LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೆಂಪು ಸೀರೆಯಲ್ಲಿ ಕಂಗೊಳಿಸಿದ ನಟಿ ತ್ರಿಶಾ ಕೃಷ್ಣನ್: ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

ಸಾಂಪ್ರದಾಯಿಕ ಉಡುಪಿನಲ್ಲಿ ಸದಾ ಆಕರ್ಷಕವಾಗಿ ಕಾಣಿಸಿಕೊಳ್ಳುವ ಖ್ಯಾತ ನಟಿ ತ್ರಿಶಾ ಕೃಷ್ಣನ್, ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹೊಸ ಫೋಟೋಗಳು ಅಭಿಮಾನಿಗಳ ಮನಗೆದ್ದಿವೆ. ಕೆಂಪು ಬಣ್ಣದ ಸೀರೆಯಲ್ಲಿ ಅವರು ಕ್ಯಾಮೆರಾಕ್ಕೆ ನೀಡಿರುವ ಪೋಸ್ ಸದ್ಯ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

‘ಲವ್ ಅಂಡ್ ಲೈಟ್’ ಎಂಬ ಕ್ಯಾಪ್ಷನ್‌ನೊಂದಿಗೆ ನಟಿ ತ್ರಿಶಾ ಕೃಷ್ಣನ್ ಈ ಸುಂದರ ಚಿತ್ರವನ್ನು ಹಂಚಿಕೊಂಡಿದ್ದು, ಸೀರೆಯಲ್ಲಿ ಕಂಗೊಳಿಸುತ್ತಿದ್ದಾರೆ. ಚಿನ್ನದ ಜರಿ ಕೆಲಸ ಹಾಗೂ ತೆಳುವಾದ ಬಾರ್ಡರ್ ಹೊಂದಿರುವ ಆಕರ್ಷಕ ಕೆಂಪು ಸೀರೆಗೆ ತಕ್ಕಂತೆ ಮ್ಯಾಚಿಂಗ್ ಬ್ಲೌಸ್ ಧರಿಸಿದ್ದಾರೆ. ಕೈಗಳು ಹಾಗೂ ಕುತ್ತಿಗೆಯ ಭಾಗದಲ್ಲಿ ಗೋಲ್ಡನ್ ಜರ್ಡೋಸಿ ವಿನ್ಯಾಸವಿರುವ ಬ್ಲೌಸ್ ಅವರ ಲುಕ್ ಅನ್ನು ಮತ್ತಷ್ಟು ಹೆಚ್ಚಿಸಿದೆ.

ಸಾಂಪ್ರದಾಯಿಕ ಶೈಲಿಗೆ ತಕ್ಕಂತೆ ಮಧ್ಯದಲ್ಲಿ ತಲೆಬಾಚಿ ಕೇಶವಿನ್ಯಾಸ ಮಾಡಿಕೊಂಡಿರುವ ಅವರು, ಮುಡಿಯಲ್ಲಿ ಮಲ್ಲಿಗೆ ಹೂವುಗಳನ್ನು ಮುಡಿದ್ದಾರೆ. ಕಣ್ಣುಗಳಿಗೆ ಕಾಡಿಗೆ, ಕೆನ್ನೆಗೆ ಲೈಟ್ ಬ್ಲಶ್, ಹಣೆಯ ಮೇಲೆ ಪುಟ್ಟ ಕೆಂಪು ಬಿಂದಿ ಹಾಗೂ ತುಟಿಗಳಿಗೆ ಕೆಂಪು ಬಣ್ಣದ ಲಿಪ್‌ಸ್ಟಿಕ್ ಧರಿಸಿ ಸರಳವಾದರೂ ಆಕರ್ಷಕ ಮೇಕಪ್‌ನಲ್ಲಿ ಕಂಗೊಳಿಸಿದ್ದಾರೆ. ಜುಮುಕಿ ಹಾಗೂ ಉಂಗುರವನ್ನು ಧರಿಸಿ ತಮ್ಮ ಅಂದವನ್ನು ಪರಿಪೂರ್ಣಗೊಳಿಸಿಕೊಂಡಿದ್ದಾರೆ. ತ್ರಿಶಾ ಅವರ ಈ ಹೊಸ ಲುಕ್‌ಗೆ ಸ್ಟೈಲಿಸ್ಟ್ ಏಕಾ ಲಖಾನಿ ಸೇರಿದಂತೆ ಲಕ್ಷಾಂತರ ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
‘ಪ್ರೇಮದ ಊರಲಿ’ ಚಿತ್ರದ ಟಿವಿ ಹಾಗೂ OTT ಪ್ರಸಾರ ಹಕ್ಕುಗಳ ಕುರಿತು ಚಿತ್ರ ತಂಡದಿಂದ ಅಧಿಕೃತ ಸ್ಪಷ್ಟನೆಮುಂದಿನ ವಾರ ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರು, ಕೇಂದ್ರದ ಅಧಿಕಾರಿಗಳ ಸಭೆ: ಸಿಎಂ ಡಿ ಕೆ ಶಿವಕುಮಾರ್BREAKING: ಕೊಡಗಿನ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ: ತೀರ್ಥರೂಪಿಣಿಯಾಗಿ 'ಕಾವೇರಿ ಮಾತೆ' ದರ್ಶನ | Talakaveriಮಾಯಾ ಜಿಂಕೆಯಂತೆ ಬಣ್ಣ ಬದಲಿಸುತ್ತಾ ಮಾರುಕಟ್ಟೆಗೆ ಲಗ್ಗೆ ಇಟ್ಟ ರಾಯಲ್ ಎನ್ ಫೀಲ್ಡ್: ಕ್ಲಾಸಿಕ್ 650 ಹೈಪರ್‌ಶಿಫ್ಟ್ ಎಡಿಷನ್ ಬಿಡುಗಡೆನೀವು ಅನಾರೋಗ್ಯದಿಂದ ಬಳಲುತ್ತೀದ್ದೀರಾ? ಈ ಮಂತ್ರ ಪಠಿಸಿ ನೋಡಿ, ಆರೋಗ್ಯ ವೃದ್ಧಿ ಗ್ಯಾರಂಟಿBREAKING: ವಿಧಾನ ಪರಿಷತ್ ಚುನಾವಣೆ ಹಿನ್ನಲೆ: ಅ.23ರಂದು ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರುಸಿದ್ದರಾಮಯ್ಯ ಅವರೇ ನಿಮ್ಮ ರಕ್ತ ಕುದಿಯುತ್ತಿಲ್ವಾ?: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನೆಅರ್ಥಪೂರ್ಣವಾಗಿ ವಾಲ್ಮೀಕಿ ಜಯಂತಿ ಆಚರಿಸಲು ನಿರ್ಧಾರ: ಸಚಿವ ಟಿ.ರಘುಮೂರ್ತಿರಾಜ್ಯ ಸರ್ಕಾರದಿಂದ 8 IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ | IAS Officer Transferಸಾಗರದಲ್ಲಿ ಶೇ.60 ಕನ್ನಡ ನಾಮಫಲಕ ಕಡ್ಡಾಯಕ್ಕೆ ಜಮೀಲ್ ಸಾಗರ್ ಆಗ್ರಹ: ಎಸಿಗೆ ಮನವಿ