LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮುದ್ದಿನ ಮಗಳು ಅಲ್ಲು ಅರ್ಹಾ ಹುಟ್ಟುಹಬ್ಬಕ್ಕೆ ಭಾವುಕ ಶುಭಾಶಯ ಕೋರಿದ ಐಕಾನ್ ಸ್ಟಾರ್ ಅಲ್ಲು ಅರ್ಜುನ್: ಫೋಟೋ ವೈರಲ್!

ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ ವೈಯಕ್ತಿಕ ಜೀವನದ ಸುಂದರ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವುದರಲ್ಲಿ ಸದಾ ಮುಂದಿರುತ್ತಾರೆ. ಇಂದು ತಮ್ಮ ಮುದ್ದಿನ ಮಗಳು ಅಲ್ಲು ಅರ್ಹಾ ಹುಟ್ಟುಹಬ್ಬದ ಪ್ರಯುಕ್ತ ಅಲ್ಲು ಅರ್ಜುನ್ ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳ ಮನಗೆದ್ದಿದೆ.

ಮಗಳು ಅರ್ಹಾ ಜೊತೆಗಿರುವ ಸುಂದರ ಫೋಟೋವನ್ನು ಪ್ರಕಟಿಸಿರುವ ನಟ, ನನ್ನ ಜೀವನದ ಸಂತೋಷಕ್ಕೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ. ತಂದೆ ಮತ್ತು ಮಗಳ ಈ ಮುದ್ದಾದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಈಗಾಗಲೇ ಮೂರು ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಮತ್ತು ಸಾವಿರಾರು ಶುಭಾಶಯದ ಕಾಮೆಂಟ್‌ಗಳನ್ನು ಪಡೆದುಕೊಂಡಿದೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ, ಅಲ್ಲು ಅರ್ಜುನ್ ಸದ್ಯ ಅಟ್ಲೀ ನಿರ್ದೇಶನದ ಫ್ಯಾಂಟಸಿ ಆಕ್ಷನ್ ಡ್ರಾಮಾ ರಾಕಾ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಕಾಲಿವುಡ್ ನಿರ್ದೇಶಕ ಲೋಕೇಶ್ ಕನಗರಾಜ್ ಅವರೊಂದಿಗೆ ಮತ್ತೊಂದು ದೊಡ್ಡ ಪ್ರಾಜೆಕ್ಟ್‌ನಲ್ಲೂ ಅಲ್ಲು ಅರ್ಜುನ್ ಕೈಜೋಡಿಸಲಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಶ್ಚಿಮ ಏಷ್ಯಾದ ಸಂಘರ್ಷ, ವದಂತಿಗಳ ನಡುವೆಯೂ ಸಮರ್ಪಕ ಅನಿಲ ಪೂರೈಕೆ: ಪ್ರಧಾನಿ ಮೋದಿಪಾರ್ಕ್ ನಲ್ಲಿದ್ದ ಯುವ ಜೋಡಿ ಮೇಲೆ ಹಲ್ಲೆ ಕೇಸ್: 8 ಮಂದಿ ಅಪ್ರಾಪ್ತರು ವಶಕ್ಕೆಆಹಾರ ಸುರಕ್ಷತಾ ಪರೀಕ್ಷೆಯಲ್ಲಿ ವಿಫಲವಾದ ಪತಂಜಲಿ ಹಸುವಿನ ತುಪ್ಪಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಬಗ್ಗೆ ಮಾಹಿತಿ ನೀಡಿದವರಿಗೆ 9 ಕೋಟಿ ಬಹುಮಾನ ಘೋಷಿಸಿದ ಎಫ್‌ಬಿಐ₹1.4 ಲಕ್ಷ ಮೌಲ್ಯದ ಗುಲಾಬಿ ಬಣ್ಣದ ಉಡುಪಿನಲ್ಲಿ ಮಿಂಚಿದ ಕಿಯಾರಾ ಅಡ್ವಾಣಿ: ಮೆಟರ್ನಿಟಿ ಫ್ಯಾಶನ್ ನಲ್ಲಿ ಬೋಲ್ಡ್ ಲುಕ್ ನಲ್ಲಿ ಗಮನ ಸೆಳೆದ ನಟಿಚಿನ್ನದ ಆಭರಣದಲ್ಲೂ ಕಲಬೆರಕೆ ಭೀತಿ! 22 ಕ್ಯಾರೆಟ್ ಎಂದು ನಂಬಿ ಖರೀದಿಸಿದರೆ ಮೋಸವಾಗುತ್ತಾ? ರೀನಿಯಂ ಲೋಹದ ಬಗ್ಗೆ ಎಚ್ಚರರೈಲಿನಲ್ಲಿ ಬೈಕ್, ವಸ್ತುಗಳನ್ನು ಕಳುಹಿಸುತ್ತಿದ್ದೀರಾ? ಒಂದು ಗಂಟೆ ತಡವಾದರೂ ಬೀಳುತ್ತೆ ದಂಡ !ಡ್ರೆಸ್ಸಿಂಗ್ ರೂಮ್ ಮಾಹಿತಿ ಸೋರಿಕೆ ಆರೋಪ: ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕೇಂದ್ರ ಗುತ್ತಿಗೆಯಿಂದ ಮೊಹಮ್ಮದ್ ರಿಜ್ವಾನ್ ಔಟ್!ಮುದ್ದಿನ ಮಗಳು ಅಲ್ಲು ಅರ್ಹಾ ಹುಟ್ಟುಹಬ್ಬಕ್ಕೆ ಭಾವುಕ ಶುಭಾಶಯ ಕೋರಿದ ಐಕಾನ್ ಸ್ಟಾರ್ ಅಲ್ಲು ಅರ್ಜುನ್: ಫೋಟೋ ವೈರಲ್!BREAKING : ಬಿಹಾರದಲ್ಲಿ 9.76 ಕಿ.ಮೀ ಉದ್ದದ ‘ನಿತೀಶ್ ಸೇತು’ ಉದ್ಘಾಟಿಸಿದ ಪ್ರಧಾನಿ ಮೋದಿ |WATCH VIDEO