LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬುಕ್‌ಮೈಶೋನಲ್ಲಿ ಸಾರ್ವಕಾಲಿಕ ದಾಖಲೆ ಬರೆದ ‘ರಾಮಾಯಣ’: ಅತಿ ಹೆಚ್ಚು ಟಿಕೆಟ್ ಮಾರಾಟ ಮಾಡಿ ಹೊಸ ಇತಿಹಾಸ

ಬಾಲಿವುಡ್‌ ಸ್ಟಾರ್ ನಟ ರಣ್‌ಬೀರ್ ಕಪೂರ್ ಅಭಿನಯದ ಬಹುನಿರೀಕ್ಷಿತ ಪೌರಾಣಿಕ ಬ್ರಹ್ಮಾಂಡದ ಸಿನಿಮಾ ರಾಮಾಯಣ ಬಾಕ್ಸ್‌ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಪ್ರಮುಖ ಒಟಿಟಿ ಮತ್ತು ಟಿಕೆಟಿಂಗ್ ಪ್ಲಾಟ್‌ಫಾರ್ಮ್ ಆದ ಬುಕ್‌ಮೈಶೋನಲ್ಲಿ ಅತ್ಯಧಿಕ ಟಿಕೆಟ್‌ ಮಾರಾಟದ ಮೂಲಕ ಈ ಸಿನಿಮಾ ಹೊಸ ದಾಖಲೆ ಬರೆದಿದೆ. ನಮಿತ್ ಮಲ್ಹೋತ್ರಾ ನಿರ್ಮಾಣದ ಈ ಬ್ರಹ್ಮಾಂಡದ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ.

ಬುಕ್‌ಮೈಶೋ ಇತಿಹಾಸದಲ್ಲೇ ಅತ್ಯಂತ ಕಡಿಮೆ ಸಮಯದಲ್ಲಿ ಅಂದರೆ ಕೇವಲ ಒಂದು ಗಂಟೆಯಲ್ಲಿ ಅತಿ ಹೆಚ್ಚು ಟಿಕೆಟ್‌ಗಳು ಮಾರಾಟವಾದ ಹೆಗ್ಗಳಿಗೆ ರಾಮಾಯಣ ಪಾತ್ರವಾಗಿದೆ. ಈ ಚಿತ್ರವು ಪ್ರತಿ ಗಂಟೆಗೆ ಬರೋಬ್ಬರಿ 111.83 ಸಾವಿರ ಟಿಕೆಟ್‌ಗಳ ಮಾರಾಟದೊಂದಿಗೆ ಹಿಂದೆ ದಾಖಲಾಗಿದ್ದ ಧುರಂಧರ್ 2 ಚಿತ್ರದ ದಾಖಲೆಯನ್ನು ಮುರಿದು ಮುನ್ನಡೆದಿದೆ. ಇದು ಭಾರತೀಯ ಸಿನಿಮಾರಂಗದ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯಾಗಿದೆ ಎಂದು ವರದಿಯಾಗಿದೆ.

ಬೃಹತ್ ಬಜೆಟ್‌ನಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗಿರುವ ಈ ವಿಎಫ್‌ಎಕ್ಸ್ ಶ್ರೀಮಂತ ಚಿತ್ರದಲ್ಲಿ ರಣ್‌ಬೀರ್ ಕಪೂರ್ ಜೊತೆಗೆ ಪ್ರಮುಖ ಪಾತ್ರಗಳಲ್ಲಿ ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಲ್ಲದೆ ರವಿ ದುಬೆ, ಸನ್ನಿ ಡಿಯೋಲ್, ಅರುಣ್ ಗೋವಿಲ್, ಲಾರಾ ದತ್ತ, ಕಾಜಲ್ ಅಗರ್ವಾಲ್ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ವಿಶೇಷವೆಂದರೆ ಖ್ಯಾತ ಸಂಗೀತ ನಿರ್ದೇಶಕರುಗಳಾದ ಹ್ಯಾನ್ಸ್ ಜಿಮ್ಮರ್ ಹಾಗೂ ಎ.ಆರ್. ರಹಮಾನ್ ಒಟ್ಟಾಗಿ ಈ ಚಿತ್ರಕ್ಕೆ ಅದ್ಭುತ ಸಂಗೀತ ಸಂಯೋಜನೆ ಮಾಡಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಖಾವಾಜಾ ಹೇಳಿಕೆ ಶೇಕಡಾ ನೂರರಷ್ಟು ಸತ್ಯ: ತನಿಖೆಯ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಬಗ್ಗೆ ಪ್ರಶ್ನೆ ಎತ್ತಿದ ಡೇವಿಡ್ ವಾರ್ನರ್ಪಿಸ್ತಾ ಗ್ರೀನ್ ಲೆಹೆಂಗಾದಲ್ಲಿ ಮಿಂಚಿದ ನಟಿ ಆಲಿಯಾ ಭಟ್: ದೀಪಾವಳಿ ಹಬ್ಬದಲ್ಲಿ ಹೊಸ ಫ್ಯಾಷನ್ ಟ್ರೆಂಡ್ ಸೃಷ್ಟಿಸಿದ ಸ್ಟಾರ್ ನಟಿಮಗನ ಸಿನಿಮಾದಿಂದ ನಿರ್ದೇಶಕನಿಗೆ ಗೇಟ್ ಪಾಸ್: ಕಾರಣ ತಿಳಿಸಿದ ನಟಿ ಪ್ರಿಯಾಂಕಾ ಉಪೇಂದ್ರಸ್ಯಾಂಡಲ್‌ವುಡ್ ಬ್ಲಾಕ್‌ಬಸ್ಟರ್ ‘ಪ್ರೇಮದ ಊರಲಿ’ ಸಿನಿಮಾದ ‘ಏರುಪೇರು ಹೃದಯ’ ವೀಡಿಯೊ ಸಾಂಗ್ ರಿಲೀಸ್ದೀಪಾವಳಿ ಹಬ್ಬದ ಹೊತ್ತಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳು ಹೇಗಿವೆ?ಹಬ್ಬದ ಬೆನ್ನಲ್ಲೇ ಷೇರುಮಾರುಕಟ್ಟೆ ಕುಸಿತ: ಸೆನ್ಸೆಕ್ಸ್ 700 ಅಂಕಗಳು ಹಾಗೂ ನಿಫ್ಟಿ 80 ಅಂಕಗಳಷ್ಟು ಕುಸಿತ: ಕಾರಣವೇನು?ಪಟಾಕಿಯಿಂದ ದಟ್ಟ ಹೊಗೆ: ಚೆನ್ನೈ ಏರ್​ಪೋರ್ಟ್​​ನಲ್ಲಿ 26 ವಿಮಾನ ಹಾರಾಟ ವಿಳಂಬ; ಒಂದು ವಿಮಾನದ ಮಾರ್ಗ ಬದಲಾವಣೆಜೆನ್ಸನ್ ಹುವಾಂಗ್ ಜೊತೆ ಸಂಪರ್ಕ ಹೊಂದಿರುವ ಆಲಿಸ್ ಹುವಾಂಗ್ ಯಾರು?ಮೂಕುತಿ ಅಮ್ಮನ್ 2 ಬಾಕ್ಸ್‌ಆಫೀಸ್ ಕಲೆಕ್ಷನ್: ವಾರಾಂತ್ಯದಲ್ಲಿ ಗಳಿಕೆ ಹೆಚ್ಚಿಸಿಕೊಂಡ ನಯನತಾರಾ ಸಿನಿಮಾಕ್ಯಾನ್ಸರ್ ರೋಗಿಗಳಿಗೆ ಔಷಧಿಗಳ ಬೆಲೆ ಇಳಿಕೆ