LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಮಿತಾಬ್ ಬಚ್ಚನ್ ಅವರ ಜಲ್ಸಾ ಮನೆ ಮಾಲೀಕತ್ವದ ಬಗ್ಗೆ ಪ್ರಶ್ನೆ: ಸಹೋದರನ ಪತ್ನಿಯಿಂದ ದೂರು ದಾಖಲು

ಮುಂಬೈ: ಬಾಲಿವುಡ್​​ನ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್​​ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ಅಮಿತಾಭ್ ಬಚ್ಚನ್ ಅವರು ಮುಂಬೈನಲ್ಲಿ ವಾಸಿಸುವ ಮನೆ ‘ಜಲ್ಸಾ’ ವಿಚಾರವಾಗಿ ಅಮಿತಾಬ್ ಅವರ ಸಹೋದರನ ಪತ್ನಿ ದೂರು ನಿಡಿದ್ದಾರೆ.

ಜಲ್ಸಾ ನಿವಾಸ ಮುಂಬೈ ನಗರದ ಕೆಲವು ಪ್ರಮುಖ ತಾಣಗಳಲ್ಲಿ ಒಂದೆಂದು ಗುರಿತಿಸಲ್ಪಡುತ್ತದೆ. ಆದರೆ ಇದೀಗ ಆ ಮನೆಯ ಮೇಲೆ ಅಮಿತಾಭ್ ಬಚ್ಚನ್ ಅವರ ಸಹೋದರನ ಪತ್ನಿಯೇ ದೂರು ದಾಖಲಿಸಿದ್ದು, ಆ ಮನೆ ತಮಗೆ ಸೇರಿದ್ದು ಎಂದಿದ್ದಾರೆ.

ಅಮಿತಾಭ್ ಬಚ್ಚನ್ ಅವರ ಸಹೋದರನ ಪತ್ನಿ ರಮೋಲಾ ಬಚ್ಚನ್ ಅವರು ಮನೆಯ ವಿರುದ್ಧ ದಾವೆ ಹೂಡಿದ್ದು, 1993ರ ಗಿಫ್ಟ್ ಡೀಡ್ (ಉಡುಗೊರೆ ಪತ್ರ) ಅನ್ನು ಪ್ರಶ್ನಿಸಿ ಮೊಕದ್ದಮೆ ಹೂಡಿದ್ದಾರೆ. 1993ರ ಗಿಫ್ಟ್ ಡೀಡ್ ಮೂಲಕ ಆಸ್ತಿಯ ಮಾಲೀಕತ್ವವನ್ನು ಜಯಾ ಬಚ್ಚನ್ ಅವರಿಗೆ ಹಸ್ತಾಂತರಿಸಲಾಗಿತ್ತು. ಈ ಬಗ್ಗೆ ಪ್ರಶ್ನೆ ಮಾಡಲಾಗಿದ್ದು, ವಿಚಾರಣೆಗೆ ಆಗ್ರಹಿಸಿದ್ದಾರೆ.

ಕಳೆದ ಏಳು ತಿಂಗಳುಗಳಲ್ಲಿ ರಮೋಲಾ ಅವರು ನೋಂದಣಿ ಅಧಿಕಾರಿಗಳಿಗೆ ಹಲವು ದೂರುಗಳನ್ನು ಸಲ್ಲಿಸಿದ್ದು. 1993 ರಲ್ಲಿ ನಡೆದಿರುವ ಗಿಫ್ಟ್ ಡೀಡ್​​ ಬಗ್ಗೆ ತಮಗೆ ಯಾವುದೇ ಮಾಹಿತಿ ಇರಲಿಲ್ಲ ಮತ್ತು ತಾವು ಎಂದಿಗೂ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಜಲ್ಸಾ ಆಸ್ತಿಯು ಜಯಾ ಬಚ್ಚನ್ ಅವರಿಗೆ ವರ್ಗಾವಣೆಗೊಳ್ಳುವ ಮೊದಲು ರಮೋಲಾ ಅವರ ಹೆಸರಿನಲ್ಲಿ ದಾಖಲಾಗಿತ್ತು. ಸರ್ಕಾರದ ಪ್ರಾಪರ್ಟಿ ಕಾರ್ಡ್‌ನಿಂದ ರಮೋಲಾ ಅವರ ಹೆಸರನ್ನು ತೆಗೆದುಹಾಕಿ ಜಯಾ ಅವರ ಹೆಸರನ್ನು ಸೇರಿಸಲು ಪ್ರಯತ್ನಗಳು ನಡೆದಿದೆ ಎನ್ನಲಾಗಿದೆ. ಕಪೋಲ್ ಹೌಸಿಂಗ್ ಸೊಸೈಟಿ ದಾಖಲೆಗಳಲ್ಲಿ ಜಯಾ ಅವರೇ ಮಾಲೀಕರೆಂದು ನಮೂದಿಸಲಾಗಿದೆ ಎಂದು ವರದಿಯಾಗಿದೆ, ಆದರೆ ಪ್ರಾಪರ್ಟಿ ಕಾರ್ಡ್‌ನಲ್ಲಿ ಇನ್ನೂ ರಮೋಲಾ ಅವರ ಹೆಸರಿದೆ. ಈ ವ್ಯತ್ಯಾಸವು ಗಿಫ್ಟ್ ಡೀಡ್ ಅನ್ನು ಹೇಗೆ ನೊಂದಾವಣಿ ಮಾಡಲಾಯ್ತು ಎಂಬ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಒಡಂಬಡಿಕೆಯನ್ನು (ಡೀಡ್) ಸರಳ ಕಾಗದದಲ್ಲಿ ಬರೆಯಲಾಗಿದೆ, ಆ ಸಮಯದಲ್ಲಿ ಯಾವುದೇ ಮುದ್ರಾಂಕ ಶುಲ್ಕವನ್ನು (ಸ್ಟ್ಯಾಂಪ್ ಡ್ಯೂಟಿ) ಪಾವತಿಸಲಾಗಿಲ್ಲ ಮತ್ತು ಅದಕ್ಕೆ ಯಾವುದೇ ಸಾಕ್ಷಿಗಳೂ ಇರಲಿಲ್ಲ. ಈ ದಾಖಲೆಯನ್ನು ನಂತರ ಅಭಯ್ ಯೋಜನಾ ಯೋಜನೆಯಡಿ ನೋಂದಾಯಿಸಲಾಗಿದೆ ಮತ್ತು ಕ್ರಮಬದ್ಧಗೊಳಿಸಲಾಗಿದೆ. ಇದೆಲ್ಲವನ್ನೂ ರಮೋಲಾ ಬಚ್ಚನ್ ಅವರು ಪ್ರಶ್ನೆ ಮಾಡಿದ್ದಾರೆ.

ಈ ದೂರು ಅಂಧೇರಿಯ ಸಹಕಾರಿ ಸಂಘಗಳ ಉಪ ರಿಜಿಸ್ಟ್ರಾರ್ ಕಚೇರಿಯನ್ನು ತಲುಪಿದ್ದು, ಉಪ ರಿಜಿಸ್ಟ್ರಾರ್ ಫೈಯಾಜ್ ಮುಲಾನಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ವಿಚಾರಣೆ ಆರಂಭವಾಗಿದೆ ಮತ್ತು ಎದುರಾಳಿ ಪಕ್ಷಗಳಿಗೆ ತಮ್ಮ ಉತ್ತರಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಬಚ್ಚನ್ ಕುಟುಂಬದವರು, ಇದು ಕುಟುಂಬದ ಆಂತರಿಕ ವ್ಯವಹಾರ ಎಂದಷ್ಟೆ ಹೇಳಿದ್ದಾರೆ.

ಜಲ್ಸಾ ಮುಂಬೈನ ಅತ್ಯಂತ ಪ್ರಸಿದ್ಧ ಸೆಲೆಬ್ರಿಟಿ ಮನೆಗಳಲ್ಲಿ ಒಂದಾಗಿದೆ ಮತ್ತು ದಶಕಗಳಿಂದ ಬಚ್ಚನ್ ಕುಟುಂಬದೊಂದಿಗೆ ನಂಟನ್ನು ಹೊಂದಿದೆ. ಇದನ್ನು ಹಿಂದೆ ‘ಮನ್ಸಾ’ ಎಂದು ಕರೆಯಲಾಗುತ್ತಿತ್ತು ಈ ಮನೆ ಖ್ಯಾತ ನಿರ್ಮಾಪಕ ಎನ್.ಸಿ. ಸಿಪ್ಪಿ ಅವರಿಗೆ ಸೇರಿತ್ತು. 1982 ರ ‘ಸತ್ತೆ ಪೆ ಸತ್ತಾ’ ಚಿತ್ರಕ್ಕಾಗಿ ಅಮಿತಾಭ್ ಅವರಿಗೆ ಸಂಭಾವನೆಯಾಗಿ ಈ ಮನೆಯನ್ನು ಸಂಭಾವನೆ ರೂಪದಲ್ಲಿ ನೀಡಲಾಗಿತ್ತು. ಆದರೆ ಈ ಮನೆಯನ್ನು ಬಚ್ಚನ್ ಅವರು ಒಮ್ಮೆ ಮಾರಾಟ ಮಾಡಿದ್ದರು, ಆದರೆ ಮತ್ತೆ ಅದನ್ನು ಖರೀದಿ ಮಾಡಿದ್ದರು. ಈಗ ಮನೆಯ ಮಾಲೀಕತ್ವದ ಬಗ್ಗೆ ಪ್ರಶ್ನೆ ಮಾಡಲಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಹಿಳಾ ಮೀಸಲಾತಿ ಮಸೂದೆಗಾಗಿ ಸಂಸತ್ತಿನ ವಿಶೇಷ ಅಧಿವೇಶನ ನಡೆಯುವ ಸಾಧ್ಯತೆ; ಮಸೂದೆ ಅಂಗೀಕಾರದ ವಿಶ್ವಾಸದಲ್ಲಿ ಕೇಂದ್ರ ಸರ್ಕಾರಆರನೇ ತರಗತಿ ವಿದ್ಯಾರ್ಥಿನಿ ಮೇಲೆ ಐದನೇ ತರಗತಿಯ ವಿದ್ಯಾರ್ಥಿಯಿಂದ ಹಲ್ಲೆ: 14 ದಿನಗಳ ಸಾವು-ಬದುಕಿನ ಹೋರಾಟದ ಬಳಿಕ ಮೃತಪಟ್ಟ ಬಾಲಕಿಅಮಿತಾಬ್ ಬಚ್ಚನ್ ಅವರ ಜಲ್ಸಾ ಮನೆ ಮಾಲೀಕತ್ವದ ಬಗ್ಗೆ ಪ್ರಶ್ನೆ: ಸಹೋದರನ ಪತ್ನಿಯಿಂದ ದೂರು ದಾಖಲು‘ಪಾನ್ ಕಾರ್ಡ್’ ಬಳಕೆದಾರರಿಗೆ ಬಿಗ್ ಅಲರ್ಟ್! ಈ 5 ನಿಯಮಗಳು ಗೊತ್ತಿಲ್ಲದಿದ್ದರೆ ₹10,000 ದಂಡ ಕಟ್ಟಬೇಕಾಗಬಹುದು!ರೈಲಿನಲ್ಲಿ ಭೀಕರ ಕೃತ್ಯ: ‘ಬ್ಯಾಡ್ ಟಚ್’ ಪ್ರಶ್ನಿಸಿದ ಯುವತಿಯನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಿದ ಕಾಮುಕ!ನೇಪಾಳದಲ್ಲಿ ಘೋರ ದುರಂತ ; ಕಂದಕಕ್ಕೆ ಎಲೆಕ್ಟ್ರಿಕ್ ಬಸ್ ಉರುಳಿಬಿದ್ದು 10 ಮಂದಿ ಸಾವುದುನಿಯಾ ವಿಜಯ್ ಬಗ್ಗೆ ಅವಹೇಳನಕಾರಿ ಹೇಳಿಕೆ; ತಮಿಳು ನಟನ ವಿರುದ್ಧ ಕನ್ನಡಿಗರ ಆಕ್ರೋಶ, ಕ್ಷಮೆಗೆ ಪಟ್ಟು!ಪಂಜಾಬ್‌ನಲ್ಲಿ ಐಎಸ್‌ಐ ಪ್ರಭಾವದ ಶಂಕೆಮೋದಿ ಅವರನ್ನು ಹೊಗಳಿದ ಸ್ಯಾಮ್ ಪಿತ್ರೋಡಾಕುಲ್ಗಾಮ್ ಸಿಆರ್‌ಪಿಎಫ್ ದಾಳಿ