LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಮಾದೇವಿ ಮಾದರಿಯಲ್ಲಿ ರಾಜಭವನ ಮುಕ್ತಗೊಳಿಸಿ: ರಾಜ್ಯಪಾಲರಿಗೆ ರಮೇಶ್ ಬಾಬು ಬಹಿರಂಗ ಪತ್ರ

ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿರುವ ಡಾ. ಸುಧಾ ಯಾದವ್ ಅವರಿಗೆ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯ ರಮೇಶ್ ಬಾಬು ಅವರು ಬಹಿರಂಗ ಪತ್ರ ಬರೆದಿದ್ದಾರೆ. ಸಂವಿಧಾನಿಕ ಮೌಲ್ಯಗಳ ಸಂರಕ್ಷಣೆ, ಚುನಾಯಿತ ಸರ್ಕಾರದ ಜನಾದೇಶಕ್ಕೆ ಮನ್ನಣೆ, ಸಾಮಾಜಿಕ ನ್ಯಾಯದ ಪಾಲನೆ ಹಾಗೂ ಲೋಕಭವನವನ್ನು (ರಾಜಭವನ) ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ ಪತ್ರದ ಮೂಲಕ ಅವರು ಒತ್ತಾಯಿಸಿದ್ದಾರೆ.

ಪ್ರಜಾಸತ್ತಾತ್ಮಕ ಮೌಲ್ಯಗಳ ಬಲವರ್ಧನೆಗೆ ನಿರೀಕ್ಷೆ

ರಾಜ್ಯಪಾಲರ ಸುದೀರ್ಘ ಸಾರ್ವಜನಿಕ ಮತ್ತು ಪ್ರಜಾಸತ್ತಾತ್ಮಕ ಅನುಭವವನ್ನು ಶ್ಲಾಘಿಸಿರುವ ರಮೇಶ್ ಬಾಬು, "ಕರ್ನಾಟಕವು ಪ್ರಗತಿಪರ ಚಿಂತನೆ ಹಾಗೂ ಸಾಮಾಜಿಕ ನ್ಯಾಯದ ಶ್ರೀಮಂತ ಪರಂಪರೆಯನ್ನು ಹೊಂದಿದೆ. ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿ ಈ ಮೌಲ್ಯಗಳನ್ನು ರಕ್ಷಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ. ನಿಮ್ಮ ಅಧಿಕಾರಾವಧಿಯಲ್ಲಿ ಸಂವಿಧಾನಿಕ ಮೌಲ್ಯಗಳು, ಸಾಮಾಜಿಕ ಸಾಮರಸ್ಯ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಮಗ್ರ ಅಭಿವೃದ್ಧಿ ಮತ್ತಷ್ಟು ಗಟ್ಟಿಯಾಗಲಿದೆ ಎಂಬ ನಿರೀಕ್ಷೆ ಜನಸಾಮಾನ್ಯರಲ್ಲಿದೆ" ಎಂದು ಹೇಳಿದ್ದಾರೆ.

ಅಹಿಂದ ಹಾಗೂ ದುರ್ಬಲ ವರ್ಗಗಳ ಆಶೋತ್ತರಗಳಿಗೆ ಧ್ವನಿ

ಕರ್ನಾಟಕದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ದಲಿತರು (ಅಹಿಂದ) ಹಾಗೂ ಆರ್ಥಿಕವಾಗಿ ದುರ್ಬಲ ಸಮುದಾಯಗಳ ಜನಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ ಎಂದು ನೆನಪಿಸಿರುವ ಅವರು, "ಈ ಸಮುದಾಯಗಳು ಕೇವಲ ಸರ್ಕಾರದ ಕಲ್ಯಾಣ ಯೋಜನೆಗಳನ್ನಷ್ಟೇ ಬಯಸುತ್ತಿಲ್ಲ; ಸಮಾನತೆ, ಸಾಂವಿಧಾನಿಕ ರಕ್ಷಣೆ, ಉದ್ಯೋಗ, ಶಿಕ್ಷಣ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳಲ್ಲಿ ಅರ್ಥಪೂರ್ಣ ಪ್ರಾತಿನಿಧ್ಯವನ್ನು ನಿರೀಕ್ಷಿಸುತ್ತಿವೆ. ಕಾರ್ಮಿಕರು, ರೈತರು, ಮಹಿಳೆಯರು ಸೇರಿದಂತೆ ಸಮಾಜದ ಪ್ರತಿಯೊಂದು ದುರ್ಬಲ ವರ್ಗದಲ್ಲೂ ರಾಜ್ಯಪಾಲರ ಕಚೇರಿಯು ಸಂಪೂರ್ಣ ವಿಶ್ವಾಸ ಮೂಡಿಸಬೇಕಿದೆ" ಎಂದು ಒತ್ತಿ ಹೇಳಿದ್ದಾರೆ.

ಒಕ್ಕೂಟ ವ್ಯವಸ್ಥೆ ಮತ್ತು ಚುನಾಯಿತ ಸರ್ಕಾರದ ಜನಾದೇಶಕ್ಕೆ ಗೌರವ

ರಾಜ್ಯಪಾಲರ ಸಾಂವಿಧಾನಿಕ ಜವಾಬ್ದಾರಿಗಳ ಬಗ್ಗೆ ಉಲ್ಲೇಖಿಸಿದ ಮಾಜಿ ಸದಸ್ಯರು, "ಇಂದಿನ ದಿನಗಳಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ಜನತೆಯ ನಂಬಿಕೆ ಉಳಿಯಲು ಸಾಂವಿಧಾನಿಕ ಕರ್ತವ್ಯಗಳನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸುವುದು ಅನಿವಾರ್ಯ. ಒಕ್ಕೂಟ ವ್ಯವಸ್ಥೆ, ಜಾತ್ಯತೀತತೆ ಮತ್ತು ಜನರಿಂದ ಆಯ್ಕೆಯಾದ ಸರ್ಕಾರದ ಜನಾದೇಶಕ್ಕೆ ಸಂಪೂರ್ಣ ಗೌರವ ನೀಡಬೇಕು. ಸಾಂವಿಧಾನಿಕ ಅಧಿಕಾರಗಳ ವಿಭಜನೆ ಹಾಗೂ ಸ್ಥಾಪಿತ ಪರಂಪರೆಗಳನ್ನು ಎತ್ತಿಹಿಡಿಯುವ ಮೂಲಕ ಪ್ರಜಾಪ್ರಭುತ್ವದ ಅಡಿಪಾಯವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು" ಎಂದು ಮನವಿ ಮಾಡಿದ್ದಾರೆ.

ರಮಾದೇವಿ ಮಾದರಿಯಲ್ಲಿ ಲೋಕಭವನ ಸಾರ್ವಜನಿಕರಿಗೆ ಮುಕ್ತವಾಗಲಿ

ರಾಜಭವನವು ಕೇವಲ ಸಾಂವಿಧಾನಿಕ ಕಚೇರಿ ಅಥವಾ ಅಧಿಕೃತ ನಿವಾಸವಾಗಿ ಉಳಿಯದೆ ಜನಸಾಮಾನ್ಯರ ಸಂಸ್ಥೆಯಾಗಬೇಕು ಎಂದು ಅಭಿಪ್ರಾಯಪಟ್ಟಿರುವ ಅವರು, ಮಾಜಿ ರಾಜ್ಯಪಾಲರಾದ ಶ್ರೀಮತಿ ವಿ.ಎಸ್. ರಮಾದೇವಿ ಅವರ ಅವಧಿಯ ಜನಸ್ನೇಹಿ ಹೆಜ್ಜೆಯನ್ನು ಸ್ಮರಿಸಿದ್ದಾರೆ. "ಕರ್ನಾಟಕದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ನಾಗರಿಕರು ಭೇಟಿ ನೀಡಲು ಅನುಕೂಲವಾಗುವಂತೆ ಲೋಕಭವನವನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಬೇಕು. ಇದು ಯುವಜನರಲ್ಲಿ ಸಾಂವಿಧಾನಿಕ ಅರಿವು ಮತ್ತು ಸಂಸ್ಥೆಗಳ ಮೇಲಿನ ಗೌರವವನ್ನು ಹೆಚ್ಚಿಸಲಿದೆ" ಎಂದು ತಿಳಿಸಿದ್ದಾರೆ.

ಸಾಂಸ್ಕೃತಿಕ ಅಸ್ಮಿತೆ ಹಾಗೂ ಮುಕ್ತ ಸಂವಾದಕ್ಕೆ ಕರೆ

ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ನೆಲದ ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ಜೊತೆಗೆ ಸಮಾಜ ಸುಧಾರಕರು, ಬುದ್ಧಿಜೀವಿಗಳು, ರೈತರು, ಮಹಿಳಾ ಸಂಘಟನೆಗಳು ಹಾಗೂ ನಾಗರಿಕ ಸಮಾಜದೊಂದಿಗೆ ಲೋಕಭವನವು ನಿರಂತರವಾಗಿ ಮುಕ್ತ ಸಂವಾದ ನಡೆಸುವ ವೇದಿಕೆಯಾಗಲಿ ಎಂದು ರಮೇಶ್ ಬಾಬು ಪತ್ರದಲ್ಲಿ ಆಶಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ತುಮಕೂರು ವಿಶ್ವವಿದ್ಯಾಲಯ ಬಳಿ ಚಿರತೆ ಪ್ರತ್ಯಕ್ಷ : ಆತಂಕದಲ್ಲಿ ಗ್ರಾಮಸ್ಥರು ದೊಡ್ಡ ಬ್ಯಾನರ್‌ಗಳ ಸಿನಿಮಾಗಳು ಹಾಗೂ ಭಾರೀ ಆಫರ್‌ಗಳನ್ನು ತಿರಸ್ಕರಿಸಿದ ನಟಿ ಚೈತ್ರಾ ಆಚಾರ್!ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಹೊಸ ಇತಿಹಾಸ: 100, 200 ಮೀಟರ್ ರೇಸ್‌ನಲ್ಲಿ ಪ್ರೀತಿ ಪಾಲ್‌ಗೆ ಬೆಳ್ಳಿ ಪದಕಚಾಮರಾಜನಗರ : ಆಯುಧ ಪೂಜೆಯ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಕಾಂಗ್ರೆಸ್ ಮುಖಂಡನ ಉದ್ಧಟತನ!ಗದಗ : ಕೇವಲ ಎರಡೂವರೆ ಲಕ್ಷಕ್ಕೆ ಸ್ನೇಹಿತನನ್ನೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ ಕುಚಿಕು ಗೆಳೆಯ!ಮದುವೆಯಾದ ಹತ್ತು ದಿನಗಳಲ್ಲೇ ಪತಿ ಸಂಪರ್ಕಕ್ಕೆ ಸಿಗದ ಹಿನ್ನೆಲೆ – ಎರಡು ದಿನಗಳಲ್ಲಿ ಎರಡು ಬಾರಿ ಟವರ್ ಏರಿದ 20 ವರ್ಷದ ಮಹಿಳೆಸೌದಿ ಅರಾಮ್ಕೊ ತೈಲ ಘಟಕದ ಮೇಲೆ ಡ್ರೋನ್ ದಾಳಿ: ಇಬ್ಬರು ಸಾವು, ಗಾಯಾಳುಗಳಲ್ಲಿ ಭಾರತೀಯ; ಅಮೆರಿಕದ ಸಿಬ್ಬಂದಿ ತೆರವಿಗೆ ಆದೇಶಪ್ರಿಯಾಂಕಾ ಗಾಂಧಿ ಪುತ್ರನ ಛಾಯಾಚಿತ್ರ ಪ್ರದರ್ಶನಕ್ಕೆ ಅಡ್ಡಿ: 74 ಛಾಯಾಚಿತ್ರಗಳನ್ನು ತೆರವುಗೊಳಿಸಿದ ಬಿಕಾನೆರ್ ಹೌಸ್: ಕಾಂಗ್ರೆಸ್ ಆಕ್ರೋಶಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ: ದೀಪಾವಳಿಗೆ ಚಿನ್ನ ಖರೀದಿಸಲು ಇದೇ ಸೂಕ್ತ ಸಮಯವೇ?ಸಿಬ್ಬಂದಿ ಕೊರತೆ ಪರಿಹಾರಕ್ಕೆ ಕರ್ನಾಟಕ ಸರ್ಕಾರದ ಮಹತ್ವದ ನಿರ್ಧಾರ ಖಾಸಗಿ ಸಂಸ್ಥೆಗಳಿಗೆ ನಿಯಂತ್ರಕ ಕಾರ್ಯಗಳ ಜವಾಬ್ದಾರಿ