ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಮತ್ತು ಬೋಟ್ ಸಹ-ಸಂಸ್ಥಾಪಕ ಅಮನ್ ಗುಪ್ತಾ ಕೈಜೋಡಿಸಿ ಪುರುಷರಿಗಾಗಿ ವಿಶೇಷ ಸ್ಕಿನ್‌ಕೇರ್ ಬ್ರ್ಯಾಂಡ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ಈ ಹೊಸ ಉತ್ಪನ್ನಗಳ ಜಾಹೀರಾತು ವಿಡಿಯೋವನ್ನು ರಣವೀರ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಟನ ಸಖತ್ ಹಾಟ್ ಮತ್ತು ಬೋಲ್ಡ್ ಅವತಾರ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.
ಹ್ಯಾಂಡ್‌ಸಮ್ ಇಂಡಿಯನ್ ಮ್ಯಾನ್ ಎಂಬ ಹೆಸರಿನ ಈ ಬ್ರ್ಯಾಂಡ್‌ನ ಜಾಹೀರಾತಿನಲ್ಲಿ ಧುರಂಧರ್ ಚಿತ್ರದ ನಟ ತಮ್ಮ ಸಿಕ್ಸ್ ಪ್ಯಾಕ್ ಆಬ್ಸ್, ಕಟ್ಟುಮಸ್ತಾದ ದೇಹ ಮತ್ತು ಆಕರ್ಷಕ ಲುಕ್ ಪ್ರದರ್ಶಿಸಿದ್ದಾರೆ. ಜಾಹೀರಾತಿನಲ್ಲಿ ರಣವೀರ್ ಕೂದಲನ್ನು ಹಿಂದಕ್ಕೆ ಸರಿಸುವ ಶೈಲಿಯು ಅವರ ಧುರಂಧರ್ ಸಿನಿಮಾದ ದೃಶ್ಯವನ್ನು ನೆನಪಿಸುವಂತಿದ್ದು, ನೆಟ್ಟಿಗರ ನಿದ್ದೆಗೆಡಿಸಿದೆ.
ಈ ಜಾಹೀರಾತಿನಲ್ಲಿ ಪುರುಷರ ಚರ್ಮ ಮತ್ತು ಕೂದಲಿನ ಆರೈಕೆಗಾಗಿ ಶಾಂಪೂ, ಬಾಡಿ ವಾಶ್ ಹಾಗೂ ಫೇಸ್ ವಾಶ್ ಸೇರಿದಂತೆ ಹಲವು ಉತ್ಪನ್ನಗಳನ್ನು ಪರಿಚಯಿಸಲಾಗಿದೆ. ಪುರುಷರ ದಪ್ಪನೆಯ ಚರ್ಮಕ್ಕೆ ಅನುಗುಣವಾಗಿ ಇವುಗಳನ್ನು ವಿನ್ಯಾಸಗೊಳಿಸಲಾಗಿದ್ದು, ಚಳಿಗಾಲ ಮತ್ತು ಮಾಲಿನ್ಯದ ನಡುವೆಯೂ ವರ್ಷಪೂರ್ತಿ ಬಳಸಬಹುದಾಗಿದೆ. ಸ್ವತಃ ತಾವೇ ಈ ಎಲ್ಲಾ ಉತ್ಪನ್ನಗಳನ್ನು ಬಳಸಿ ನೋಡಿರುವುದಾಗಿ ರಣವೀರ್ ಸಿಂಗ್ ತಿಳಿಸಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ. ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಚಾಂದಿನಿ ಭಾಭ್ದಾ ಅವರು ಇವರನ್ನು ಡ್ಯಾಡಿ ಸಿಂಗ್ ಎಂದು ಬಣ್ಣಿಸಿದರೆ, ಸಹನಟ ಉದಯ್‌ಬೀರ್ ಸಂಧು ಹಾಗೂ ಸ್ಟೈಲಿಸ್ಟ್ ಪ್ರಿಯಾಂಕಾ ಕಪಾಡಿಯಾ ನಟನ ಲುಕ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ ರಣವೀರ್ ಸಿಂಗ್ ತಮ್ಮ ಶರ್ಟ್‌ಲೆಸ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದರು. ಆ ಫೋಟೋಗಳಿಗೆ ನಟ ಅರ್ಜುನ್ ರಾಂಪಾಲ್ ಇನ್‌ಸ್ಟಾಗ್ರಾಮ್‌ಗೆ ಬೆಂಕಿ ಹಚ್ಚುವುದನ್ನು ನಿಲ್ಲಿಸು ಎಂದು ತಮಾಷೆಯಾಗಿ ಕಾಲೆಳೆದಿದ್ದರೆ, ಅನಿಲ್ ಕಪೂರ್, ಭೂಮಿ ಪೆಡ್ನೇಕರ್ ಮತ್ತು ಸಾರಾ ಅರ್ಜುನ್ ಕೂಡ ಮೆಚ್ಚುಗೆ ಸೂಚಿಸಿದ್ದರು. ಹಲವು ಅಭಿಮಾನಿಗಳು ರಣವೀರ್ ಅವರ ಈ ಲುಕ್ ನೋಡಿ ಲೇಡೀಸ್ ವರ್ಸಸ್ ರಿಕ್ಕಿ ಬಹ್ಲ್ ಚಿತ್ರದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.