LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪೋಷಕರೇ ಎಚ್ಚರ : ಬಾಲ್ಯವಿವಾಹ ಮಾಡಿಸಿದರೆ 2 ವರ್ಷ ಜೈಲು, ₹1 ಲಕ್ಷ ದಂಡ ಫಿಕ್ಸ್.!

18 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಹಾಗೂ 21 ವರ್ಷದೊಳಗಿನ ಗಂಡುಮಕ್ಕಳಿಗೆ ಮದುವೆ ಮಾಡುವುದು ಕಾನೂನುಬಾಹಿರವಾಗಿದ್ದು, ಇದು ಸಮಾಜಕ್ಕೆ ದೊಡ್ಡ ಪಿಡುಗಾಗಿದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಂಡೂರು ಹಾಗೂ ಎಸ್.ಇ.ಎಸ್ ಬಾಲಕಿಯರ ಪ್ರೌಢಶಾಲೆ ಸಂಡೂರು ಇವರ ಸಂಯುಕ್ತಾಶ್ರಯದಲ್ಲಿ ಶಾಲಾ ಸಭಾಭವನದಲ್ಲಿ ವಿದ್ಯಾರ್ಥಿನಿಯರಿಗಾಗಿ ಹಮ್ಮಿಕೊಳ್ಳಲಾಗಿದ್ದ ‘ಬಾಲ್ಯವಿವಾಹ ನಿಷೇಧ ಹಾಗೂ ಹದಿಹರೆಯದವರ ಆರೋಗ್ಯ ರಕ್ಷಣೆ’ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಡತನ, ಅಜ್ಞಾನ, ಮೂಢನಂಬಿಕೆ ಹಾಗೂ ಕುಟುಂಬದ ಆಸ್ತಿ ಉಳಿಸಿಕೊಳ್ಳುವ ಉದ್ದೇಶದಿಂದ ಇಂದಿಗೂ ಬಾಲ್ಯವಿವಾಹಗಳು ನಡೆಯುತ್ತಿರುವುದು ವಿಷಾದನೀಯ. ಇದರಿಂದ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕೆ ಅಡ್ಡಿಯಾಗುವುದಲ್ಲದೆ, ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ. ಬಾಲ್ಯದಲ್ಲಿ ಗರ್ಭಧಾರಣೆಯಾಗುವುದರಿಂದ ರಕ್ತಹೀನತೆ, ಅಪೌಷ್ಟಿಕತೆ, ತಾಯಿ ಮತ್ತು ಶಿಶು ಮರಣದ ಅಪಾಯಗಳು ಹೆಚ್ಚಾಗುತ್ತವೆ ಎಂದು ಅವರು ತಿಳಿಸಿದರು.

ಬಾಲ್ಯವಿವಾಹ ನಿಷೇಧ ಕಾಯ್ದೆ-2006ರ ಪ್ರಕಾರ ಬಾಲ್ಯವಿವಾಹ ಮಾಡಿಸುವುದು, ಅದರಲ್ಲಿ ಭಾಗಿಯಾಗುವುದು ಅಥವಾ ಪ್ರೋತ್ಸಾಹಿಸುವುದು ಶಿಕ್ಷಾರ್ಹ ಅಪರಾಧ. ತಪ್ಪಿತಸ್ಥರಿಗೆ 2 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 1 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ. ಬಾಲ್ಯವಿವಾಹ ನಡೆಯುತ್ತಿರುವುದು ಕಂಡುಬAದರೆ ಸಾರ್ವಜನಿಕರು ತಕ್ಷಣ ಮಕ್ಕಳ ಉಚಿತ ಸಹಾಯವಾಣಿ 1098 ಅಥವಾ 112ಕ್ಕೆ ಕರೆ ಮಾಡಿ ದೂರು ನೀಡಬಹುದು ಎಂದು ಮಾಹಿತಿ ನೀಡಿದರು.

ಇದೇ ವೇಳೆ ಪೋಕ್ಸೋ ಕಾಯ್ದೆ-2012 ಹಾಗೂ ಮಾನಸಿಕ ಆರೋಗ್ಯ ನೆರವಿಗಾಗಿ ‘ಟೆಲಿ-ಮನಸ್’ (14416) ಉಚಿತ ಸಹಾಯವಾಣಿಯ ಬಗ್ಗೆಯೂ ಜಾಗೃತಿ ಮೂಡಿಸಿದರು.

ಹಿರಿಯ ಆರೋಗ್ಯ ನಿರೀಕ್ಷಾಣಾಧಿಕಾರಿ ಬಂಡೇಗೌಡ ಅವರು ಕ್ಷಯ, ಕುಷ್ಠರೋಗ ಹಾಗೂ ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಗ್ಯೂ ಮುಂತಾದ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಕುರಿತು ವಿವರವಾಗಿ ಮಾತನಾಡಿದರು. ಆರ್.ಕೆ.ಎಸ್.ಕೆ ಆಪ್ತಸಮಾಲೋಚಕ ಪತ್ರೆಗೌಡ ಅವರು ಮೈತ್ರಿ ಮುಟ್ಟಿನ ಕಪ್ ಬಳಕೆ ಹಾಗೂ ಪೋಷಣ್ ಮಾಸಾಚರಣೆಯ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯ ಕಲ್ಲಯ್ಯ ಮಠ ಅವರು ವಹಿಸಿದ್ದರು.

ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಅನಸೂಯ, ಎಚ್.ಐ.ಒ ಅನುಷಾ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಸಮಾರಂಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಶಾಲೆಯ ನೂರಾರು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯಿಂದ 9000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ: ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ಪ್ರಧಾನಿ ಮೋದಿ 76ನೇ ಜನ್ಮದಿನ: ನಾಳೆಯಿಂದ ಬಿಜೆಪಿ ವತಿಯಿಂದ ದೇಶಾದ್ಯಂತ ‘ಸೇವಾ ಸಂಕಲ್ಪ’ ಅಭಿಯಾನಪೋಷಕರೇ ಎಚ್ಚರ : ಬಾಲ್ಯವಿವಾಹ ಮಾಡಿಸಿದರೆ 2 ವರ್ಷ ಜೈಲು, ₹1 ಲಕ್ಷ ದಂಡ ಫಿಕ್ಸ್.!ಗೃಹಜ್ಯೋತಿ ಅಕ್ರಮ ತಡೆಗೆ ಮನೆ-ಮನೆ ಪರಿಶೀಲನೆ; ಡೋರ್‌ಲಾಕ್ ಮನೆಗಳಿಗೆ ನೋಟಿಸ್ ಕಡ್ಡಾಯ!BIG NEWS: ಇಂದಿನಿಂದ 5 ದಿನ ಬೆಂಗಳೂರಿನ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 'ಮದ್ಯ ಮಾರಾಟ' ನಿಷೇಧರಾಜ್ಯ ಜನತೆಗೆ ಬಿಗ್ ಶಾಕ್ : ಮತ್ತೆ ಅಕ್ಕಿ ದರ ಭಾರಿ ಏರಿಕೆ | Rice Price Hikeರಾಜ್ಯದ 956 ಸರ್ಕಾರಿ ಶಾಲೆಗಳಲ್ಲಿ ಹಣಕಾಸು ಶಿಕ್ಷಣ: ಬ್ಯಾಂಕಿಂಗ್, ಡಿಜಿಟಲ್ ವಹಿವಾಟು ಬಗ್ಗೆ ಪಾಠ.!ನಾಳೆ ಕಲ್ಯಾಣ ಕರ್ನಾಟಕ ಉತ್ಸವ : ಧ್ವಜಾರೋಹಣಕ್ಕೆ ಸಚಿವರನ್ನು ನಿಯೋಜಿಸಿ ಸರ್ಕಾರ ಆದೇಶಗ್ರಾಹಕರೇ ಗಮನಿಸಿ : 2 ದಿನಗಳ ಕಾಲ ಬೆಸ್ಕಾಂ ಆನ್ ಲೈನ್ ಸೇವೆ ಸ್ಥಗಿತರಾಜ್ಯ ಸರ್ಕಾರದಿಂದ 'ಇಂಜಿನಿಯರ್‌'ಗಳಿಗೆ ಬಿಗ್ ಗಿಫ್ಟ್ : ಇನ್ಮುಂದೆ ಹೆಸರಿನ ಮುಂದೆ 'Er' ಬಳಸಲು ಅನುಮತಿಸಿ ಆದೇಶ!