LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಇ-ರೂಪಾಯಿ ಎಂದರೇನು? ನಿಮ್ಮ ಜೇಬಿನ ನೋಟುಗಳು ಬಂದ್ ಆಗುತ್ತವೆಯೇ? ಡಿಜಿಟಲ್ ರೂಪಾಯಿಯ ಸಂಪೂರ್ಣ ಮಾಹಿತಿ ಇಲ್ಲಿದೆ

ಬೆಂಗಳೂರು: ದೇಶದಲ್ಲಿ ಡಿಜಿಟಲ್ ಕ್ರಾಂತಿ ಮುಂಚೂಣಿಯಲ್ಲಿರುವ ಬೆನ್ನಲ್ಲೇ, ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ವಲಯದಲ್ಲಿ ಅತ್ಯಂತ ಕ್ರಾಂತಿಕಾರಕ ಹೆಜ್ಜೆಯೊಂದನ್ನು ಇಟ್ಟಿದೆ. ಅದುವೇ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಅಥವಾ ಸರಳವಾಗಿ ಹೇಳುವುದಾದರೆ ಇ-ರೂಪಾಯಿ . ಕಾಗದದ ನೋಟುಗಳ ಬದಲಿಗೆ ಡಿಜಿಟಲ್ ರೂಪದಲ್ಲೇ ವ್ಯವಹಾರ ನಡೆಸುವ ಈ ಹೊಸ ತಂತ್ರಜ್ಞಾನದ ಬಗ್ಗೆ ಸಾರ್ವಜನಿಕರಲ್ಲಿ ಹತ್ತಾರು ಕುತೂಹಲ ಹಾಗೂ ಗೊಂದಲಗಳಿವೆ. ಜೇಬಿನಲ್ಲಿರುವ ನೋಟುಗಳು ಬಂದ್ ಆಗುತ್ತವೆಯೇ? ಇದನ್ನು ಬಳಸುವುದು ಹೇಗೆ?

ಏನಿದು ಇ-ರೂಪಾಯಿ ?

ಇ-ರೂಪಾಯಿ ಎನ್ನುವುದು ಆರ್‌ಬಿಐ ಅಧಿಕೃತವಾಗಿ ಬಿಡುಗಡೆ ಮಾಡಿರುವ ಭಾರತದ ಸಾರ್ವಭೌಮ ಡಿಜಿಟಲ್ ಕರೆನ್ಸಿಯಾಗಿದೆ. ನಾವು ದಿನನಿತ್ಯ ಬಳಸುವ ಕಾಗದದ ನೋಟುಗಳು ಮತ್ತು ನಾಣ್ಯಗಳಿಗೆ ಎಷ್ಟು ಕಾನೂನುಬದ್ಧ ಮೌಲ್ಯವಿದೆಯೋ, ಅಷ್ಟೇ ಮೌಲ್ಯ ಈ ಇ-ರೂಪಾಯಿಗೂ ಇರುತ್ತದೆ. ಇದು ₹2, ₹5, ₹10, ₹20, ₹50, ₹100, ₹200, ₹500 ಮುಖಬೆಲೆಯ ಕಾಗದದ ನೋಟುಗಳ ತದ್ರೂಪ ಡಿಜಿಟಲ್ ಟೋಕನ್ ಮಾದರಿಯಲ್ಲಿ ಲಭ್ಯವಿರುತ್ತದೆ. ಅಂದರೆ, ನಿಮ್ಮ ಜೇಬಿನಲ್ಲಿರುವ ಭೌತಿಕ ಹಣ ಈಗ ಮೊಬೈಲ್ ವ್ಯಾಲೆಟ್‌ನಲ್ಲಿ ಡಿಜಿಟಲ್ ರೂಪದಲ್ಲಿ ಇರಲಿದೆ.

ಕಾಗದದ ನೋಟುಗಳು ಸಂಪೂರ್ಣ ಬಂದ್ ಆಗುತ್ತಾ?

ಇ-ರೂಪಾಯಿ ಬಂದ ತಕ್ಷಣ ಕಾಗದದ ನೋಟುಗಳು ಮತ್ತು ನಾಣ್ಯಗಳು ಬ್ಯಾನ್ ಆಗುತ್ತವೆ ಎನ್ನುವ ವದಂತಿ ಸಂಪೂರ್ಣ ಸುಳ್ಳು. ಆರ್‌ಬಿಐ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಭೌತಿಕ ನೋಟುಗಳನ್ನು ರದ್ದುಪಡಿಸುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲ. ಇ-ರೂಪಾಯಿ ಎನ್ನುವುದು ಕಾಗದದ ನೋಟುಗಳಿಗೆ ಪರ್ಯಾಯ ಮತ್ತು ಹೆಚ್ಚುವರಿ ವ್ಯವಸ್ಥೆಯಾಗಿದೆ. ಸಾರ್ವಜನಿಕರು ತಮ್ಮ ಇಷ್ಟದಂತೆ ಕಾಗದದ ನೋಟುಗಳನ್ನಾದರೂ ಬಳಸಬಹುದು ಅಥವಾ ಡಿಜಿಟಲ್ ರೂಪಾಯಿಯನ್ನಾದರೂ ಬಳಸಬಹುದು. ನೋಟು ಮುದ್ರಣದ ವೆಚ್ಚವನ್ನು ತಗ್ಗಿಸುವುದು ಮತ್ತು ಕಳ್ಳನೋಟು ದಂಧೆಗೆ ಬ್ರೇಕ್ ಹಾಕುವುದು ಈ ಇ-ರೂಪಾಯಿಯ ಮುಖ್ಯ ಉದ್ದೇಶವಾಗಿದೆ.

ಯುಪಿಐ (UPI) ಮತ್ತು ಇ-ರೂಪಾಯಿಗೆ ಏನು ವ್ಯತ್ಯಾಸ?

ಬಹಳಷ್ಟು ಜನ ಫೋನ್ ಪೇ, ಗೂಗಲ್ ಪೇ ಮತ್ತು ಇ-ರೂಪಾಯಿ ಎರಡೂ ಒಂದೇ ಎಂದು ಭಾವಿಸುತ್ತಾರೆ. ಆದರೆ ಇವೆರಡರ ನಡುವೆ ದೊಡ್ಡ ವ್ಯತ್ಯಾಸವಿದೆ:

ಯುಪಿಐ (UPI): ಇದೊಂದು ಕೇವಲ ಮಾಧ್ಯಮ. ಯುಪಿಐ ಮೂಲಕ ಹಣ ಕಳುಹಿಸಿದಾಗ ನಿಮ್ಮ ಬ್ಯಾಂಕ್ ಖಾತೆಯಿಂದ ಇನ್ನೊಬ್ಬರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗುತ್ತದೆ. ಇಲ್ಲಿ ಬ್ಯಾಂಕ್‌ಗಳ ಮಧ್ಯಸ್ಥಿಕೆ ಕಡ್ಡಾಯ.

ಇ-ರೂಪಾಯಿ : ಇದು ನೇರ ನಗದು ಇದ್ದಂತೆ. ನೀವು ಇ-ರೂಪಾಯಿ ಬಳಸಿ ಪಾವತಿ ಮಾಡಿದಾಗ, ನಿಮ್ಮ ಡಿಜಿಟಲ್ ವ್ಯಾಲೆಟ್‌ನಿಂದ ನೇರವಾಗಿ ಮತ್ತೊಬ್ಬರ ವ್ಯಾಲೆಟ್‌ಗೆ ಡಿಜಿಟಲ್ ಟೋಕನ್ ವರ್ಗಾವಣೆಯಾಗುತ್ತದೆ. ಇಲ್ಲಿ ಯಾವುದೇ ಬ್ಯಾಂಕ್ ಖಾತೆಯ ಮಧ್ಯಸ್ಥಿಕೆ ಅಥವಾ ಲಿಂಕ್ ಅಗತ್ಯವಿರುವುದಿಲ್ಲ. ನೆಟ್‌ವರ್ಕ್ ಇಲ್ಲದಿದ್ದರೂ ವ್ಯವಹಾರ ನಡೆಸುವ ತಂತ್ರಜ್ಞಾನ ಇದರಲ್ಲಿದೆ.

ಡಿಜಿಟಲ್ ರೂಪಾಯಿಯನ್ನು ಬಳಸುವುದು ಹೇಗೆ? ಉಂಟಾ ಸುಲಭ ಮಾರ್ಗ

ಇ-ರೂಪಾಯಿಯನ್ನು ಬಳಸುವುದು ಅತ್ಯಂತ ಸರಳವಾಗಿದ್ದು, ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ:

ಆ್ಯಪ್ ಡೌನ್‌ಲೋಡ್ ಮಾಡಿ: ನಿಮ್ಮ ಖಾತೆ ಇರುವ ಬ್ಯಾಂಕ್ (ಉದಾಹರಣೆಗೆ SBI, ICICI, HDFC ಇತ್ಯಾದಿ) ಬಿಡುಗಡೆ ಮಾಡಿರುವ ಅಧಿಕೃತ ‘Digital Rupee’ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಿ.

ನೋಂದಣಿ ಪ್ರಕ್ರಿಯೆ: ಆ್ಯಪ್ ಓಪನ್ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯ ಮೂಲಕ ಸಿಮ್ ವೆರಿಫಿಕೇಶನ್ ಪ್ರಕ್ರಿಯೆ ಪೂರ್ಣಗೊಳಿಸಿ.

ವ್ಯಾಲೆಟ್ ಲೋಡ್ ಮಾಡಿ: ನಿಮ್ಮ ಬ್ಯಾಂಕ್ ಖಾತೆಯಿಂದ ನಿಮಗೆ ಬೇಕಾದಷ್ಟು ಮೊತ್ತವನ್ನು (₹10, ₹50, ₹500 ಇತ್ಯಾದಿ ನೋಟುಗಳ ರೂಪದಲ್ಲಿ) ಡಿಜಿಟಲ್ ವ್ಯಾಲೆಟ್‌ಗೆ ಲೋಡ್ ಮಾಡಿಕೊಳ್ಳಿ.

ವ್ಯವಹಾರ ನಡೆಸಿ : ವ್ಯಾಲೆಟ್ ಲೋಡ್ ಆದ ಮೇಲೆ ನೀವು ಯಾವುದೇ ವ್ಯಾಪಾರಿಗಳಿಗೆ ಅವರ ಕ್ಯುಆರ್ ಕೋಡ್ (QR Code) ಸ್ಕ್ಯಾನ್ ಮಾಡುವ ಮೂಲಕ ಅಥವಾ ಅವರ ಮೊಬೈಲ್ ಸಂಖ್ಯೆಗೆ ನೇರವಾಗಿ ಇ-ರೂಪಾಯಿಯನ್ನು ಕಳುಹಿಸಬಹುದು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ