LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿವರವಾದ ಪ್ರಸ್ತಾವನೆ ಸಲ್ಲಿಸಲು ಪೋಕೆಮಾನ್ ಕಂಪನಿಗೆ ಸೂಚನೆ: ಕೆ.ಜೆ. ಜಾರ್ಜ್

ಬೆಂಗಳೂರು-: ಜಾಗತಿಕವಾಗಿ ಜನಪ್ರಿಯವಾಗಿರುವ ಪೋಕೆಮಾನ್ ಬ್ರ್ಯಾಂಡ್‌ ನ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ‘ಪೋಕೆಮಾನ್ ಟ್ರೆಷರ್ ಹಂಟ್’ ಸೇರಿದಂತೆ ಹಲವು ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಧ್ಯತೆ ಕುರಿತು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮತ್ತು ಜಪಾನ್‌ನ The Pokémon Company ಪ್ರತಿನಿಧಿಗಳ ನಡುವೆ ಚರ್ಚೆ ನಡೆದಿದೆ.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಅವರನ್ನು ಭೇಟಿಯಾದ ಪೋಕೆಮಾನ್ ಕಂಪನಿಯ ಪ್ರತಿನಿಧಿಗಳು, ಕರ್ನಾಟಕದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಬಹುದಾದ ಅನುಭವಾಧಾರಿತ ಕಾರ್ಯಕ್ರಮಗಳು ಪ್ರಸ್ತಾವನೆಗಳನ್ನು ಹಂಚಿಕೊಂಡರು.

ಪ್ರಮುಖವಾಗಿ ಬೆಂಗಳೂರಿನ ವಿವಿಧ ಗುರುತಿಸಲಾದ ಸ್ಥಳಗಳನ್ನು ಸಂಪರ್ಕಿಸುವ ‘Treasure Hunt’ ಮಾದರಿಯ ಕಾರ್ಯಕ್ರಮ ಆಯೋಜಿಸಿ, ಮಕ್ಕಳು, ಯುವಜನರು, ಕುಟುಂಬಗಳು ಹಾಗೂ ಪ್ರವಾಸಿಗರನ್ನು ನಗರದ ವಿವಿಧ ಭಾಗಗಳಿಗೆ ಆಕರ್ಷಿಸುವ ಪರಿಕಲ್ಪನೆ ಕುರಿತು ಚರ್ಚಿಸಲಾಯಿತು.

ಇದರ ಜೊತೆಗೆ Pokémon Run, Parade ಹಾಗೂ ಇತರೆ ಸಾರ್ವಜನಿಕ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿ, ಕರ್ನಾಟಕದ ಹೊರಗಿನ ಪ್ರವಾಸಿಗರನ್ನೂ ಬೆಂಗಳೂರಿಗೆ ಸೆಳೆಯುವ ಸಾಧ್ಯತೆಯನ್ನು ಪರಿಶೀಲಿಸಲಾಯಿತು.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, “ಜಾಗತಿಕವಾಗಿ ಜನಪ್ರಿಯವಾಗಿರುವ ಬ್ರ್ಯಾಂಡ್‌ಗಳೊಂದಿಗೆ ಅನುಭವಾಧಾರಿತ ಕಾರ್ಯಕ್ರಮಗಳನ್ನು ರೂಪಿಸುವುದರಿಂದ ವಿಶೇಷವಾಗಿ ಯುವಜನರು ಮತ್ತು ಕುಟುಂಬ ಪ್ರವಾಸಿಗರನ್ನು ಹೊಸ ರೀತಿಯಲ್ಲಿ ತಲುಪಲು ಸಾಧ್ಯವಾಗುತ್ತದೆ. ಮಾನ್ಯ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ಮಾರ್ಗದರ್ಶನದಲ್ಲಿ ಬೆಂಗಳೂರಿನ ನಗರ ಪ್ರವಾಸೋದ್ಯಮಕ್ಕೆ ಹೊಸ ಅನುಭವಗಳನ್ನು ಸೇರಿಸುವತ್ತ ನಾವು ಗಮನ ಹರಿಸಿದ್ದೇವೆ. ಪೋಕೆಮಾನ್ ಕಂಪನಿ ವಿವರವಾದ ಪ್ರಸ್ತಾವನೆ ಸಲ್ಲಿಸಿದ ನಂತರ ಸ್ಥಳ, ಸುರಕ್ಷತೆ, ಸಂಚಾರ ಮತ್ತು ಪ್ರವಾಸೋದ್ಯಮದ ಪರಿಣಾಮಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು,” ಎಂದರು.

ಸಭೆಯಲ್ಲಿ The Pokémon Company ಕಾರ್ಪೊರೇಟ್ ಅಧಿಕಾರಿ ಹಾಗೂ Pokémon Singapore ಮತ್ತು Taiwan ನಿರ್ದೇಶಕ ಸುಸುಮು ಫುಕುನಾಗಾ, ಕಂಪನಿಯ ಇತರೆ ಪ್ರತಿನಿಧಿಗಳು ಹಾಗೂ KSTDC ವ್ಯವಸ್ಥಾಪಕ ನಿರ್ದೇಶಕ ಶಿವಪ್ರಸಾದ್ ಪಿ.ಆರ್. ಉಪಸ್ಥಿತರಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿವರವಾದ ಪ್ರಸ್ತಾವನೆ ಸಲ್ಲಿಸಲು ಪೋಕೆಮಾನ್ ಕಂಪನಿಗೆ ಸೂಚನೆ: ಕೆ.ಜೆ. ಜಾರ್ಜ್ತವರಿನಲ್ಲಿ ಸೋಲಿನ ಸುಳಿಯಿಂದ ಪಾರಾದ ಮ್ಯಾಂಚೆಸ್ಟರ್ ಸಿಟಿ: 86ನೇ ನಿಮಿಷದ ರಯಾನ್ ಚೆರ್ಕಿ ಗೋಲಿನಿಂದ ನಪೋಲಿ ವಿರುದ್ಧ ರೋಚಕ ಡ್ರಾದಲೈ ಲಾಮಾ ಅವರಿಗೆ ಲುಟಿಯೆನ್ಸ್ ದೆಹಲಿಯಲ್ಲಿ ಬಂಗಲೆ ಮಂಜೂರುಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌–ಸಮಾಜವಾದಿ ಪಕ್ಷದ ಮೈತ್ರಿಯಲ್ಲಿ ಭಿನ್ನಮತಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಪಂಚಪ್ರಾಣ ಈ ಖಾರದ ಚಟ್ನಿ: ಕೇವಲ 5 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಮಹಾರಾಷ್ಟ್ರದ ಥೇಚಾಪಾಕಿಸ್ತಾನಿ ವೆಬ್ ಸರಣಿ ಪ್ರಸಾರಕ್ಕೆ ಭಾರತದಲ್ಲಿ ನಿಷೇಧ ಮಾಡಿಎರಡು ವರ್ಷಗಳ ಬಳಿಕ ಐಪಿಎಲ್ ಹರಾಜಿಗೆ ಮರಳಿದ ಬೆನ್ ಸ್ಟೋಕ್ಸ್: ಆಟಗಾರರ ಹರಾಜು ಪಟ್ಟಿಯಲ್ಲಿ ಯಾರಿಗೆಲ್ಲಾ ಸ್ಥಾನ?ಪಾಕ್ ವಿರುದ್ಧ ಭಾರತಕ್ಕೆ ರೋಚಕ ಜಯ ತಂದುಕೊಟ್ಟಿದ್ದ ಯುವ ಪ್ರತಿಭೆಗಳಿಗೆ ಬಂಪರ್: ಐಪಿಎಲ್ ಹರಾಜು ಕಣದಲ್ಲಿ ಆರ್ಯವೀರ್ ಸೆಹ್ವಾಗ್, ಮೋಹಿತ್ ಉಲ್ವಾವಿದೇಶಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ: 100 ಕೋಟಿ ರೂ. ಗಡಿ ದಾಟಿ ಮುನ್ನುಗ್ಗುತ್ತಿದೆ ಧನುಷ್, ಸಾಯಿ ಪಲ್ಲವಿ ನಟನೆಯ ಓಂ ಸಿನಿಮಾಸಾವಿರ ಗೋಲುಗಳ ಐತಿಹಾಸಿಕ ದಾಖಲೆಗೆ ಇನ್ನು 13 ಹೆಜ್ಜೆ ಮಾತ್ರ ಬಾಕಿ: ಪೆನಾಲ್ಟಿ ಕಿಕ್ ಮೂಲಕ ಮಿಂಚಿದ ಕ್ರಿಸ್ಟಿಯಾನೊ ರೊನಾಲ್ಡೊ