LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾಂಪ್ರದಾಯಿಕ ಉಡುಗೆ ಹಾಗೂ ಚಿನ್ನದ ಆಭರಣಗಳಲ್ಲಿ ಮಿಂಚಿದ ಕಂಗನಾ ರಣಾವತ್: ದೀಪಾವಳಿ ಸಂಭ್ರಮದ ವಿಡಿಯೋ ವೈರಲ್

ಬಾಲಿವುಡ್ ನಟಿ ಹಾಗೂ ರಾಜಕಾರಣಿ ಕಂಗನಾ ರಣಾವತ್ ತಮ್ಮ ವಿಭಿನ್ನ ಹಾಗೂ ಸಾಂಪ್ರದಾಯಿಕ ಉಡುಗೆಯ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮನ ಸೆಳೆದಿದ್ದಾರೆ. ಹಬ್ಬದ ಸಂದರ್ಭದಲ್ಲಿ ಎಂದಿಗೂ ಸರಳತೆಯನ್ನು ಮೀರಿ ಅದ್ದೂರಿ ಮತ್ತು ಸಾಂಪ್ರದಾಯಿಕ ಶೈಲಿಗೆ ಒತ್ತು ನೀಡುವ ಕಂಗನಾ, ಈ ಬಾರಿಯ ದೀಪಾವಳಿಗೆ ರಾಜಮನೆತನದ ಉಡುಗೆಯನ್ನು ಹೋಲುವ ಸುಂದರ ಕಲಾಕೃತಿಯನ್ನು ಧರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ದೀಪಾವಳಿ ಹಬ್ಬದ ವೀಡಿಯೊವನ್ನು ಹಂಚಿಕೊಂಡಿರುವ ಕಂಗನಾ, ನಾಡಿನ ಸಮಸ್ತ ಜನತೆಗೆ ಹಬ್ಬದ ಶುಭ ಹಾರೈಸಿದ್ದಾರೆ. ಪ್ರಸಿದ್ಧ ಫ್ಯಾಷನ್ ಡಿಸೈನರ್ ನೀತಾ ಲುಲ್ಲಾ ವಿನ್ಯಾಸಗೊಳಿಸಿದ ಮರೂನ್ ಬಣ್ಣದ ಆಕರ್ಷಕ ಬಾಂಧನಿ ಸೀರೆಯಲ್ಲಿ ಕಂಗನಾ ಮಿಂಚಿದ್ದಾರೆ. ಸೀರೆಯುದ್ದಕ್ಕೂ ಸಂಕೀರ್ಣವಾದ ಚಿನ್ನದ ಕಸೂತಿ ಕೆಲಸ ಹಾಗೂ ಸಾಂಪ್ರದಾಯಿಕ ವಿನ್ಯಾಸಗಳು ಮೇಳೈಸಿದ್ದು, ಸೀರೆಯ ಅಂಚು ಮತ್ತು ಲೇಯರ್ಡ್ ರಫಲ್ ವಿವರಣೆಯು ಉಡುಗೆಯ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

ಉಡುಗೆಗೆ ತಕ್ಕಂತೆ ಆಭರಣಗಳ ಆಯ್ಕೆಯಲ್ಲೂ ಕಂಗನಾ ಯಾವುದೇ ರಾಜಿ ಮಾಡಿಕೊಂಡಿಲ್ಲ. ಇತ್ತೀಚಿನ ದಿನಗಳಲ್ಲಿ ಮಿನಿಮಲ್ ಆಭರಣಗಳ ಟ್ರೆಂಡ್ ಚಾಲ್ತಿಯಲ್ಲಿದ್ದರೂ, ಅವರು ಸಂಪೂರ್ಣವಾಗಿ ಸಾಂಪ್ರದಾಯಿಕ ಶೈಲಿಯ ಭಾರೀ ಚಿನ್ನದ ಆಭರಣಗಳನ್ನು ಧರಿಸಿದ್ದಾರೆ. ರಾಜಗಭೀರವಾದ ನೆಕ್ಲೇಸ್, ಮ್ಯಾಚಿಂಗ್ ಸಾಂಪ್ರದಾಯಿಕ ಕಿವಿಯೋಲೆಗಳು, ಹಣೆಯ ಮೇಲೆ ಚಿನ್ನದ ಮಾಂಗ್ ಟಿಕಾ ಹಾಗೂ ಕೈತುಂಬಾ ಬಳೆಗಳನ್ನು ಧರಿಸಿ ಕಾಂಪ್ಯಾಕ್ಟ್ ಲುಕ್ ಪಡೆದಿದ್ದಾರೆ.

ಅಂದವಾದ ಕೇಶವಿನ್ಯಾಸಕ್ಕಾಗಿ ಮಧ್ಯದಲ್ಲಿ ಪಾಪಸ್ ತೆಗೆದು ಕಟ್ಟಿದ ನಯವಾದ ಲೋ ಬನ್ ಗೆ ಗಜರಾವನ್ನು ಮುಡಿಸಿರುವುದು ಅವರ ಸೌಂದರ್ಯಕ್ಕೆ ಸಾಂಪ್ರದಾಯಿಕ ಸ್ಪರ್ಶ ನೀಡಿದೆ. ಮುಖದ ಅಂದವನ್ನು ಹೆಚ್ಚಿಸುವ ಮೃದುವಾದ ಮೇಕಪ್ ಹಾಗೂ ನ್ಯಾಚುರಲ್ ಪಿಂಕ್-ನ್ಯೂಡ್ ಲಿಪ್ ಕಲರ್ ಬಳಸುವ ಮೂಲಕ ತಮ್ಮ ಒಟ್ಟಾರೆ ಲುಕ್ ಅನ್ನು ಅತ್ಯಂತ ಆಕರ್ಷಕವಾಗಿ ಮರುಸೃಷ್ಟಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಿಸ್ತಾ ಗ್ರೀನ್ ಲೆಹೆಂಗಾದಲ್ಲಿ ಮಿಂಚಿದ ನಟಿ ಆಲಿಯಾ ಭಟ್: ದೀಪಾವಳಿ ಹಬ್ಬದಲ್ಲಿ ಹೊಸ ಫ್ಯಾಷನ್ ಟ್ರೆಂಡ್ ಸೃಷ್ಟಿಸಿದ ಸ್ಟಾರ್ ನಟಿಮಗನ ಸಿನಿಮಾದಿಂದ ನಿರ್ದೇಶಕನಿಗೆ ಗೇಟ್ ಪಾಸ್: ಕಾರಣ ತಿಳಿಸಿದ ನಟಿ ಪ್ರಿಯಾಂಕಾ ಉಪೇಂದ್ರಸ್ಯಾಂಡಲ್‌ವುಡ್ ಬ್ಲಾಕ್‌ಬಸ್ಟರ್ ‘ಪ್ರೇಮದ ಊರಲಿ’ ಸಿನಿಮಾದ ‘ಏರುಪೇರು ಹೃದಯ’ ವೀಡಿಯೊ ಸಾಂಗ್ ರಿಲೀಸ್ದೀಪಾವಳಿ ಹಬ್ಬದ ಹೊತ್ತಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳು ಹೇಗಿವೆ?ಹಬ್ಬದ ಬೆನ್ನಲ್ಲೇ ಷೇರುಮಾರುಕಟ್ಟೆ ಕುಸಿತ: ಸೆನ್ಸೆಕ್ಸ್ 700 ಅಂಕಗಳು ಹಾಗೂ ನಿಫ್ಟಿ 80 ಅಂಕಗಳಷ್ಟು ಕುಸಿತ: ಕಾರಣವೇನು?ಪಟಾಕಿಯಿಂದ ದಟ್ಟ ಹೊಗೆ: ಚೆನ್ನೈ ಏರ್​ಪೋರ್ಟ್​​ನಲ್ಲಿ 26 ವಿಮಾನ ಹಾರಾಟ ವಿಳಂಬ; ಒಂದು ವಿಮಾನದ ಮಾರ್ಗ ಬದಲಾವಣೆಜೆನ್ಸನ್ ಹುವಾಂಗ್ ಜೊತೆ ಸಂಪರ್ಕ ಹೊಂದಿರುವ ಆಲಿಸ್ ಹುವಾಂಗ್ ಯಾರು?ಮೂಕುತಿ ಅಮ್ಮನ್ 2 ಬಾಕ್ಸ್‌ಆಫೀಸ್ ಕಲೆಕ್ಷನ್: ವಾರಾಂತ್ಯದಲ್ಲಿ ಗಳಿಕೆ ಹೆಚ್ಚಿಸಿಕೊಂಡ ನಯನತಾರಾ ಸಿನಿಮಾಕ್ಯಾನ್ಸರ್ ರೋಗಿಗಳಿಗೆ ಔಷಧಿಗಳ ಬೆಲೆ ಇಳಿಕೆ2027ರಲ್ಲಿ ಇಂಗ್ಲೆಂಡ್ ಕ್ರಿಕೆಟ್‌ಗೆ ₹627 ಕೋಟಿ ನಷ್ಟದ ಭೀತಿ