LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಚಾಮರಾಜನಗರ : ಆಯುಧ ಪೂಜೆಯ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಕಾಂಗ್ರೆಸ್ ಮುಖಂಡನ ಉದ್ಧಟತನ!

ಚಾಮರಾಜನಗರ: ದಸರಾ ಹಬ್ಬ ಹಾಗೂ ಆಯುಧ ಪೂಜೆಯ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಬ್ಬಳ್ಳಿ ಗ್ರಾಮದಲ್ಲಿ ಜಿ.ಪಂ. ಮಾಜಿ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕಬ್ಬಳ್ಳಿ ಮಹೇಶ್ ಉದ್ಧಟತನ ಮೆರೆದಿದ್ದಾರೆ. ಆಯುಧ ಪೂಜೆ ನಿಮಿತ್ತ ತಮ್ಮ ವಾಹನಗಳಿಗೆ ಪೂಜೆ ಸಲ್ಲಿಸಿದ ಬಳಿಕ, ಅವರು ಏಕಾಏಕಿ ಗಾಳಿಯಲ್ಲಿ ಗುಂಡು ಹಾರಿಸಿರುವ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಈ ರೀತಿಯಲ್ಲಿ ಕಾನೂನು ಬಾಹಿರವಾಗಿ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಅಪಾಯ ತರುವಂತೆ ವರ್ತಿಸಿರುವುದಕ್ಕೆ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ತೀವ್ರ ಖಂಡನೆ ವ್ಯಕ್ತಪಡಿಸಿವೆ. ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರ ಸುರಕ್ಷತೆಗೆ ಸವಾಲಾಗಿರುವ ಇಂತಹ ಅಟ್ಟಹಾಸದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಮೈಸೂರು ನಂದಿಧ್ವಜ ಪೂಜೆ ವೇಳೆ ಸಚಿವರನ್ನು ತಡೆದ ಪ್ರಕರಣ: ವಿಚಾರಣೆಗೆ ಸಿಎಂ ಡಿಕೆ ಶಿವಕುಮಾರ್ ಆದೇಶಹಾಳಾಗಿರುವ ದಾಂಪತ್ಯ ಜೀವನವನ್ನು ಯಾವ ರೀತಿ ಸರಿ ಮಾಡಿಕೊಳ್ಳಬಹುದು ಗೊತ್ತೇ ?ಇ-ಮುದ್ರಾ ಭದ್ರತಾ ಸಮಸ್ಯೆ ಬಗ್ಗೆ ಸರ್ಕಾರ ಕಠಿಣ ಕ್ರಮ: ತನಿಖೆಗಾಗಿ ವಿಶೇಷ ತಂಡ ರಚನೆಕೇರಳದಲ್ಲಿ ಭೂಕುಸಿತಕ್ಕೆ ರೈಲು ಇಂಜಿನ್ ಹಳಿ ತಪ್ಪಿ ಆತಂಕ; 6 ಪ್ಯಾಸೆಂಜರ್ ರೈಲುಗಳ ಸಂಚಾರ ರದ್ದುಧಾರ್ಮಿಕ, ಸಾರ್ವಜನಿಕ ಉತ್ಸವಗಳಲ್ಲಿ ಆನೆಗಳ ಬಳಕೆಗೆ ಕಠಿಣ ಮಾರ್ಗಸೂಚಿ: ಶಿವಮೊಗ್ಗ ದಸರಾ ಘಟನೆ ಬೆನ್ನಲ್ಲೇ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಆದೇಶಅನಂತಪುರದಲ್ಲಿ ರಣಬಾಲಿ ಯಶಸ್ವಿ ಸಮಾರಂಭ: ವಿಜಯ್ ದೇವರಕೊಂಡ ಚಿತ್ರದಿಂದ ಹೊಸ ಅಪ್ಡೇಟ್ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದಾನೆ: ಆತನ ಡಿ-ಕಂಪನಿ ಭಾರತದ್ದು ಎಂದ ಯುಎನ್ ವರದಿಗಾರನಿಗೆ ವಾಸ್ತವದ ಪಾಠ ಮಾಡಿ ತರಾಟೆಗೆ ತೆಗೆದುಕೊಂಡ ಭಾರತಟ್ರೋಲ್ ಆದ ಹಾಡು ಹಾಗೂ ದೃಶ್ಯಗಳಿಗೆ ಕತ್ತರಿ: ಒಟಿಟಿಯಲ್ಲಿ ಹೊಸ ರೂಪ ಪಡೆದ ದಿ ಪ್ಯಾರಡೈಸ್!ಚಿತ್ರಮಂದಿರಗಳಲ್ಲೇ ನೋಡಬೇಕಾದ ದೃಶ್ಯಕಾವ್ಯ: ರಾಮಾಯಣ ಸಿನಿಮಾ ಬಗ್ಗೆ ಸಾಯಿ ಪಲ್ಲವಿ ಮಾತುಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಇತಿಹಾಸ ಬರೆದ ಶೀತಲ್ ದೇವಿ: ಭಾರತಕ್ಕೆ ಸತತ ಎರಡನೇ ಚಿನ್ನದ ಪದಕ