LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ: ಜಿಲ್ಲಾ ಪ್ರಾತಿನಿಧ್ಯ, ಸಾಮಾಜಿಕ ನ್ಯಾಯಕ್ಕೆ ಆದ್ಯತೆ- ಸಚಿವ ಶಿವರಾಜ್ ಎಸ್.ತಂಗಡಗಿ

ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿಯ ಎರಡನೇ ಸಭೆ ನಡೆಯಿತು.

ಸಭೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಜಿಲ್ಲಾ ಪ್ರಾತಿನಿಧ್ಯ ಹಾಗೂ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡುವ ಜೊತೆಗೆ ಅರ್ಹತೆಯನ್ನೇ ಮುಖ್ಯಮಾನದಂಡವಾಗಿ ಪರಿಗಣಿಸಲು ಚರ್ಚಿಸಲಾಯಿತು. ಪ್ರಶಸ್ತಿಗೆ ಅರ್ಹರಾದವರ ಆಯ್ಕೆ ಕುರಿತಂತೆ ಸಮಿತಿಯ ಸದಸ್ಯರು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಮಂಡಿಸಿದರು.

ಮುಂದಿನ ಹಂತದಲ್ಲಿ  ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಆಯ್ಕೆ ಸಲಹಾ ಸಮಿತಿಯ ಸಭೆ ನಡೆಯಲಿದ್ದು, ಬಳಿಕ ಉನ್ನತಮಟ್ಟದ ಸಮಿತಿ ಸಭೆ ನಡೆಸಿ ಪ್ರಶಸ್ತಿ ಪುರಸ್ಕೃತರ ಅಂತಿಮ ಆಯ್ಕೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯ ಗೌಪ್ಯತೆಯನ್ನು ಕಾಪಾಡುವಂತೆ ಸಮಿತಿ ಸದಸ್ಯರಿಗೆ ಸಚಿವರು ಕಿವಿಮಾತು ಹೇಳಿದರು. ಅಂತಿಮ ಸಭೆ ನಡೆದು ತೀರ್ಮಾನ ಕೈಗೊಳ್ಳುವವರೆಗೆ ಸಭೆಯಲ್ಲಿ ನಡೆದ ಚರ್ಚೆಗಳು ಹಾಗೂ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಸೂಚಿಸಿದರು.

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಸಮಿತಿ ಸದಸ್ಯರು ತಾವು ಶಿಫಾರಸು ಮಾಡಿದ ಅಭ್ಯರ್ಥಿಗಳ ಅರ್ಹತೆ, ಸಾಧನೆ ಹಾಗೂ ಪ್ರಶಸ್ತಿಗೆ ಅವರು ಏಕೆ ಅರ್ಹರು ಎಂಬುದನ್ನು ಸಮರ್ಥವಾಗಿ ವಿವರಿಸಬೇಕು. ಈ ಹಂತದಲ್ಲಿಯೂ ಸದಸ್ಯರು ತಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಮಂಡಿಸಬಹುದಾಗಿದೆ ಎಂದು ತಂಗಡಗಿ ತಿಳಿಸಿದರು.

ಸಭೆಯಲ್ಲಿ‌ ಮಾಜಿ ಸಚಿವೆ‌ ಜಯಮಾಲಾ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ್ ಬಿಳಿಮಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಮಂಜುಶ್ರೀ, ನಿರ್ದೇಶಕ ಎಸ್.ನಾರಾಯಣ್, ಸಂಗೀತ ನಿರ್ದೇಶಕ ಸಾಧುಕೋಕಿಲಾ, ಇಲಾಖೆ‌ ನಿರ್ದೇಶಕಿ ವಸುಂಧರಾ,‌ ಅಕಾಡೆಮಿ‌ ಅಧ್ಯಕ್ಷರು ಹಾಗೂ ಆಯ್ಕೆ ‌ಸಮಿತಿ‌ ಸದಸ್ಯರು ಉಪಸ್ಥಿತರಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿವಮೊಗ್ಗ ದಸರಾ ಆನೆ ಘಟನೆ: ಸಿಸಿಎಫ್ ನೇತೃತ್ವದಲ್ಲಿ ತನಿಖೆಗೆ ಡಿಸಿ ಆದೇಶ!‘ಡ್ರೈವಿಂಗ್ ಲೈಸೆನ್ಸ್’ ಪಡೆಯುವುದು ಇನ್ಮುಂದೆ ಕಷ್ಟ? ಪರೀಕ್ಷೆಯಲ್ಲಿ ಶೇ.75 ಅಂಕ ಕಡ್ಡಾಯಕ್ಕೆ ಕೇಂದ್ರದ ಸಿದ್ಧತೆ!SCHOKING: ಬೆಂಗಳೂರಿನಲ್ಲಿ ಅಮಾನವೀಯ ಕೃತ್ಯ: ಮರಕ್ಕೆ ನೇತುಹಾಕಿ ನಾಯಿ ಕೊಂದ ದುರುಳರು, ಮೂವರು ಅರೆಸ್ಟ್!ಪ್ರಧಾನಿ ಮೋದಿಗೆ ಕರೆ ಮಾಡಿದ ನೆತನ್ಯಾಹು: ಇಸ್ರೇಲ್ ಸ್ವಾತಂತ್ರ್ಯ ದಿನದಂದು ಸ್ಮಿತ್ ಮಚ್ಚರ್ ಜತೆಗೆ ಜ್ಯೋತಿ ಬೆಳಗಿಸಲು ಆಹ್ವಾನಮೆಕ್ಕಾ–ಮದೀನಾದಲ್ಲಿ ಸಿಲುಕಿಕೊಂಡ 4 ಸಾವಿರ ಭಾರತೀಯರು! ವಿಮಾನಗಳ ರದ್ದತಿಯಿಂದ ಸ್ವದೇಶಕ್ಕೆ ಮರಳಲು ಪರದಾಟಐಶ್ವರ್ಯಾ ರೈ ತೋಳು ಮುಟ್ಟಿದ್ದಕ್ಕೆ ಸಲ್ಮಾನ್ ಖಾನ್’ಗೆ ಕ್ಲಾಸ್ ತೆಗೆದುಕೊಂಡ ಬನ್ಸಾಲಿ! ಹಳೆಯ ಘಟನೆ ಬಿಚ್ಚಿಟ್ಟ ನಟಿಒಂದೇ ಟಿಕೆಟ್’ನಲ್ಲಿ ಒಬ್ಬರಿಗೆ ಕನ್ಫರ್ಮ್, ಮತ್ತೊಬ್ಬರಿಗೆ ವೇಟಿಂಗ್ ಲಿಸ್ಟ್ ಇದ್ದರೆ ಒಟ್ಟಿಗೆ ಪ್ರಯಾಣಿಸ್ಬಹುದೇ ? ಈ ರೂಲ್ಸ್ ತಿಳಿಯಿರಿರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ: ಜಿಲ್ಲಾ ಪ್ರಾತಿನಿಧ್ಯ, ಸಾಮಾಜಿಕ ನ್ಯಾಯಕ್ಕೆ ಆದ್ಯತೆ- ಸಚಿವ ಶಿವರಾಜ್ ಎಸ್.ತಂಗಡಗಿಗಿನ್ನಿಸ್ ದಾಖಲೆಯ ಡ್ರೋನ್ ಪ್ರದರ್ಶನ, ದಸರಾ ದೀಪಾಲಂಕಾರಕ್ಕೆ ಸಚಿವ ಕೆ.ಜೆ. ಜಾರ್ಜ್ ಮೆಚ್ಚುಗೆಒಂದೇ ದಿನ 300 ಕೋಟಿ ರೂ. ದಾಟಿದ ಮದ್ಯದ ವಹಿವಾಟು ; ದಾಖಲೆ ಬರೆದ ತೆಲಂಗಾಣ ಅಬಕಾರಿ ಇಲಾಖೆ !