LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ದಾವಣಗೆರೆ ಸೇರಿ 180 ನಗರಗಳಿಗೆ Swiggy ‘Food on Train’ ಸೇವೆ ವಿಸ್ತರಣೆ: ಬುಕ್ ಮಾಡುವುದು ಹೇಗೆ?

ಬೆಂಗಳೂರು: ರೈಲಿನಲ್ಲಿ ಲಾಂಗ್ ಜರ್ನಿ ಮಾಡುವಾಗ ಪ್ಲಾಟ್‌ಫಾರ್ಮ್‌ಗಳ ಕಳಪೆ ಊಟ ತಿಂದು ಬೇಸತ್ತಿದ್ದೀರಾ? ಟ್ರೈನ್ ನಿಲ್ಲುತ್ತಿದ್ದಂತೆ ಬಿಸಿ ಬಿಸಿ ಊಟಕ್ಕಾಗಿ ಪ್ಲಾಟ್‌ಫಾರ್ಮ್‌ಗಳಲ್ಲಿ ಇಳಿದು ಓಡಾಡುವ ಟೆನ್ಷನ್ ಇನ್ಮುಂದೆ ಇರಲ್ಲ ಹೌದು, ಭಾರತದ ಪ್ರಮುಖ ಫುಡ್ ಡೆಲಿವರಿ ದೈತ್ಯ ಸ್ವಿಗ್ಗಿ (Swiggy) ಪ್ರಯಾಣಿಕರಿಗೆ ಬಿಗ್ ಗಿಫ್ಟ್ ನೀಡಿದೆ. ತನ್ನ ಜನಪ್ರಿಯ ಫುಡ್ ಆನ್ ಟ್ರೈನ್ (Food on Train) ಸೇವೆಯನ್ನು ದೇಶಾದ್ಯಂತ ಬರೋಬ್ಬರಿ 180 ನಗರಗಳಿಗೆ ವಿಸ್ತರಿಸಿದ್ದು, ಇದೀಗ ನಮ್ಮ ಕರ್ನಾಟಕದ ಹೆಮ್ಮೆಯ ಬೆಣ್ಣೆ ನಗರಿ ದಾವಣಗೆರೆ ಸೇರಿದಂತೆ ರಾಜ್ಯದ 17 ಪ್ರಮುಖ ರೈಲು ನಿಲ್ದಾಣಗಳಿಗೆ ಈ ಸೂಪರ್ ಸೇವೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದೆ

ಇನ್ಮುಂದೆ ನಿಮ್ಮ ಟ್ರೈನ್ ದಾವಣಗೆರೆ ಅಥವಾ ಬೆಂಗಳೂರು ಸ್ಟೇಷನ್ ತಲುಪುವ ಮುನ್ನವೇ, ನಿಮ್ಮಿಷ್ಟದ ಹೋಟೆಲ್‌ನ ಬಿಸಿ ಬಿಸಿ ಬೆಣ್ಣೆ ದೋಸೆ ಅಥವಾ ಬಿರಿಯಾನಿಯನ್ನು ನೇರವಾಗಿ ನಿಮ್ಮ ಸೀಟಿಗೇ ತರಿಸಿಕೊಂಡು ಆರಾಮವಾಗಿ ಸವಿಯಬಹುದು

ಟಿಕೆಟ್ ಸ್ಕ್ಯಾನ್ ಮಾಡಿದರೆ ಸಾಕು, ಊಟ ರೆಡಿ

ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಸ್ವಿಗ್ಗಿ ಇದೀಗ ಸ್ಕ್ಯಾನ್ ಯುವರ್ ಟಿಕೆಟ್ ಎಂಬ ಹೊಸ ಫೀಚರ್ ಅನ್ನು ಪರಿಚಯಿಸಿದೆ. ಗ್ರಾಹಕರು ಸ್ವಿಗ್ಗಿ ಆ್ಯಪ್‌ನಲ್ಲಿ ತಮ್ಮ ರೈಲು ಟಿಕೆಟ್‌ನ ಫೋಟೋವನ್ನು ಅಪ್‌ಲೋಡ್ ಮಾಡಿದರೆ ಸಾಕು, ಆ್ಯಪ್ ತಾನಾಗಿಯೇ ನಿಮ್ಮ ಪಿಎನ್‌ಆರ್‌ ನಂಬರ್, ಬೋಗಿ ಮತ್ತು ಸೀಟ್ ನಂಬರ್ ಅನ್ನು ಪತ್ತೆಹಚ್ಚಿ, ನಿಮ್ಮ ನೆಚ್ಚಿನ ಹೋಟೆಲ್‌ನಿಂದ ಊಟವನ್ನು ನೇರವಾಗಿ ನಿಮ್ಮ ರೈಲಿನ ಸೀಟಿಗೇ ತಂದುಕೊಡುತ್ತದೆ.

ಆರ್ಡರ್‌ಗಳಲ್ಲಿ 3 ಪಟ್ಟು ಹೆಚ್ಚಳ

ಬೇಸಿಗೆ ರಜೆಯ ಪ್ರಯಾಣದ ಹಿನ್ನೆಲೆಯಲ್ಲಿ ಸ್ವಿಗ್ಗಿಯ ಈ ಸೇವೆಗೆ ಭಾರಿ ಬೇಡಿಕೆ ಕಂಡುಬಂದಿದೆ. ಏಪ್ರಿಲ್ – ಜೂನ್ 2026ರ ಅವಧಿಯಲ್ಲಿ ‘ಫುಡ್ ಆನ್ ಟ್ರೈನ್’ ಆರ್ಡರ್‌ಗಳು ಕಳೆದ ವರ್ಷಕ್ಕಿಂತ ಬರೋಬ್ಬರಿ 3 ಪಟ್ಟು ಹೆಚ್ಚಾಗಿವೆ. ಕೇವಲ ಒಂದು ಸ್ಟೇಷನ್‌ನಲ್ಲಿ ಮಾತ್ರವಲ್ಲದೆ, ಒಂದೇ ಪಿಎನ್‌ಆರ್‌ ನಂಬರ್ ಬಳಸಿ ಪ್ರಯಾಣದ ಉದ್ದಕ್ಕೂ 2-3 ಸ್ಟೇಷನ್‌ಗಳಲ್ಲಿ ಊಟ ಆರ್ಡರ್ ಮಾಡುವವರ ಸಂಖ್ಯೆ ಶೇ. 300ರಷ್ಟು ಏರಿಕೆಯಾಗಿದೆ.

ರೈಲಿನಲ್ಲಿ ಭಾರತೀಯರು ಹೆಚ್ಚಾಗಿ ತಿನ್ನುವುದೇನು?

ಈ ಬೇಸಿಗೆಯಲ್ಲಿ ರೈಲು ಪ್ರಯಾಣಿಕರು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ ಆಹಾರಗಳ ದತ್ತಾಂಶ ಕೂಡ ಅಚ್ಚರಿಯ ಮಾಹಿತಿಯನ್ನು ಬಿಚ್ಚಿಟ್ಟಿದೆ.

4 ಲಕ್ಷ ರೊಟ್ಟಿಗಳು: ತವಾ ರೊಟ್ಟಿ, ತಂದೂರಿ ರೊಟ್ಟಿ, ಫುಲ್ಕಾಗಳನ್ನು ಒಳಗೊಂಡಂತೆ ಬರೋಬ್ಬರಿ 4 ಲಕ್ಷಕ್ಕೂ ಹೆಚ್ಚು ರೊಟ್ಟಿಗಳನ್ನು ರೈಲು ಪ್ರಯಾಣಿಕರು

ಆರ್ಡರ್ ಮಾಡಿದ್ದಾರೆ. ಇದರ ಜೊತೆಗೆ ಮಸಾಲ ದೋಸೆ, ಆಲೂ ಪರಾಟ ಮತ್ತು ಮ್ಯಾಕ್ ಆಲೂ ಟಿಕ್ಕಿ ಬರ್ಗರ್‌ಗಳು ಹೆಚ್ಚು ಡಿಮ್ಯಾಂಡ್‌ನಲ್ಲಿದ್ದವು.

ನಾನ್ ವೆಜ್‌ನಲ್ಲಿ ಬಿರಿಯಾನಿ ಕಿಂಗ್: ಮಾಂಸಾಹಾರಿ ಖಾದ್ಯಗಳಲ್ಲಿ ‘ಚಿಕನ್ ಬಿರಿಯಾನಿ’ ಅತಿ ಹೆಚ್ಚು ಆರ್ಡರ್ ಆದ ತಿನಿಸಾಗಿದೆ.

ಬೇಸಿಗೆ ಪಾನೀಯಗಳ ಅಬ್ಬರ : ಬಿಸಿಲಿನ ತಾಪಕ್ಕೆ ತಂಪು ಪಾನೀಯಗಳ ಆರ್ಡರ್ ಶೇ. 354ರಷ್ಟು ಹೆಚ್ಚಾಗಿದೆ. ಇದರಲ್ಲಿ ‘ಮ್ಯಾಂಗೋ ಶೇಕ್’ ನಂಬರ್ 1 ಸ್ಥಾನದಲ್ಲಿದ್ದರೆ, ಲಸ್ಸಿ ಆರ್ಡರ್ ಶೇ. 100ರಷ್ಟು ಮತ್ತು ಐಸ್‌ಕ್ರೀಮ್ ಆರ್ಡರ್ ಶೇ. 140ರಷ್ಟು ಏರಿಕೆಯಾಗಿದೆ.

ಪ್ರದೇಶಕ್ಕೆ ತಕ್ಕಂತೆ ರುಚಿಯಲ್ಲಿ ಬದಲಾವಣೆ

ಉತ್ತರ ಭಾರತದ ಪ್ರಯಾಣಿಕರು ರೊಟ್ಟಿ, ಪರಾಟ ಮತ್ತು ಬರ್ಗರ್‌ಗಳಿಗೆ ಆದ್ಯತೆ ನೀಡಿದ್ದರೆ, ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ನೆಲ್ಲೂರು ಬಳಿ ದೋಸೆ ಅತಿ ಹೆಚ್ಚು ಆರ್ಡರ್ ಆಗಿದೆ. ವಿಜಯವಾಡದಲ್ಲಿ ಪ್ರತಿ 5 ಆರ್ಡರ್‌ಗಳಲ್ಲಿ ಒಂದು ಬಿರಿಯಾನಿಯಾಗಿರುತ್ತಿದೆ

ಪೂರ್ವ ಭಾರತದಲ್ಲಿ ಥಾಲಿ, ಫ್ರೈಡ್ ರೈಸ್ ಹೆಚ್ಚಾಗಿದ್ದರೆ, ಗೋವಾ-ಮಾರ್ಗದಲ್ಲಿ (ಮಡಗಾಂವ್ ಜಂಕ್ಷನ್) ಬಿರಿಯಾನಿಯನ್ನು ಹಿಂದಿಕ್ಕಿ ಬರ್ಗರ್ ಅತಿ ಹೆಚ್ಚು ಮಾರಾಟವಾಗಿದೆ. ಮೆಕ್‌ಡೊನಾಲ್ಡ್ಸ್, ಕೆಎಫ್‌ಸಿ, ಹಲ್ದಿರಾಮ್ಸ್, ಪ್ಯಾರಡೈಸ್ ಬಿರಿಯಾನಿ ಮತ್ತು ಎ2ಬಿ (ಅಡ್ಯಾರ್ ಆನಂದ ಭವನ್) ಗಳು ಪ್ರಯಾಣಿಕರ ನೆಚ್ಚಿನ ಹೋಟೆಲ್‌ಗಳಾಗಿ ಹೊರಹೊಮ್ಮಿವೆ.

ಫುಡ್ ಆನ್ ಟ್ರೈನ್ ಬಗ್ಗೆ ಮತ್ತಷ್ಟು ವಿವರಗಳನ್ನು ಹಂಚಿಕೊಂಡಿರುವ ಸ್ವಿಗ್ಗಿಯ ಉಪಾಧ್ಯಕ್ಷ ದೀಪಕ್ ಮಾಲೂ, “ಕಳೆದ ಒಂದು ವರ್ಷದಲ್ಲಿ ಈ ಸೇವೆ ಭಾರಿ ಬೆಳವಣಿಗೆ ಕಂಡಿದೆ. ಮೆಟ್ರೋ ಸಿಟಿಗಳಷ್ಟೇ ಅಲ್ಲದೆ, ಸಣ್ಣ ಸಣ್ಣ ಪಟ್ಟಣಗಳಲ್ಲೂ ಜನರು ಇದೇ ಮೊದಲ ಬಾರಿಗೆ ಡಿಜಿಟಲ್ ಫುಡ್ ಆರ್ಡರ್ ಮಾಡಲು ನಮ್ಮ ಸೇವೆ ಕಾರಣವಾಗಿದೆ. ವಿಶೇಷವಾಗಿ ಮೇ ತಿಂಗಳ ಕೊನೆಯ ವಾರದಲ್ಲಿ ಕಾಲೇಜಿಗೆ ಮರಳುವ ವಿದ್ಯಾರ್ಥಿಗಳ ಆರ್ಡರ್‌ಗಳು ಶೇ. 70ರಷ್ಟು ಹೆಚ್ಚಾಗಿದ್ದವು. ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ 4 ದಿನ ಮುಂಚಿತವಾಗಿಯೇ ಊಟವನ್ನು ಬುಕ್ ಮಾಡಿಕೊಳ್ಳುತ್ತಿರುವುದು ಈ ಸೇವೆಯ ಯಶಸ್ಸಿಗೆ ಸಾಕ್ಷಿ,” ಎಂದು ಅಭಿಪ್ರಾಯಪಟ್ಟಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ