LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರಧಾನಿ ಮೋದಿ 76ನೇ ಜನ್ಮದಿನ: ನಾಳೆಯಿಂದ ಬಿಜೆಪಿ ವತಿಯಿಂದ ದೇಶಾದ್ಯಂತ ‘ಸೇವಾ ಸಂಕಲ್ಪ’ ಅಭಿಯಾನ

ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ 76ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಮೋದಿಯವರ ಜನ್ಮದಿನ ಹಾಗೂ ಸಾರ್ವಜನಿಕ ಜೀವನದಲ್ಲಿ 25 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ, ಬಿಜೆಪಿ ವತಿಯಿಂದ ದೇಶಾದ್ಯಂತ ಒಂದು ತಿಂಗಳ ಕಾಲ ‘ಸೇವಾ ಸಂಕಲ್ಪ’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಈ ಅಭಿಯಾನದ ಭಾಗವಾಗಿ ದೇಶಾದ್ಯಂತ ಸರ್ಕಾರಿ ಯೋಜನೆಗಳ ಕುರಿತು ಜಾಗೃತಿ, ರಕ್ತದಾನ ಶಿಬಿರಗಳು, ಸ್ವಚ್ಛತಾ ಕಾರ್ಯಕ್ರಮಗಳು ಹಾಗೂ ಸಂವಾದ ಯಾತ್ರೆಗಳು ಸೇರಿದಂತೆ ಹಲವು ಸಾರ್ವಜನಿಕ ಸೇವಾ ಕಾರ್ಯಕ್ರಮಗಳು ಜರುಗಲಿವೆ. ಇದರ ಜೊತೆಗೆ ಮೋದಿಯವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಲು ‘ಆಶೀರ್ವಾದದ ದೀಪ’ ಬೆಳಗುವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ತಮ್ಮ ಮನೆಗಳಲ್ಲಿ ದೀಪ ಬೆಳಗುವಂತೆ ಕರೆ ನೀಡಲಾಗಿದೆ.

ರಾಜ್ಯದಲ್ಲೂ ಈ ಅಭಿಯಾನಕ್ಕೆ ಚಾಲನೆ ನೀಡಲು ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ನಿರ್ಮಲಾ ಸೀತಾರಾಮನ್ ಬೆಂಗಳೂರಿಗೆ ಆಗಮಿಸಿದ್ದು, ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸುವ ಜೊತೆಗೆ ಗಣೇಶೋತ್ಸವ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
Rain Alert : ವಾಯುಭಾರ ಕುಸಿತ : ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ, ಯೆಲ್ಲೋ ಅಲರ್ಟ್ ಘೋಷಣೆ.!ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯಿಂದ 9000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ: ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ಪ್ರಧಾನಿ ಮೋದಿ 76ನೇ ಜನ್ಮದಿನ: ನಾಳೆಯಿಂದ ಬಿಜೆಪಿ ವತಿಯಿಂದ ದೇಶಾದ್ಯಂತ ‘ಸೇವಾ ಸಂಕಲ್ಪ’ ಅಭಿಯಾನಪೋಷಕರೇ ಎಚ್ಚರ : ಬಾಲ್ಯವಿವಾಹ ಮಾಡಿಸಿದರೆ 2 ವರ್ಷ ಜೈಲು, ₹1 ಲಕ್ಷ ದಂಡ ಫಿಕ್ಸ್.!ಗೃಹಜ್ಯೋತಿ ಅಕ್ರಮ ತಡೆಗೆ ಮನೆ-ಮನೆ ಪರಿಶೀಲನೆ; ಡೋರ್‌ಲಾಕ್ ಮನೆಗಳಿಗೆ ನೋಟಿಸ್ ಕಡ್ಡಾಯ!BIG NEWS: ಇಂದಿನಿಂದ 5 ದಿನ ಬೆಂಗಳೂರಿನ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 'ಮದ್ಯ ಮಾರಾಟ' ನಿಷೇಧರಾಜ್ಯ ಜನತೆಗೆ ಬಿಗ್ ಶಾಕ್ : ಮತ್ತೆ ಅಕ್ಕಿ ದರ ಭಾರಿ ಏರಿಕೆ | Rice Price Hikeರಾಜ್ಯದ 956 ಸರ್ಕಾರಿ ಶಾಲೆಗಳಲ್ಲಿ ಹಣಕಾಸು ಶಿಕ್ಷಣ: ಬ್ಯಾಂಕಿಂಗ್, ಡಿಜಿಟಲ್ ವಹಿವಾಟು ಬಗ್ಗೆ ಪಾಠ.!ನಾಳೆ ಕಲ್ಯಾಣ ಕರ್ನಾಟಕ ಉತ್ಸವ : ಧ್ವಜಾರೋಹಣಕ್ಕೆ ಸಚಿವರನ್ನು ನಿಯೋಜಿಸಿ ಸರ್ಕಾರ ಆದೇಶಗ್ರಾಹಕರೇ ಗಮನಿಸಿ : 2 ದಿನಗಳ ಕಾಲ ಬೆಸ್ಕಾಂ ಆನ್ ಲೈನ್ ಸೇವೆ ಸ್ಥಗಿತ