ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಬಹುಭಾಷಾ ನಟಿ ತಮನ್ನಾ ಭಾಟಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ದಿ ವಾನ್ ಸಿನಿಮಾ ಈಗ ಒಟಿಟಿ ವೀಕ್ಷಕರಿಗೆ ಉಚಿತವಾಗಿ ಲಭ್ಯವಾಗಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಈ ಚಿತ್ರವನ್ನು ಇಂದಿನಿಂದ ಚಂದಾದಾರರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ವೀಕ್ಷಿಸಬಹುದು.
ಇದುವರೆಗೂ ಈ ಸಿನಿಮಾವನ್ನು ಪ್ರೈಮ್ ವಿಡಿಯೋದಲ್ಲಿ ಬಾಡಿಗೆ ಆಧಾರದ ಮೇಲೆ ಅಂದರೆ ಪೇ-ಪರ್-ವ್ಯೂ ಮಾದರಿಯಲ್ಲಿ ಮಾತ್ರ ನೋಡಲು ಅವಕಾಶವಿತ್ತು. ಇದೀಗ ಚಿತ್ರತಂಡವು ಪೇ-ವಾಲ್ ತೆಗೆದುಹಾಕಿದ್ದು, ಪ್ರೈಮ್ ಚಂದಾದಾರಿಕೆ ಹೊಂದಿರುವ ಎಲ್ಲಾ ಅಭಿಮಾನಿಗಳು ಇಂದಿನಿಂದ ಉಚಿತವಾಗಿ ಸಿನಿಮಾವನ್ನು ಆನಂದಿಸಬಹುದಾಗಿದೆ.
ದೀಪಕ್ ಕುಮಾರ್ ಮಿಶ್ರಾ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಬಾಲಿವುಡ್ ಚಿತ್ರವು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡಿತ್ತು. ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ತಮನ್ನಾ ಭಾಟಿಯಾ ಅವರೊಂದಿಗೆ ಶ್ವೇತಾ ತಿವಾರಿ, ಸುನೀಲ್ ಗ್ರೋವರ್, ಮನೀಶ್ ಪಾಲ್ ಹಾಗೂ ಅನೂಪ್ ಸೋನಿ ಅವರಂತಹ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಏಕ್ತಾ ಕಪೂರ್ ಮತ್ತು ಶೋಭಾ ಕಪೂರ್ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.