲ್ಲಾ ದಿವಾನರಾದ ಪಂಡಿತ ಬಾಳಗಾರು ಜಯತೀರ್ಥಾಚಾರ್ ಅವರು, "ಋಗ್ವೇದದ ಮನ್ಯುಸೂಕ್ತವು ಅತ್ಯಂತ ಶಕ್ತಿಶಾಲಿಯಾದ ಮಂತ್ರವಾಗಿದ್ದು, ಇದು ವ್ಯಕ್ತಿಯಲ್ಲಿರುವ ಕಾಮ, ಕ್ರೋಧ, ಮದ, ಮತ್ಸರಗಳಂತಹ ಆಂತರಿಕ ದೋಷಗಳನ್ನು ಹಾಗೂ ಬಾಹ್ಯ ಅಡೆತಡೆಗಳನ್ನು ನಿವಾರಿಸಿ ದೈವಿಕ ಬಲ ಮತ್ತು ಧೈರ್ಯವನ್ನು ನೀಡುತ್ತದೆ" ಎಂದರು.

news_1791723890_0_670.webp

​ಮುಂದುವರಿದು ಮಾತನಾಡಿದ ಅವರು, "ಸಮಾಜ ಮತ್ತು ರಾಷ್ಟ್ರದ ಹಿತಚಿಂತನೆಯಲ್ಲಿ ಸದಾ ತೊಡಗಿರುವ ಗುರುಗಳು ಮತ್ತು ಯೋಧರ ಯೋಗಕ್ಷೇಮವನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಇತ್ತೀಚೆಗಷ್ಟೇ ಧಾರವಾಡದಲ್ಲಿ ಶ್ರೀಗಳ ಚಾತುರ್ಮಾಸ್ಯ ವ್ರತವು ಭಕ್ತರ ಸಹಕಾರದೊಂದಿಗೆ ಯಶಸ್ವಿಯಾಗಿ ನೆರವೇರಿದೆ. ಪ್ರಸ್ತುತ ಭಕ್ತರ ಪ್ರಾರ್ಥನೆ ಮತ್ತು ಭಗವಂತನ ಕೃಪೆಯಿಂದ ಶ್ರೀಗಳು ಚೇತರಿಸಿಕೊಂಡು ಎಂದಿನಂತೆ ನಿತ್ಯಪೂಜೆಗಳನ್ನು ನೆರವೇರಿಸುತ್ತಿದ್ದಾರೆ. ವೈದ್ಯರ ಸಲಹೆಯಂತೆ ಸದ್ಯ ವಿಶ್ರಾಂತಿ ಪಡೆಯುತ್ತಿದ್ದು, ಶೀಘ್ರದಲ್ಲೇ ಎಂದಿನಂತೆ ತಮ್ಮ ಸಂಚಾರವನ್ನು ಆರಂಭಿಸಲಿದ್ದಾರೆ. ಮಠಕ್ಕೆ ಜ್ಞಾನದಷ್ಟೇ ಭಕ್ತವೃಂದವೂ ಅಮೂಲ್ಯ ಸಂಪತ್ತಾಗಿದ್ದು, ನಮ್ಮ ಮುಂದಿನ ಪೀಳಿಗೆಗೆ ಬಾಲ್ಯದಲ್ಲೇ ಧಾರ್ಮಿಕ ಆಚಾರ-ವಿಚಾರಗಳ ಸಂಸ್ಕಾರ ನೀಡಬೇಕಿದೆ" ಎಂದು ಕರೆ ನೀಡಿದರು.

​ಕಳೆದ ಒಂದು ವಾರದಿಂದ ಮಧ್ವ ಮಂದಿರದಲ್ಲಿ ಮನ್ಯುಸೂಕ್ತ ಪಾರಾಯಣ ನಡೆಯುತ್ತಿದ್ದು, ಭಾನುವಾರ ಪೂರ್ಣಾಹುತಿಯೊಂದಿಗೆ ಹೋಮ ಮುಕ್ತಾಯಗೊಂಡಿತು. ಹೋಮದ ಯಜಮಾನತ್ವವನ್ನು ಎಚ್.ಆರ್. ನಾಗಭೂಷಣ್ ದಂಪತಿ ವಹಿಸಿದ್ದರು.

​ಕಾರ್ಯಕ್ರಮದಲ್ಲಿ ಮಾಧ್ವ ಸಂಘದ ಅಧ್ಯಕ್ಷ ವೆಂಕಟೇಶ್ ಕಟ್ಟಿ, ಡಾ. ಗುರುರಾಜ ಕಲ್ಲಾಪುರ್, ಆನಂದ ಕಲ್ಯಾಣಿ, ವೈ. ಮೋಹನ್, ಶ್ರೀಶಾಚಾರ್, ಶಾಂತಮೂರ್ತಿ, ಬದರಿನಾಥ್, ದೀಪಕ್ ಕಲ್ಯಾಣಿ, ಮೋಹನ ಅಳಗಂಬಟ್ ಸೇರಿದಂತೆ ಸಮುದಾಯದ ಮುಖಂಡರು ಹಾಗೂ ಭಕ್ತರು ಉಪಸ್ಥಿತರಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯುವಜನತೆಗೆ ಶಿಕ್ಷಣದ ಜೊತೆ ಸಂಸ್ಕಾರ ನೀಡಿ: ಸಾಗರದಲ್ಲಿ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಕರೆನಮ್ಮ ಮೆಟ್ರೋ 'ಪಿಂಕ್ ಲೈನ್‌'ಗೆ BMTC ಫೀಡರ್ ಬಸ್ ಸೇವೆ: ಕಿಕ್ಕಿರಿದ ರಸ್ತೆಗಳಿಗಾಗಿ 7 ಮೀಟರ್ ಮಿನಿ ಬಸ್‌ಗಳುಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವೈದ್ಯಕೀಯ, ಇಂಜಿನಿಯರಿಂಗ್‌ನಲ್ಲಿ ಶೇ.7.5ರಷ್ಟು ಮೀಸಲಾತಿ ಜಾರಿ: ಸಚಿವ ಮಧು ಬಂಗಾರಪ್ಪಬ್ರಾಹ್ಮಣ ಮಂಡಳಿ ನಿರ್ದೇಶಕರ ಕಡೆಗಣನೆ: ಶಿವಮೊಗ್ಗ ಪಾಲಿಕೆ ಆಯುಕ್ತರ ವಿರುದ್ಧ ಮಾಲತೇಶ್ ಅಸಮಾಧಾನದಸರಾ ಆಮಂತ್ರಣದಲ್ಲಿ ಶಿಷ್ಟಾಚಾರ ಉಲ್ಲಂಘನೆ: ಶಿವಮೊಗ್ಗ ಪಾಲಿಕೆ ಆಯುಕ್ತರ ವಿರುದ್ಧ ಸಿಎಂಗೆ ದೂರು ನೀಡಲು ಮಾಲತೇಶ್ ನಿರ್ಧಾರಸಾಗರದ ಹೊಸಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು: ಮುಗಿಲು ಮುಟ್ಟಿದ ಪೋಷಕರ ಆಕ್ರಂದನಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಖ್ಯಾತ ನಟ ನಾನಾ ಪಾಟೇಕರ್ ಸಾವಿನ ಕಾರಣ: ಹೃದಯಾಘಾತ ದೃಢಪಡಿಸಿದ ವೈದ್ಯರುಅಜ್ಜಿ ಮರಣದ ನಂತರ ಮನೆಗೆ ಮರಳಲು ನಿರಾಕರಿಸಿದ್ರಾ ಅಭಿಜೀತ್ ದೀಪ್ಕೆ..?: ವಿಡಿಯೋ ಬಿಡುಗಡೆ ಮಾಡಿದ ದೆಹಲಿ ಪೊಲೀಸರುಸಂಭೋಗ ಮತ್ತು ಯೋಗದ ನಡುವಿನ ಸಂಬಂಧ ಏನು? ಇಲ್ಲಿದೆ ಓದಿ!ಪದವೀಧರರಿಗೆ ಗುಡ್ ನ್ಯೂಸ್: ರೈಲ್ವೆ ನೇಮಕಾತಿ ಮಂಡಳಿಯಿಂದ 3,548 ಪದವೀಧರ ಮಟ್ಟದ ಹುದ್ದೆಗಳ ನೇಮಕ