LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೇವಲ ₹172 ದಿನಕ್ಕೆ ಹೂಡಿಕೆ ಮಾಡಿದ್ರೆ ಸಾಕು LICನ ಈ ಪ್ಲಾನ್ ಮೆಚ್ಯೂರಿಟಿಗೆ ₹28 ಲಕ್ಷ ಕೊಡುತ್ತೆ ಎಲ್‌ಐಸಿ ಪ್ಲಾನ್ ವಿವರ ಇಲ್ಲಿದೆ

ಬೆಂಗಳೂರು: ಇಂದಿನ ದಿನಗಳಲ್ಲಿ ಮಕ್ಕಳ ಉನ್ನತ ಶಿಕ್ಷಣ ಹಾಗೂ ಮದುವೆಯ ವೆಚ್ಚಗಳು ದಿನದಿಂದ ದಿನಕ್ಕೆ ದುಬಾರಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ, ಮಕ್ಕಳ ಭವಿಷ್ಯಕ್ಕೆ ಯಾವುದೇ ಆರ್ಥಿಕ ಅಡಚಣೆ ಎದುರಾಗಬಾರದು ಎಂದು ಮುಂಜಾಗ್ರತೆಯಿಂದ ದೊಡ್ಡ ಮೊತ್ತದ ನಿಧಿ (Big Fund) ಜಮಾಯಿಸಲು ಪೋಷಕರು ಸೂಕ್ತ ಯೋಜನೆಗಳ ನಿರೀಕ್ಷೆಯಲ್ಲಿರುತ್ತಾರೆ. ಇಂತಹ ಜವಾಬ್ದಾರಿಯುತ ಪೋಷಕರಿಗಾಗಿ ದೇಶದ ದೈತ್ಯ ವಿಮಾ ಕಂಪನಿಯಾದ ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ (LIC) ಭವಿಷ್ಯದ ಭದ್ರತೆಗೆ ಗ್ಯಾರಂಟಿ ನೀಡುವ ಅದ್ಭುತ ಯೋಜನೆಯೊಂದನ್ನು ಪರಿಚಯಿಸಿದೆ.

ಅದೇ ಎಲ್‌ಐಸಿ ಜೀವನ ಲಕ್ಷ್ಯ ಪಾಲಿಸಿ (LIC Jeevan Lakshya Policy). ಈ ಪಾಲಿಸಿಯ ದೊಡ್ಡ ಹೈಲೈಟ್ ಅಂದ್ರೆ, ಇದರಲ್ಲಿ ನಿಮ್ಮ ಕಷ್ಟದ ದುಡ್ಡಿಗೆ ಭರ್ಜರಿ ಇನ್ಶೂರೆನ್ಸ್ ಪ್ರೊಟೆಕ್ಷನ್ ಸಿಗುವ ಜೊತೆಗೆ ಸಖತ್ ಉಳಿತಾಯ ಕೂಡ ಆಗುತ್ತದೆ. ದಿನಕ್ಕೆ ಕೇವಲ 172 ರೂಪಾಯಿ ಎತ್ತಿಡುವ ಮೂಲಕ ಭವಿಷ್ಯದಲ್ಲಿ ಬರೋಬ್ಬರಿ 28.5 ಲಕ್ಷ ರೂಪಾಯಿಗಳ ಭಾರಿ ನಿಧಿಯನ್ನು ಹೇಗೆ ಜಮಾ ಮಾಡಬಹುದು ಅನ್ನೋ ಕಂಪ್ಲೀಟ್ ಕ್ಯಾಲ್ಕುಲೇಷನ್ ಇಲ್ಲಿದೆ.

100% ಸೇಫ್ ಇನ್ವೆಸ್ಟ್‌ಮೆಂಟ್: ಮಾರ್ಕೆಟ್ ರಿಸ್ಕ್ ಇರಲ್ಲ

ಈ ಎಲ್‌ಐಸಿ ಪಾಲಿಸಿಯು ಒಂದು ನಾನ್-ಲಿಂಕ್ಡ್ ಪ್ಲಾನ್ ಆಗಿದೆ. ಅಂದರೆ ಈ ಯೋಜನೆಯ ಹಣವನ್ನು ಶೇರ್ ಮಾರ್ಕೆಟ್‌ಗಳಲ್ಲಿ ಇನ್ವೆಸ್ಟ್ ಮಾಡಲ್ಲ, ಹಾಗಾಗಿ ನಿಮ್ಮ ಹಣಕ್ಕೆ ಯಾವುದೇ ರೀತಿಯ ಮಾರ್ಕೆಟ್ ರಿಸ್ಕ್ ಇರುವುದಿಲ್ಲ. ನಿಮ್ಮ ದುಡ್ಡು ಇಲ್ಲಿ ನೂರಕ್ಕೆ ನೂರರಷ್ಟು ಸೇಫ್ ಆಗಿ ಇರಲಿದ್ದು, ಇದರಲ್ಲಿ ಪಾಲಿಸಿದಾರರಿಗೆ ಆನ್ಯುಯಲ್ ಇನ್ಕಮ್ ಬೆನಿಫಿಟ್ ಸಿಗುತ್ತದೆ. ಇದು ಕುಟುಂಬದ ಭವಿಷ್ಯದ ಆರ್ಥಿಕ ಅಗತ್ಯಗಳಿಗೆ ದೊಡ್ಡ ಆಸರೆಯಾಗುತ್ತದೆ.

ಒಂದು ವೇಳೆ ಪಾಲಿಸಿಯ ಮೆಚುರಿಟಿ ಅವಧಿ ಮುಗಿಯುವ ಮುನ್ನವೇ ಪಾಲಿಸಿದಾರರು ಅನಿರೀಕ್ಷಿತವಾಗಿ ಮರಣ ಹೊಂದಿದರೆ, ಎಲ್‌ಐಸಿ ವತಿಯಿಂದ ವಿಮೆಯ ಕಂಪ್ಲೀಟ್ ಮೊತ್ತವನ್ನು ಅವರ ನಾಮಿನಿ ಅಥವಾ ಕಾನೂನುಬದ್ಧ ವಾರಸುದಾರರಿಗೆ ಒಂದೇ ಕಂತಿನಲ್ಲಿ ತಕ್ಷಣವೇ ಪಾವತಿಸಲಾಗುತ್ತದೆ. 18 ವರ್ಷ ತುಂಬಿದ ಯಾರೇ ಆದರೂ ಈ ಪ್ಲಾನ್ ತೆಗೆದುಕೊಳ್ಳಬಹುದು ಮತ್ತು ಇದರಲ್ಲಿ ಸೇರಲು ಗರಿಷ್ಠ ವಯಸ್ಸು 50 ವರ್ಷಗಳಾಗಿವೆ.

3 ವರ್ಷ ಕಮ್ಮಿ ಪ್ರೀಮಿಯಂ ತುಂಬುವ ಭರ್ಜರಿ ಆಫರ್

ಈ ಜೀವನ ಲಕ್ಷ್ಯ ಪಾಲಿಸಿಯ ಮೆಚುರಿಟಿ ಅವಧಿಯು ಗರಿಷ್ಠ 65 ವರ್ಷಗಳ ವರೆಗೆ ಇರಬಹುದು. ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ 13 ವರ್ಷದಿಂದ ಹಿಡಿದು 25 ವರ್ಷಗಳ ಅವಧಿಗೆ ಈ ಪಾಲಿಸಿಯನ್ನು ಆಯ್ದುಕೊಳ್ಳಬಹುದು. ಇದರ ಸಖತ್ ವಿಷಯ ಅಂದ್ರೆ, ನೀವು ಎಷ್ಟು ವರ್ಷದ ಪಾಲಿಸಿ ತಗೊಳ್ತೀರೋ ಅದಕ್ಕಿಂತ 3 ವರ್ಷ ಕಮ್ಮಿ ಅವಧಿಗೆ ಪ್ರೀಮಿಯಂ ತುಂಬಿದರೆ ಸಾಕು. ಅಂದರೆ ನೀವು 25 ವರ್ಷದ ಪ್ಲಾನ್ ತಗೊಂಡ್ರೆ, ಕೇವಲ 22 ವರ್ಷ ಮಾತ್ರ ದುಡ್ಡು ಕಟ್ಟಬೇಕು.

ಬರೋಬ್ಬರಿ ₹28.5 ಲಕ್ಷದ ಅಸಲಿ ಮನಿ ಮ್ಯಾಜಿಕ್ ಲೆಕ್ಕಾಚಾರ ಇಲ್ಲಿದೆ:

ಉದಾಹರಣೆಗೆ: 29 ವರ್ಷದ ಒಬ್ಬ ವ್ಯಕ್ತಿ 15 ಲಕ್ಷ ರೂಪಾಯಿ ಸಮ್-ಇನ್ಶೂರೆನ್ಸ್‌ನೊಂದಿಗೆ 25 ವರ್ಷಗಳ ಅವಧಿಗೆ ಈ ಪಾಲಿಸಿಯನ್ನು ಆಯ್ದುಕೊಂಡರೆ, ಆತ ಕೇವಲ 22 ವರ್ಷಗಳ ಕಾಲ ಹಣ ತುಂಬಬೇಕಾಗುತ್ತದೆ.

ದೈನಂದಿನ ಉಳಿತಾಯ: ಇದರ ಪ್ರಕಾರ ದಿನಕ್ಕೆ ಸರಿಸುಮಾರು ₹172, ಅಂದರೆ ತಿಂಗಳಿಗೆ ಸುಮಾರು ₹5,169 ಉಳಿತಾಯ ಮಾಡಿ ಜಮಾ ಮಾಡಬೇಕಾಗುತ್ತದೆ.

ಜಿಎಸ್‌ಟಿ ನಿಯಮ: ನೀವು ಕಟ್ಟುವ ಈ ಪ್ರೀಮಿಯಂ ಮೊತ್ತಕ್ಕೆ ಮೊದಲ ವರ್ಷ ಶೇಕಡಾ 4.5 ರಷ್ಟು ಜಿಎಸ್‌ಟಿ ಹಾಗೂ ಎರಡನೇ ವರ್ಷದಿಂದ ಶೇಕಡಾ 2.25 ರಷ್ಟು ಜಿಎಸ್‌ಟಿ ಅನ್ವಯವಾಗುತ್ತದೆ.

ಮೆಚುರಿಟಿ ರಿಟರ್ನ್ಸ್: ಇದೇ ರೀತಿ ನೀವು ನಿಯಮಿತವಾಗಿ ಹಣ ತುಂಬುತ್ತಾ ಬಂದು, 25 ವರ್ಷಗಳ ಪಾಲಿಸಿ ಅವಧಿ ಕಂಪ್ಲೀಟ್ ಆದ ತಕ್ಷಣ, ಎಲ್‌ಐಸಿ ವತಿಯಿಂದ ನಿಮಗೆ ಡಬಲ್ ಬೋನಸ್ ಜೊತೆಗೆ ಬರೋಬ್ಬರಿ ₹28.50 ಲಕ್ಷ ರೂಪಾಯಿಗಳ ದೊಡ್ಡ ಮೊತ್ತ ಒಂದೇ ಕಂತಿನಲ್ಲಿ ಸಿಗುತ್ತದೆ.

ಈ ಪಾಲಿಸಿಯಲ್ಲಿ ನಿಮಗೆ ಪ್ರತಿ ತಿಂಗಳು ಹಣ ತುಂಬುವದೆ ಬೇಡ ಅನ್ಸಿದ್ರೆ, ನಿಮ್ಮ ಕಂಫರ್ಟ್‌ಗೆ ತಕ್ಕ ಹಾಗೆ ಪ್ರತಿ 3 ತಿಂಗಳು ಅಥವಾ 6 ತಿಂಗಳಿಗೊಮ್ಮೆ ಹಣ ತುಂಬುವ ಆಯ್ಕೆಯನ್ನು ಮಾಡಿಕೊಳ್ಳಬಹುದು. ಇಲ್ಲವೇ ವರ್ಷಕ್ಕೆ ಒಂದೇ ಬಾರಿ ಕಂತು ಪಾವತಿಸುವ ಆಪ್ಷನ್ ಕೂಡ ಇದರಲ್ಲಿದೆ. ಕಡಿಮೆ ಹೂಡಿಕೆಯಲ್ಲಿ ಮಕ್ಕಳ ಉಜ್ವಲ ಭವಿಷ್ಯ ಮತ್ತು ಕುಟುಂಬದ ಆರ್ಥಿಕ ಭದ್ರತೆಗೆ ಗ್ಯಾರಂಟಿ ನೀಡುವ ಇಂತಹ ಬೆಸ್ಟ್ ಪ್ಲಾನ್ ಅನ್ನು ಮಿಸ್ ಮಾಡಿಕೊಳ್ಳದೆ ಇಂದೇ ಇದರ ಲಾಭ ಪಡೆದುಕೊಳ್ಳಿ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕ