LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗಿನ್ನಿಸ್ ದಾಖಲೆಯ ಡ್ರೋನ್ ಪ್ರದರ್ಶನ, ದಸರಾ ದೀಪಾಲಂಕಾರಕ್ಕೆ ಸಚಿವ ಕೆ.ಜೆ. ಜಾರ್ಜ್ ಮೆಚ್ಚುಗೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಡ್ರೋನ್ ಪ್ರದರ್ಶನದಲ್ಲಿ ಮತ್ತೊಂದು ಗಿನ್ನಿಸ್ ದಾಖಲೆ ನಿರ್ಮಿಸಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಸಾಧನೆಯನ್ನು ಶ್ಲಾಘಿಸಿರುವ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್, ದೀಪಾಲಂಕಾರ ವ್ಯವಸ್ಥೆ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದಸರಾ ಜಂಬೂಸವಾರಿ ಮೆರವಣಿಗೆಯ ವೈಭವ, ಆಕರ್ಷಕ ಡ್ರೋನ್‌ ಪ್ರರ್ಶನವನ್ನು ವೀಕ್ಷಿಸಿದ ಇಂಧನ ಸಚಿವರು, "ಈ ಬಾರಿ 3,473 ಡ್ರೋನ್ ಗಳ ಮೂಲಕ ಆಕರ್ಷಕ ನವಿಲಿನ ಕಲಾಕೃತಿ ರಚಿಸಿ ಗಿನ್ನಿಸ್ ದಾಖಲೆ ಮಾಡುವ ಮೂಲಕ ದಸರಾ ವೈಭವವನ್ನು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರಚುರ ಪಡಿಸುವಲ್ಲಿ ಇಂಧನ ಇಲಾಖೆ ಮತ್ತು ಸೆಸ್ಕ್ ಪ್ರಮುಖ ಪಾತ್ರ ವಹಿಸಿವೆ," ಎಂದರು.

 "ದಸರಾ ಮಹೋತ್ಸವಕ್ಕೆ ವಿದ್ಯುತ್ ದೀಪಾಲಂಕಾರವು ವಿಶಿಷ್ಟ ಮೆರುಗು ನೀಡಿದ್ದು, ನಗರದ 146 ಕಿ.ಮೀ ರಸ್ತೆಗಳು, 123 ವೃತ್ತಗಳು, ಪ್ರಮುಖ ಸ್ಥಳಗಳಲ್ಲಿ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ನಿರ್ಮಿಸಿರುವ 80 ಕಲಾಕೃತಿಗಳು ಮೈಸೂರಿನ ಅಂದವನ್ನು ಹೆಚ್ಚಿಸಿದೆ. ದಸರಾ ವೇಳೆ ವಿದ್ಯುತ್ ದೀಪಾಲಂಕಾರವನ್ನು ಸಮರ್ಪಕವಾಗಿ ನಿರ್ವಹಿಸುವುದರ ಜೊತೆಗೆ, ತಂತ್ರಜ್ಞಾನದ ಆಕರ್ಷಕ ಡ್ರೋನ್ ಪ್ರದರ್ಶನವನ್ನು ಆಯೋಜಿಸಿರುವುದು ಇಂಧನ ಇಲಾಖೆಯ ಕಾರ್ಯಕ್ಷಮತೆ ಹಾಗೂ ಸೆಸ್ಕ್‌ನ ತಾಂತ್ರಿಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ," ಎಂದು ಸಚಿವ ಜಾರ್ಜ್‌ ಹೇಳಿದರು.

"ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಾಲ್ಕು ದಿನಗಳ ಕಾಲ ಡ್ರೋನ್ ಪ್ರದರ್ಶನ ನಡೆದಿದ್ದು, ವಿವಿಧ ಬಣ್ಣಗಳು ಹಾಗೂ ವಿನ್ಯಾಸಗಳ ಮೂಲಕ ರೂಪುಗೊಂಡ 12 ಆಕರ್ಷಕ ದೃಶ್ಯಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು. ಇದರಲ್ಲಿ 3,473 ಡ್ರೋನ್‌ಗಳು ಆಕಾಶದಲ್ಲಿ ಮೂಡಿಸಿದ ನವಿಲಿನ ಕಲಾಕೃತಿ ವಿಶೇಷ ಆಕರ್ಷಣೆಯಾಗಿತ್ತು ಮಾತ್ರವಲ್ಲದೆ, ಗಿನ್ನಿಸ್ ದಾಖಲೆಗೆ ಪಾತ್ರವಾಗಿರುವುದು ಮೈಸೂರು ದಸರಾ ಮಹೋತ್ಸವದ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ," ಎಂದು ಸಚಿವರು ಶ್ಲಾಘಿಸಿದರು.

"ದಸರಾ ಸಂದರ್ಭದಲ್ಲಿ ನಗರದ ವಿದ್ಯುತ್ ದೀಪಾಲಂಕಾರ ವ್ಯವಸ್ಥೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸುವುದು ದೊಡ್ಡ ಜವಾಬ್ದಾರಿಯಾಗಿತ್ತು. ಲಕ್ಷಾಂತರ ಪ್ರವಾಸಿಗರು, ಸಾರ್ವಜನಿಕರು ಪಾಲ್ಗೊಳ್ಳುವ ಉತ್ಸವದಲ್ಲಿ ವಿದ್ಯುತ್ ವ್ಯವಸ್ಥೆಯ ಸಮರ್ಪಕ ನಿರ್ವಹಣೆ, ತಾಂತ್ರಿಕ ಸಿದ್ಧತೆ ಮತ್ತು ವಿವಿಧ ಹಂತಗಳ ಸಮನ್ವಯಕ್ಕೆ ಆದ್ಯತೆ ನೀಡಲಾಗಿದೆ. ಇಂಧನ ಇಲಾಖೆಯ ವ್ಯಾಪ್ತಿಯಲ್ಲಿ ಸೆಸ್ಕ್ ಕೈಗೊಂಡಿರುವ ಈ ಕಾರ್ಯಗಳು ದಸರಾ ಮಹೋತ್ಸವದ ವೈಭವ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ," ಎಂದು ಅಭಿಪ್ರಾಯಪಟ್ಟರು.

"ಸಮರ್ಪಕ ವಿದ್ಯುತ್ ಸರಬರಾಜಿನ ಜವಾಬ್ದಾರಿಯೊಂದಿಗೆ ದಸರಾ ದೀಪಾಲಂಕಾರ ಮತ್ತು ನವೀನ ತಂತ್ರಜ್ಞಾನ ಆಧಾರಿತ ಪ್ರದರ್ಶನದಲ್ಲಿಯೂ ಸೆಸ್ಕ್ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಂಘಟಿತ ಪ್ರಯತ್ನ, ತಾಂತ್ರಿಕ ಪರಿಣತಿ ಹಾಗೂ ನಿರಂತರ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಕಳೆದ ವರ್ಷ ಹುಲಿಯ ಆಕೃತಿಯನ್ನು ಡ್ರೋನ್‌ಗಳ ಮೂಲಕ ರೂಪಿಸಿ ದಾಖಲೆ ನಿರ್ಮಿಸಿದ್ದ ಸೆಸ್ಕ್, ಈ ಬಾರಿ ನವಿಲಿನ ಕಲಾಕೃತಿ ರಚಿಸಿ ಹೊಸ ದಾಖಲೆ ಬರೆಯುವ ಮೂಲಕ ತನ್ನ ಸಾಧನೆಯ ಹಾದಿಯನ್ನು ಮುಂದುವರಿಸಿದೆ. ಅಲ್ಲದೇ ದಸರಾವನ್ನು ಜಾಗತಿಕ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ವಿದ್ಯುತ್ ದೀಪಾಲಂಕಾರ ಮತ್ತು ಡ್ರೋನ್ ಪ್ರದರ್ಶನ ಮಹತ್ವದ ಕೊಡುಗೆ ನೀಡಿದೆ," ಎಂದು ಹೇಳಿದರು.

ದಸರಾ ದೀಪಾಲಂಕಾರ ಹಾಗೂ ಡ್ರೋನ್ ಪ್ರದರ್ಶನ ಯಶಸ್ವಿಯಾಗಿ ಮೂಡಿಬರಲು ಕಾರಣರಾದ ಶಾಸಕರು ಹಾಗೂ ಸೆಸ್ಕ್ ಅಧ್ಯಕ್ಷರಾದ ರಮೇಶ್ ಬಂಡಿಸಿದ್ದೇಗೌಡ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಸೇರಿದಂತೆ ಈ ಸಾಧನೆಯ ಹಿಂದೆ ಶ್ರಮಿಸಿದ ಸೆಸ್ಕ್ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಹಾಗೂ ಇಂಧನ ಇಲಾಖೆಯ ಎಲ್ಲ ಸಂಬಂಧಪಟ್ಟ ಅಧಿಕಾರಿಗಳ ಕಾರ್ಯವನ್ನು ಸಚಿವ ಕೆ.ಜೆ. ಜಾರ್ಜ್ ಅವರು ಅಭಿನಂದಿಸಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿವಮೊಗ್ಗ ದಸರಾ ಆನೆ ಘಟನೆ: ಸಿಸಿಎಫ್ ನೇತೃತ್ವದಲ್ಲಿ ತನಿಖೆಗೆ ಡಿಸಿ ಆದೇಶ!‘ಡ್ರೈವಿಂಗ್ ಲೈಸೆನ್ಸ್’ ಪಡೆಯುವುದು ಇನ್ಮುಂದೆ ಕಷ್ಟ? ಪರೀಕ್ಷೆಯಲ್ಲಿ ಶೇ.75 ಅಂಕ ಕಡ್ಡಾಯಕ್ಕೆ ಕೇಂದ್ರದ ಸಿದ್ಧತೆ!SCHOKING: ಬೆಂಗಳೂರಿನಲ್ಲಿ ಅಮಾನವೀಯ ಕೃತ್ಯ: ಮರಕ್ಕೆ ನೇತುಹಾಕಿ ನಾಯಿ ಕೊಂದ ದುರುಳರು, ಮೂವರು ಅರೆಸ್ಟ್!ಪ್ರಧಾನಿ ಮೋದಿಗೆ ಕರೆ ಮಾಡಿದ ನೆತನ್ಯಾಹು: ಇಸ್ರೇಲ್ ಸ್ವಾತಂತ್ರ್ಯ ದಿನದಂದು ಸ್ಮಿತ್ ಮಚ್ಚರ್ ಜತೆಗೆ ಜ್ಯೋತಿ ಬೆಳಗಿಸಲು ಆಹ್ವಾನಮೆಕ್ಕಾ–ಮದೀನಾದಲ್ಲಿ ಸಿಲುಕಿಕೊಂಡ 4 ಸಾವಿರ ಭಾರತೀಯರು! ವಿಮಾನಗಳ ರದ್ದತಿಯಿಂದ ಸ್ವದೇಶಕ್ಕೆ ಮರಳಲು ಪರದಾಟಐಶ್ವರ್ಯಾ ರೈ ತೋಳು ಮುಟ್ಟಿದ್ದಕ್ಕೆ ಸಲ್ಮಾನ್ ಖಾನ್’ಗೆ ಕ್ಲಾಸ್ ತೆಗೆದುಕೊಂಡ ಬನ್ಸಾಲಿ! ಹಳೆಯ ಘಟನೆ ಬಿಚ್ಚಿಟ್ಟ ನಟಿಒಂದೇ ಟಿಕೆಟ್’ನಲ್ಲಿ ಒಬ್ಬರಿಗೆ ಕನ್ಫರ್ಮ್, ಮತ್ತೊಬ್ಬರಿಗೆ ವೇಟಿಂಗ್ ಲಿಸ್ಟ್ ಇದ್ದರೆ ಒಟ್ಟಿಗೆ ಪ್ರಯಾಣಿಸ್ಬಹುದೇ ? ಈ ರೂಲ್ಸ್ ತಿಳಿಯಿರಿರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ: ಜಿಲ್ಲಾ ಪ್ರಾತಿನಿಧ್ಯ, ಸಾಮಾಜಿಕ ನ್ಯಾಯಕ್ಕೆ ಆದ್ಯತೆ- ಸಚಿವ ಶಿವರಾಜ್ ಎಸ್.ತಂಗಡಗಿಗಿನ್ನಿಸ್ ದಾಖಲೆಯ ಡ್ರೋನ್ ಪ್ರದರ್ಶನ, ದಸರಾ ದೀಪಾಲಂಕಾರಕ್ಕೆ ಸಚಿವ ಕೆ.ಜೆ. ಜಾರ್ಜ್ ಮೆಚ್ಚುಗೆಒಂದೇ ದಿನ 300 ಕೋಟಿ ರೂ. ದಾಟಿದ ಮದ್ಯದ ವಹಿವಾಟು ; ದಾಖಲೆ ಬರೆದ ತೆಲಂಗಾಣ ಅಬಕಾರಿ ಇಲಾಖೆ !