LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತ ಎ ಮತ್ತು ಶ್ರೀಲಂಕಾ ಎ ಸೆಮಿಫೈನಲ್ ಪಂದ್ಯದಲ್ಲಿ ಹೈಡ್ರಾಮಾ; ಅಂಪೈರ್ ತೀರ್ಪಿಗೆ ಆಕ್ರೋಶ ಹೊರಹಾಕಿದ ವೈಭವ್ ಸೂರ್ಯವಂಶಿ

ದೋಹಾ: ಎಸಿಸಿ ಪುರುಷರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳ ನಡುವಿನ ಹಣಾಹಣಿ ತೀವ್ರ ಕುತೂಹಲದ ಜೊತೆಗೆ ಮೈದಾನದಲ್ಲಿ ಕೆಲಕಾಲ ಬಿಸಿ ವಾತಾವರಣಕ್ಕೂ ಸಾಕ್ಷಿಯಾಯಿತು. ಗುರುವಾರ ನಡೆದ ಈ ಮಹತ್ವದ ಪಂದ್ಯದಲ್ಲಿ ಫೀಲ್ಡ್ ಅಂಪೈರ್ ನೀಡಿದ ಒಂದು ವಿವಾದಾತ್ಮಕ ತೀರ್ಪು ಭಾರತೀಯ ಆಟಗಾರರ ಅಸಮಾಧಾನಕ್ಕೆ ಕಾರಣವಾಯಿತು.

ಭಾರತ ನೀಡಿದ್ದ 318 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುತ್ತಿದ್ದ ಶ್ರೀಲಂಕಾ ಎ ತಂಡ ಉತ್ತಮ ಆರಂಭ ಪಡೆದಿತ್ತು. ಪಂದ್ಯದ 24ನೇ ಓವರ್‌ನಲ್ಲಿ ಭಾರತದ ಬೌಲರ್ ಶಹಬಾಜ್ ಅಹ್ಮದ್ ಎಸೆದ ಚೆಂಡು ಲಂಕಾ ಆರಂಭಿಕ ಆಟಗಾರ ಲಸಿತ್ ಕ್ರೂಸ್ಪುಲ್ಲೆ ಅವರ ಪ್ಯಾಡ್‌ಗೆ ಬಡಿಯಿತು. ಚೆಂಡನ್ನು ಲೆಗ್ ಸೈಡ್‌ನತ್ತ ಬಾರಿಸಲು ಯತ್ನಿಸಿದ ಬ್ಯಾಟರ್ ವಿಫಲರಾಗಿದ್ದರಿಂದ ಭಾರತೀಯ ಆಟಗಾರರು ಬಲವಾದ ಎಲ್‌ಬಿಡಬ್ಲ್ಯೂ ಮನವಿ ಮಾಡಿದರು. ಆದರೆ ಅಂಪೈರ್ ಇದನ್ನು ತಿರಸ್ಕರಿಸಿ ನಾಟೌಟ್ ಎಂದು ತೀರ್ಪು ನೀಡಿದರು.

ಅಂಪೈರ್ ನಿರ್ಧಾರದಿಂದ ಶಹಬಾಜ್ ಅಹ್ಮದ್ ತೀವ್ರ ನಿರಾಸೆಯಿಂದ ತಲೆ ಮೇಲೆ ಕೈಹೊತ್ತು ನಿಂತರೆ, ಶಾರ್ಟ್ ಥರ್ಡ್ ಮ್ಯಾನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಯುವ ಆಟಗಾರ ವೈಭವ್ ಸೂರ್ಯವಂಶಿ ತಕ್ಷಣವೇ ಅಂಪೈರ್ ಬಳಿ ತೆರಳಿ ತೀರ್ಪನ್ನು ಪ್ರಶ್ನಿಸಿದರು. ಬ್ಯಾಟ್‌ಗೆ ಚೆಂಡು ತಗುಲಿದೆಯೇ ಎಂದು ವೈಭವ್ ಅಂಪೈರ್ ಜೊತೆ ವಾಗ್ವಾದಕ್ಕಿಳಿದಂತೆ ಕಂಡುಬಂದಿತು.

ತೀರ್ಪಿನ ಬಗ್ಗೆ ತಾವೂ ಅಸಮಾಧಾನಗೊಂಡಿದ್ದರೂ, ಪರಿಸ್ಥಿತಿ ಕೈಮೀರದಂತೆ ನೋಡಿಕೊಂಡ ಭಾರತ ಎ ತಂಡದ ನಾಯಕ ತಿಲಕ್ ವರ್ಮಾ ತಕ್ಷಣ ಮಧ್ಯಪ್ರವೇಶಿಸಿದರು. ಅಂಪೈರ್ ಬಳಿಯಿಂದ ದೂರ ಸರಿಯುವಂತೆ ವೈಭವ್ ಸೂರ್ಯವಂಶಿಗೆ ಸೂಚಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಟಿವಿ ರೀಪ್ಲೇಗಳಲ್ಲಿ ಚೆಂಡು ಬ್ಯಾಟ್‌ಗೆ ತಗುಲಿತ್ತೇ ಎಂಬುದು ಸ್ಪಷ್ಟವಾಗಿ ಗೋಚರಿಸದಿದ್ದರೂ, ಚೆಂಡು ಲೆಗ್ ಸ್ಟಂಪ್‌ನಿಂದ ಹೊರಹೋಗುತ್ತಿತ್ತು ಎಂಬ ಕಾರಣಕ್ಕೆ ಅಂಪೈರ್ ನಾಟೌಟ್ ನೀಡಿದ್ದಾರೆ ಎನ್ನಲಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಟೋಲ್ ಪಾವತಿ ತಪ್ಪಿಸಲು ನಂಬರ್ ಪ್ಲೇಟ್ ತಿರುಚಿದರೆ 5 ಪಟ್ಟು ದಂಡ: FASTag ಇಲ್ಲದ ವಾಹನಗಳಿಗೂ ಹೊಸ ನಿಯಮದುರಂತದಲ್ಲಿ ಅಂತ್ಯಗೊಂಡ ವಿವಾಹ: ಮದುವೆಯಾದ ಮರುದಿನವೇ ಆರತಕ್ಷತೆ ಸಮಾರಂಭದಲ್ಲಿ ಕುಸಿದು ಬಿದ್ದ ವರ; ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವುದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬೆಲ್ಟ್ ಬಕಲ್ ಒಳಗೆ ಚಾಕು ಪತ್ತೆ ಮಾಡಿದ ಸಿಐಎಸ್ಎಫ್ | VIDEOಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಅರ್ಚಕ ಅರೆಸ್ಟ್ಪುಟಿನ್ ಜೊತೆ ಸೆಲ್ಫಿ ತೆಗೆಸಿಕೊಂಡ ಭಾರತದ 16 ವರ್ಷದ ಎಐ ಪ್ರತಿಭೆ: ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ರಾಹುಲ್ ಜಾನ್ ಅಜು ಯಾರು?ಪಾಕಿಸ್ತಾನಕ್ಕೆ ಭಾರತದ ಸೇನಾ ರಹಸ್ಯ ಸೋರಿಕೆ! ಪಂಜಾಬ್‌ನಲ್ಲಿ ISI ಏಜೆಂಟ್ ಅರೆಸ್ಟ್ಒಪಿಎಸ್ ಮರು ಜಾರಿ: ಪಿಂಚಣಿ ಶೇ.50ರಿಂದ ಶೇ.67ಕ್ಕೆ ಏರಿಕೆ ಪ್ರಸ್ತಾವನೆ 8ನೇ ವೇತನ ಆಯೋಗ ಒಪ್ಪಿಕೊಂಡ್ರೆ ಎಷ್ಟು ಹೆಚ್ಚುವರಿ ಹಣ ಸಿಗಬಹುದು?ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅಸ್ತು: ಲೋಕಸಭೆ ಸ್ಥಾನಗಳು ಶೇ.50ರಷ್ಟು ಹೆಚ್ಚಳಕ್ಕೆ ಪ್ರಸ್ತಾವನೆನೆಸ್ಲೆ ಇಂಡಿಯಾಗೆ ₹36.36 ಲಕ್ಷ ಇಪಿಎಫ್ಒ ಬೇಡಿಕೆ ನೋಟಿಸ್: ಉದ್ಯೋಗಿಗಳ ಭವಿಷ್ಯ ನಿಧಿ ಪಾವತಿ ವಿಚಾರದಲ್ಲಿ ಕ್ರಮರೈಲ್ವೆಗೆ ಭರ್ಜರಿ ಆದಾಯ ತಂದುಕೊಟ್ಟ ಕಾರ್ತಿಕ ಪೂರ್ಣಿಮೆ; ಡಿಜಿಟಲ್ ಟಿಕೆಟ್ ಮೂಲಕ ₹20.73 ಲಕ್ಷ ಸಂಗ್ರಹ!