LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಂಗಾರ ಪ್ರಿಯರಿಗೆ ಭಾರಿ ಶಾಕ್: ಚಿನ್ನದ ಬೆಲೆ 10 ಗ್ರಾಂಗೆ ₹2130 ದಿಢೀರ್ ಜಿಗಿತ: ಬೆಳ್ಳಿ ಬೆಲೆಯೂ ₹10 ಸಾವಿರ ದುಬಾರಿ

ಬೆಂಗಳೂರು,: ಆಭರಣ ಪ್ರಿಯರಿಗೆ ಹಾಗೂ ಹೂಡಿಕೆದಾರರಿಗೆ ಇವತ್ತು ಒಂದು ಪ್ರಮುಖ ಅಪ್ಡೇಟ್ ಇದೆ. ಕಳೆದ ಕೆಲವು ದಿನಗಳಿಂದ ಸತತವಾಗಿ ಇಳಿಕೆ ಕಾಣುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಬುಧವಾರ (ಮೇ 6) ದಿಢೀರ್ ಏರಿಕೆ ಕಂಡಿವೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳ ಕಾರಣದಿಂದಾಗಿ ಚಿನ್ನದ ಬೆಲೆ ಇವತ್ತು ಪ್ರತಿ ಗ್ರಾಮ್‌ಗೆ 195 ರೂಪಾಯಿಯಷ್ಟು ಹೆಚ್ಚಳವಾಗಿದೆ.

ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇವತ್ತಿನ ಚಿನ್ನ ಮತ್ತು ಬೆಳ್ಳಿಯ ನಿಖರ ದರಗಳು ಹೇಗಿವೆ ಎಂಬ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಬೆಂಗಳೂರಿನಲ್ಲಿ ಇವತ್ತಿನ ಚಿನ್ನದ ದರ (Gold Rates Today):

ಇಂದು ಮಾರುಕಟ್ಟೆಯಲ್ಲಿ 22 ಕ್ಯಾರಟ್ ಮತ್ತು 24 ಕ್ಯಾರಟ್ ಆಭರಣ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

22 ಕ್ಯಾರಟ್ ಆಭರಣ ಚಿನ್ನ: 10 ಗ್ರಾಮ್‌ಗೆ 1,38,700 ರೂಪಾಯಿ ಆಗಿದೆ.

24 ಕ್ಯಾರಟ್ ಅಪರಂಜಿ ಚಿನ್ನ: 10 ಗ್ರಾಮ್‌ಗೆ 1,51,310 ರೂಪಾಯಿ ತಲುಪಿದ್ದು, ದರ ಮತ್ತೆ ಹದಿನೈದು ಸಾವಿರದ ಗಡಿಗಿಂತ ಮೇಲೆ ಹೋಗಿದೆ.

ಬೆಳ್ಳಿ ಬೆಲೆ

ಚಿನ್ನದ ಹಾದಿಯನ್ನೇ ಹಿಡಿದಿರುವ ಬೆಳ್ಳಿ ದರದಲ್ಲೂ ಇವತ್ತು ಪ್ರತಿ ಗ್ರಾಮ್‌ಗೆ 10 ರೂಪಾಯಿಯಷ್ಟು ಹೆಚ್ಚಳವಾಗಿದೆ.

ಬೆಂಗಳೂರಿನಲ್ಲಿ: 100 ಗ್ರಾಮ್ ಬೆಳ್ಳಿ ಬೆಲೆ 26,500 ರೂಪಾಯಿ ಇದೆ.

ಇತರ ರಾಜ್ಯಗಳಲ್ಲಿ: ತಮಿಳುನಾಡು, ಕೇರಳ ಸೇರಿದಂತೆ ನೆರೆರಾಜ್ಯಗಳ ಕೆಲವೆಡೆ 100 ಗ್ರಾಮ್ ಬೆಳ್ಳಿ ದರ 27,000 ರೂಪಾಯಿ ಮುಟ್ಟಿದೆ.

ಚಿನ್ನದ ಬೆಲೆ ದಿಢೀರ್ ಏರಿಕೆಗೆ ಕಾರಣವೇನು?

ಮಾರುಕಟ್ಟೆ ತಜ್ಞರ ಪ್ರಕಾರ, ಪಶ್ಚಿಮ ಏಷ್ಯಾದಲ್ಲಿ (Middle East) ಸೃಷ್ಟಿಯಾಗಿರುವ ಭೀಕರ ಯುದ್ಧದ ವಾತಾವರಣವೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಇರಾನ್ ದಾಳಿ: ಇರಾನ್ ದೇಶವು ಯುಎಇ (UAE) ಅನ್ನು ಗುರಿಯಾಗಿಸಿ ದಾಳಿ ನಡೆಸಿರುವುದು ಮತ್ತು ಅಮೆರಿಕದ ನೌಕೆಗಳ ಮೇಲೆ ಬಾಂಬ್ ಎಸೆದಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ಆತಂಕ ಮೂಡಿಸಿದೆ.

ಅಮೆರಿಕದ ಪ್ರತಿದಾಳಿ: ಪ್ರತಿಯಾಗಿ ಅಮೆರಿಕ ಕೂಡ ಇರಾನ್ ನೌಕೆಗಳನ್ನು ಹೊಡೆದುರುಳಿಸಿರುವುದಾಗಿ ಘೋಷಿಸಿದೆ.

ಸುರಕ್ಷಿತ ಹೂಡಿಕೆ: ಈ ಯುದ್ಧದ ಉದ್ವಿಗ್ನತೆಯಿಂದಾಗಿ ಷೇರು ಮಾರುಕಟ್ಟೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನದ ಕಡೆಗೆ ಮುಖ ಮಾಡಿದ್ದಾರೆ. ಇದರಿಂದಾಗಿ ಜಾಗತಿಕವಾಗಿ ಬಂಗಾರದ ಬೇಡಿಕೆ ಹೆಚ್ಚಿ ಬೆಲೆ ಗಗನಕ್ಕೇರಿದೆ.

ಯುದ್ಧದ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಗ್ರಾಹಕರು ಮತ್ತು ಹೂಡಿಕೆದಾರರು ಮಾರುಕಟ್ಟೆಯ ಏರಿಳಿತಗಳನ್ನು ಗಮನಿಸಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.

ಭಾರತದ ಪ್ರಮುಖ ನಗರಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (ಪ್ರತಿ ಗ್ರಾಂ)

    ಚೆನ್ನೈ – ₹15,328

    ಮುಂಬೈ – ₹15,131

    ದೆಹಲಿ – ₹15,144

    ಕೋಲ್ಕತ್ತಾ – ₹15,131

    ಬೆಂಗಳೂರು – ₹15,131

    ಹೈದರಾಬಾದ್ – ₹15,131

    ಕೇರಳ – ₹15,131

    ಪುಣೆ – ₹15,131

    ವಡೋದರಾ – ₹15,134

    ಅಹಮದಾಬಾದ್ – ₹15,134

    Author
    All About Belagavi
    is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
    WhatsApp

    Don't Miss Out! Join Our WhatsApp Group!

    Get latest news updates delivered straight to your WhatsApp.

    LATEST
    BREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕ