LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆ್ಯಂಕರ್ ಅನುಶ್ರೀ ಅವರ ನಿಜವಾದ ಹೆಸರು ಏನು ಗೊತ್ತಾ? ಗೋಲ್ಡನ್ ಸ್ಟಾರ್ ಗಣೇಶ್ ಮುಂದೆ ರಿವೀಲ್!

ಬೆಂಗಳೂರು: ಅರುಳು ಹುರಿದಂತೆ ಪಟಪಟ ಮಾತನಾಡುವ ಆ್ಯಂಕರ್ ಅನುಶ್ರೀ ಯಾರಿಗೆ ಗೊತ್ತಿಲ್ಲ ಹೇಳಿ? ಚಿಕ್ಕ ಮಕ್ಕಳಿಂದ ಹಿಡಿದು ಅಜ್ಜ-ಅಜ್ಜಿಯಂದಿರವರೆಗೂ ಕನ್ನಡಿಗರಿಗೆ ಚಿರಪರಿಚಿತವಾಗಿರುವ ಈ ನಿರೂಪಕಿ, ತಮ್ಮ ಮಾತಿನ ಶೈಲಿ, ನಗು ಹಾಗೂ ಚುರುಕಾದ ನಿರೂಪಣೆಯಿಂದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಅನುಶ್ರೀ, ಇದೀಗ ತಮ್ಮ ನಿಜವಾದ ಹೆಸರಿನ ಹಿಂದಿರುವ ಕುತೂಹಲಕಾರಿ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.

ಆದರೆ ಅನುಶ್ರೀ ಅವರ ನಿಜವಾದ ಹೆಸರು ಏನು? ಗೋಲ್ಡನ್ ಸ್ಟಾರ್ ಗಣೇಶ್ ಮುಂದೆ ಅವರು ಬಿಚ್ಚಿಟ್ಟ ಆ ಗುಟ್ಟೇನು? ಎಂಬ ಕುತೂಹಲ ಮೂಡಿದೆ.ಗೋಲ್ಡನ್ ಸ್ಟಾರ್ ಗಣೇಶ್ ಅವರ ಮುಂದೆ ಮಾತನಾಡುವ ವೇಳೆ ನಿರೂಪಕಿ ಅನುಶ್ರೀ ತಮ್ಮ ಹೆಸರಿನ ಹಿಂದಿರುವ ಆಸಕ್ತಿದಾಯಕ ಸಂಗತಿಯನ್ನು ಹಂಚಿಕೊಂಡಿದ್ದಾರೆ.

ಗಣೇಶ್ ಮುಂದೆ ಹೆಸರು ರಹಸ್ಯ ಬಿಚ್ಚಿಟ್ಟ ಅನುಶ್ರೀ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಬೃಂದಾವಿಹಾರಿ’ ಸಿನಿಮಾ ನವೆಂಬರ್ 20ರಂದು ಬಿಡುಗಡೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಅನುಶ್ರೀ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಚಿತ್ರತಂಡದೊಂದಿಗೆ ಸಂವಾದ ನಡೆಸಿದ್ದಾರೆ. ಈ ಮಾತುಕತೆಯಲ್ಲಿ ದೇವರ ನಂಬಿಕೆ ಹಾಗೂ ಪೂಜೆಯ ವಿಚಾರ ಚರ್ಚೆಗೆ ಬಂದಿದೆ.

ಗಣೇಶ್ ಅವರು ತಾವು ದೇವರನ್ನು ನಂಬುವುದಾಗಿ, ಧೈರ್ಯಕ್ಕಾಗಿ ಆಂಜನೇಯನನ್ನು ಹಾಗೂ ವಿದ್ಯೆ-ಬುದ್ಧಿಗಾಗಿ ಸರಸ್ವತಿಯನ್ನು ಪ್ರಾರ್ಥಿಸುವುದಾಗಿ ಹೇಳಿದ್ದಾರೆ. ಹಣಕ್ಕಾಗಿ ಲಕ್ಷ್ಮಿಯನ್ನು ಆರಾಧಿಸುತ್ತೇವೆ ಎಂದೂ ಮಾತನಾಡಿದ್ದಾರೆ. ಈ ವೇಳೆ ಅನುಶ್ರೀ, ಗಣೇಶ್ ಅವರು ಲಲಿತಾ ಸಹಸ್ರನಾಮ ಪಠಿಸುವ ವಿಚಾರ ತಿಳಿದು, ತನಗೂ ಒಂದು ಮಂತ್ರ ಹೇಳಿಕೊಡುವಂತೆ ಕೇಳಿಕೊಂಡಿದ್ದಾರೆ.

‘ನನ್ನ ನಿಜವಾದ ಹೆಸರು ಲಲಿತಾ’

ತಾವು ಕೂಡ ದೇವಿಯ ಆರಾಧಕಿ ಎಂದು ಹೇಳಿದ ಅನುಶ್ರೀ, ತಮ್ಮ ಹೆಸರಿನ ಹಿಂದಿರುವ ವಿಶೇಷ ವಿಚಾರವನ್ನು ಹಂಚಿಕೊಂಡಿದ್ದಾರೆ.”ನನ್ನ ನಿಜವಾದ ಹೆಸರು ಅನುಶ್ರೀ ಅಲ್ಲ. ನಾನು ನಮ್ಮ ತಾಯಿ ಲಲಿತಾ ಸಹಸ್ರನಾಮ ಓದಿ ಹುಟ್ಟಿರುವ ಮಗಳು. ನನ್ನ ನಿಜವಾದ ಹೆಸರು ಲಲಿತಾ” ಎಂದು ನಗುತ್ತಾ ಹೇಳಿದ್ದಾರೆ. ಅನುಶ್ರೀ ಅವರ ಈ ಮಾತು ಕೇಳಿ ಗಣೇಶ್ ಕೂಡ ಅಚ್ಚರಿಗೊಂಡಿದ್ದಾರೆ.

ನಿರೂಪಣಾ ಕ್ಷೇತ್ರದಲ್ಲಿ ದೊಡ್ಡ ಹೆಸರು

ಮಂಗಳೂರಿನ ‘ನಮ್ಮ ಟಿವಿ’ಯಲ್ಲಿ ‘ಟೆಲಿ ಅಂತ್ಯಾಕ್ಷರಿ’ ಕಾರ್ಯಕ್ರಮದ ಮೂಲಕ ನಿರೂಪಣಾ ಕ್ಷೇತ್ರಕ್ಕೆ ಕಾಲಿಟ್ಟ ಅನುಶ್ರೀ, ಬಳಿಕ ‘ಡಿಮ್ಯಾಂಡಪ್ಪೋ ಡಿಮ್ಯಾಂಡು’ ಕಾರ್ಯಕ್ರಮದಿಂದ ಜನಪ್ರಿಯತೆ ಗಳಿಸಿದರು.

ನಂತರ ‘ಸರಿಗಮಪ’, ‘ಕಾಮಿಡಿ ಕಿಲಾಡಿಗಳು’, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಸೇರಿದಂತೆ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ನಿರೂಪಿಸಿ ಕನ್ನಡಿಗರ ಮನ ಗೆದ್ದಿದ್ದಾರೆ. ಸಿನಿಮಾ ಪ್ರಶಸ್ತಿ ಸಮಾರಂಭಗಳಲ್ಲಿಯೂ ತಮ್ಮ ನಿರೂಪಣಾ ಕೌಶಲ ಮೆರೆದಿದ್ದಾರೆ.ನಿರೂಪಣೆಯ ಜೊತೆಗೆ ಸಿನಿಮಾಗಳಲ್ಲೂ ನಟಿಸಿರುವ ಅನುಶ್ರೀ, ‘ಬೆಂಕಿಪಟ್ಟಣ’, ‘ಉಪ್ಪು ಹುಳಿ ಖಾರ’ ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಮುರಳಿ ಮೀಟ್ಸ್ ಮೀರಾ’ ಸಿನಿಮಾದ ಕಂಠದಾನಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಇಂದು ಕನ್ನಡ ಮನರಂಜನಾ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತು ಮೂಡಿಸಿರುವ ಅನುಶ್ರೀ, ತಮ್ಮ ಪ್ರತಿಭೆ, ಪರಿಶ್ರಮ ಹಾಗೂ ವಿಶಿಷ್ಟ ಮಾತಿನ ಶೈಲಿಯಿಂದ ಅಭಿಮಾನಿಗಳ ಪ್ರೀತಿಯನ್ನು ಉಳಿಸಿಕೊಂಡಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಾಲ್ ಟ್ಯಾಂಪರಿಂಗ್ ಗೆ ಪಾಕಿಸ್ತಾನ ಬಳಸುತ್ತಿದ್ದದ್ದು ಬಾಟಲ್ ಕ್ಯಾಪ್: ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದ ಶೋಯೆಬ್ ಅಖ್ತರ್ ಸ್ಫೋಟಕ ಹೇಳಿಕೆ1 ಕಂಪ್ಯೂಟರ್ ನಿಂದ 73 ಕೋಟಿ ವರೆಗೆ: 1 ಕಂಪ್ಯೂಟರ್ ನಿಂದ ಗೇಮ್ ಅಭಿವೃದ್ಧಿ; 100 ಕ್ಕೂ ಹೆಚ್ಚು ವಿಡಿಯೋ ಗೇಮ್ಸ್ ರಚಿಸಿದ ಬೆಂಗಳೂರಿನ ವ್ಯಕ್ತಿ: 73 ಕೋಟಿಗೆ ಖರೀದಿಸಿದ ರಾಕ್ ಸ್ಟಾರ್ ಗೇಮ್ಸ್ ಸಂಸ್ಥೆಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಿಡುಗಡೆ ನಿರ್ಣಯ ಬಗ್ಗೆ ಶ್ರೀಲಂಕಾ ಸಂಸತ್ತಿನಲ್ಲಿ ನ. 21 ರಂದು ಮಹತ್ವದ ಚರ್ಚೆUPI ಶುಲ್ಕ ವಿಳಂಬದಿಂದ ಪಾವತಿ ಸೇವಾ ಕಂಪನಿಗಳ ಷೇರುಗಳಿಗೆ ಹೊಡೆತ; ನೀವು ಈಗ Paytm, MobiKwik ಷೇರುಗಳನ್ನು ಖರೀದಿಸಬೇಕೇ?‘ಭಾರತ ಈಗ ಸಂಪೂರ್ಣ ಹೊಸ ಆಟವನ್ನಾಡುತ್ತಿದೆ’: GTA VI ಕ್ರೇಜ್ ಗೆ ಕೈಜೋಡಿಸಿದ ಪ್ರಧಾನಿ ಮೋದಿBREAKING: ಟಿವಿಕೆ ಶಾಸಕ ವಿ.ಎಸ್. ಬಾಬು ಹೃದಯಾಘಾತಕ್ಕೆ ಬಲಿರಣವೀರ್ ಸಿಂಗ್ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ; ‘ಪ್ರಳಯ’ ಚಿತ್ರದ ಫೋಟೋಗಳು ಲೀಕ್!ಭೀಕರ ರಸ್ತೆ ಅಪಘಾತ; ಕೈ ಕಳೆದುಕೊಂಡ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ!1 ಲೀಟರ್ ಹಾಲಿನಿಂದ ಎಷ್ಟು ಗ್ರಾಂ ಹಾಲಿನ ಪುಡಿ ತಯಾರಾಗುತ್ತೆ ಗೊತ್ತಾ? ಇಲ್ಲಿದೆ ಅಚ್ಚರಿಯ ಲೆಕ್ಕಾಚಾರಆಡಿಷನ್‌ಗೆ ಫೋಟೋ ಕೇಳಿದಾಗ ಪಾಸ್‌ಪೋರ್ಟ್ ಸೈಜ್ ಫೋಟೋ ಕೊಟ್ಟಿದ್ದ ಅನುಷ್ಕಾ! ಅಂದು ಹೇಗಿದ್ದರು ಗೊತ್ತಾ?