ಗದಗ : ಗದಗದಲ್ಲಿ ಕುಚಿಕು ಗೆಳೆಯನನ್ನೇ ಸ್ನೇಹಿತನೊಬ್ಬ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಮನೆಯಲ್ಲಿ ಉಪ್ಪಿಟ್ಟು ಸವಿದ್ದಿದಾನೆ ಕಿರಾತಕ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ 62 ವರ್ಷದ ದ್ಯಾವಪ್ಪ ಘೋಜನೂರು ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದ್ದು ಶರಣಪ್ಪ ನರಗುಂದ ಎಂಬ ಸ್ನೇಹಿತ ಕೊಲೆ ಮಾಡಿದ್ದಾನೆ.
2.50 ಲಕ್ಷ ಹಣಕ್ಕಾಗಿ ಸ್ನೇಹಿತನನ್ನು ಕೊಲೆ ಮಾಡಿದ್ದಾನೆ 11 ದಿನಗಳಿಂದ 62 ವರ್ಷದ ದ್ಯಾವಪ್ಪ ನಾಪತ್ತೆಯಾಗಿದ್ದಾರೆ ಅಕ್ಟೋಬರ್ 8ರಂದು ದ್ಯಾವಪ್ಪ ಮನೆಯಿಂದ ತೆರಳಿದ್ದಾನೆ ಅಕ್ಟೋಬರ್ 19 ರಂದು ಕಾಲದಲ್ಲಿ ಮೃತ ದೇಹ ಪತ್ತೆಯಾಗಿದೆ. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಹುಡುಕಾಟದ ವೇಳೆ ದ್ಯಾವಪ್ಪನ ಮೃತದೇಹ ಕಾಲುವೆಯಲ್ಲಿ ಪತ್ತೆಯಾಗಿದೆ.
ರೈತರ ಬೆಳೆಗಳನ್ನ ಖರೀದಿ ಮಾಡೋದು ವ್ಯವಹಾರ ನಡೆಸುತ್ತಿದ್ದರು. ಕೊಲೆಗಾರ ಶರಣಪ್ಪನ ಹೆಸರಿನಲ್ಲಿ ಬಾಂಡ್ ಮಾಡಿಸಿ ಲಕ್ಷಾಂತರ ರೂಪಾಯಿ ವ್ಯವಹಾರ ಮಾಡಿದ್ದರು. ಎರಡೂವರೆ ಲಕ್ಷ ಹಣಕ್ಕೋಸ್ಕರ ಶರಣಪ್ಪ ನರಗುಂದ ದ್ಯಾವಪ್ಪನನ್ನು ಕೊಲೆ ಮಾಡಿದ್ದಾನೆ. ಎಲ್ಲಾ ವ್ಯವಹಾರದ ಹಣ ಕೇಳಿದಕ್ಕೆ ಇಬ್ಬರ ನಡುವೆ ಮನಸ್ತಾಪ ಆಗಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಕಾಲುವೆಯ ಪೈಪ್ನಲ್ಲಿ ಮೃತ ದೇಹವನ್ನು ಬಚ್ಚಿಟ್ಟಿದ್ದ. ಇವಳೇ ಪೊಲೀಸರು ಕೊಲೆಗಾರ ಶರಣಪ್ಪನ ಮೇಲೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಆತ ಬಾಯಿಬಿಟ್ಟಿದ್ದಾನೆ.