LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶಿವಪುರ ಧ್ವಜ ಸತ್ಯಾಗ್ರಹ ಸೌಧವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಅಗತ್ಯ ಕ್ರಮ: ಮದ್ದೂರು ಶಾಸಕ ಕೆ.ಎಂ.ಉದಯ್

ಮಂಡ್ಯ :  ಸ್ವಾತಂತ್ರ್ಯ ಹೋರಾಟದ ಕುರುಹು ಶಿವಪುರ ಧ್ವಜ ಸತ್ಯಾಗ್ರಹ ಸೌಧವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ಮದ್ದೂರು ನಗರದ ಶಿವಪುರದ ಧ್ವಜ ಸತ್ಯಾಗ್ರಹ ಸೌಧದ ಆವರಣದಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 2 ಕೋಟಿ ರೂ. ವೆಚ್ಚದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಹಲವು ವರ್ಷಗಳಿಂದ ಸಾಕಷ್ಟು ಶಿಥಿಲಗೊಂಡಿದ್ದ ಧ್ವಜ ಸತ್ಯಾಗ್ರಹ ಸೌಧವನ್ನು ಅಭಿವೃದ್ಧಿಗೊಳಿಸುವಂತೆ ಸಾಕಷ್ಟು ಹೋರಾಟ, ಒತ್ತಡ ಹಾಗೂ ಹತ್ತಾರು ಮನವಿಗಳು ಸಲ್ಲಿಕೆಗಳಾಗಿದ್ದವು. ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ಹೊಸ ರೂಪ ನೀಡುವ ಜೊತೆಗೆ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕೆಂದು ತೀರ್ಮಾನಿಸಿ ಸಂಬಂಧ ಪಟ್ಟ ಸಚಿವರಿಗೆ ಮನವಿ ಸಲ್ಲಿಸಿ ಮೊದಲ ಹಂತವಾಗಿ 2 ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಲಾಗಿದೆ‌. ಈ ಅನುದಾನದಲ್ಲಿ ಸತ್ಯಾಗ್ರಹ ಸೌಧಕ್ಕೆ ಸಂಬಂಧಿಸಿದ ಕೆಲವು ಕಾಮಗಾರಿಗಳು ಸೇರಿದಂತೆ ಸೌಧದ ಬಳಿಯಿರುವ ಅನೆಕ್ಸ್ ಕಟ್ಟಡವನ್ನು ಅಭಿವೃದ್ಧಿಪಡಿಸಿ ಸೂಕ್ತ ನಿರ್ವಹಣೆಯಾಗುವಂತೆ ಮಾಡಿ ಆ ಮೂಲಕ ಸರ್ಕಾರಿ, ಸಂಘ ಸಂಸ್ಥೆಗಳ ವಿವಿಧ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವಂತೆ ಮಾಡಲಾಗುವುದು ಎಂದರು.

ಅಷೇ ಅಲ್ಲದೆ ಸೌಧದ ಆವರಣದಲ್ಲಿರುವ ಹಲವಾರು ವರ್ಷಗಳಿಂದ ತುಕ್ಕು ಹಿಡಿದು ಹಾಗಿಯೇ ಇರುವ ಸಂಗೀತಾ ಕಾರಂಜಿಯನ್ನು ದುರಸ್ಥಿ ಪಡಿಸಿ ಅಭಿವೃದ್ದಿ ಪಡಿಸುವುದರಿಂದ ದಿನನಿತ್ಯ ನಗರ ಸೇರಿದಂತೆ ಹಲವಾರು ಕಡೆಗಳಿಂದ ಆಗಮಿಸುವ ಜನರನ್ನು ಆಕರ್ಷಿಸುವ ಮೂಲಕ ನೆಚ್ಚಿನ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ಸರ್ಕಾರದಿಂದ ಇನ್ನಷ್ಟು ಅನುದಾನ ತಂದು ಬಾಕಿ ಉಳಿಯುವ ಹಲವು ಅಭಿವೃದ್ಧಿ ಕೆಲಸಗಳನ್ನು ಕೂಡ ಮಾಡುವ ಮೂಲಕ ಸತ್ಯಗ್ರಹ ಸೌಧದ ಸಮಗ್ರ ಅಭಿವೃದ್ದಿಯ ಗುರಿ ಹೊಂದಲಾಗಿದೆ ಎಂದರು.

ಸತ್ಯಾಗ್ರಹ ಸೌಧದ ಸಮಗ್ರ ಅಭಿವೃದ್ಧಿಯ ಜತೆಗೆ ಪ್ರತಿಷ್ಠಾನ ಸ್ಥಾಪಿಸುವ ಸಂಬಂಧ ಈಗಾಗಲೇ ಸರ್ಕಾರದೊಂದಿಗೆ ಪತ್ರ ವ್ಯವಹಾರ ಮಾಡಿದ್ದು, ಶೀಘ್ರವಾಗಿ ಪ್ರತಿಷ್ಠಾನ ಕೂಡ ಸ್ಥಾಪಿಸಲಾಗುವುದು ಎಂದರು.

ಇನ್ನು ನಗರದ ಮಹತ್ವಾಕಾಂಕ್ಷೆ ಯೋಜನೆಯಯಾದ ಪೇಟೆ ಬೀದಿಯ ರಸ್ತೆ ಅಗಲೀಕರಣ ಕಾಮಗಾರಿಯೂ ಇಷ್ಟರಲ್ಲೆ ಪ್ರಾರಂಭಿಸಲಾಗುವುದು ಎಂದ ಅವರು, ಇನ್ನೆರಡು ತಿಂಗಳೊಳಗಾಗಿ ಭೂ ಪರಿಹಾರ ನೀಡಿದ ಬಳಿಕ ಭೂ ಸ್ವಾಧೀನ ಮಾಡಿಕೊಂಡ ನಂತರ ರಸ್ತೆ ಕಾಮಗಾರಿ ತ್ವರಿತಗತಿಯಲ್ಲಿ ಆರಂಭಿಸಲಾಗುವುದು ಎಂದರು.

ಈ ವೇಳೆ ಮನ್ಮುಲ್ ಅಧ್ಯಕ್ಷ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೆಶಕ ಪಿ.ಸಂದರ್ಶ, ನಗರಸಭಾ ಮಾಜಿ ಅಧ್ಯಕ್ಷೆ ಕೋಕಿಲಾ ಅರುಣ್, ಮಾಜಿ ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಮಾಜಿ ಸದಸ್ಯರಾದ ವನಿತಾ, ಸಿದ್ದರಾಜು, ಬಸವರಾಜು,  ಶಾಂತಮ್ಮ, ತಾಲೂಕು ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶಂಕರೇಗೌಡ, ಟಿಎಪಿಸಿಎಂಎಸ್ ನಿರ್ದೆಶಕ ಮರಿದೇವರು,  ಮುಖಂಡರಾದ ಜಿ‌.ಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಪ್ರೊ.ಕೃಷ್ಣ, ಸಿ.ಅಪೂರ್ವಚಂದ್ರ, ಕಸಾಪ ತಾಲೂಕು ಅಧ್ಯಕ್ಷ ಸುನಿಲ್ ಕುಮಾರ್, ಪಣ್ಣೆದೊಡ್ಡಿ ಹರ್ಷ, ಅಜ್ಜಹಳ್ಳಿ ಮನು, ಅರುವನಹಳ್ಳಿ ಸಿದ್ದರಾಜು, ಆರೀಫ್ ಪಾಷಾ, ಎಂ.ಡಿ.ಮಹಾಲಿಂಗಯ್ಯ, ಮಹದೇವಯ್ಯ, ಮೋಹನ್, ಕೀರ್ತಿ, ಇಂತಿಯಾಜ್ ಉಲ್ಲಾಖಾನ್ ಸೇರಿದಂತೆ ಇತರರು ಇದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಪವಾಗಿ ಕೆಲಸ ಮಾಡುತ್ತಿರುವ ಸರ್ಕಾರಿ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ: ಛಲವಾದಿ ನಾರಾಯಣಸ್ವಾಮಿಶಿವಪುರ ಧ್ವಜ ಸತ್ಯಾಗ್ರಹ ಸೌಧವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಅಗತ್ಯ ಕ್ರಮ: ಮದ್ದೂರು ಶಾಸಕ ಕೆ.ಎಂ.ಉದಯ್ಗಡಿ ನಿಯಂತ್ರಣ ರೇಖೆ ಮೂಲಕ ಒಳನುಸುಳಲು ಯತ್ನಿಸುತ್ತಿದ್ದ ನಾಲ್ವರು ಉಗ್ರರು ನೆಲಬಾಂಬ್ ಸ್ಫೋಟದಲ್ಲಿ ಸಾವುBREAKING: 6 ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಕ: ಕರ್ನಾಟಕ ಗವರ್ನರ್ ಆಗಿ ಡಾ. ಸುಧಾ ಯಾದವ್BIG BREAKING: ಕರ್ನಾಟಕ ಸೇರಿ 6 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಿಸಿ ರಾಷ್ಟ್ರಪತಿ ಆದೇಶBREAKING: ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ನೇಮಕ | Dr.Sudha YadavBIG BREAKING: ಕರ್ನಾಟಕ ಸೇರಿ 6 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕಮತಗಳ್ಳತನದ ವಿರುದ್ಧ ಕರ್ನಾಟಕದಲ್ಲಿ ತನಿಖೆ ಮುಂದುವರೆಸುತ್ತೇವೆ: ಸಿಎಂ ಡಿ ಕೆ ಶಿವಕುಮಾರ್BREAKING: ಬೆಂಗಳೂರಲ್ಲಿ ಮೆಟ್ರೋ ರೈಲು ಹಳಿ ಮೇಲೆ ಹಾರಿ ಆತ್ಮಹತ್ಯೆಗೆ ಯತ್ನ, ಕೆಲ ಕಾಲ ಸಂಚಾರ ಸ್ಥಗಿತನಿಮ್ಮ ಕೈ ಮತ್ತು ತೋಳುಗಳು ಬಲ ಕಳೆದುಕೊಳ್ಳುತ್ತಿದೆಯೇ? ಇದು ಪ್ಯಾರೆಸಿಸ್ ಆಗಿರಬಹುದು; ಏನಿದರ ಲಕ್ಷಣ? ಇಲ್ಲಿದೆ ಸಂಪೂರ್ಣ ಮಾಹಿತಿ