LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸ್ನೇಹಿತರಿಂದ ಸಾಲವಾಗಿ ಹಣ ಪಡೆಯುತ್ತೀರಾ ? ₹20,000 ಮೀರಿದರೆ IT ನೋಟಿಸ್, ಭಾರಿ ದಂಡ !

ಆದಾಯ ತೆರಿಗೆ ಇಲಾಖೆ (Income Tax Department) ನಗದು ವ್ಯವಹಾರಗಳ ವಿಷಯದಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಸ್ನೇಹಿತರು ಅಥವಾ ಬಂಧುಗಳಿಂದ ಸಾಲವಾಗಿ ಪಡೆಯುವ ಅಥವಾ ನೀಡುವ ನಗದು ಹಣಕ್ಕೂ ಹಲವು ನಿಯಮಗಳು ಅನ್ವಯಿಸುತ್ತವೆ. ನಿಗದಿತ ಮಿತಿಯನ್ನು ಮೀರಿ ನಗದು ರೂಪದಲ್ಲಿ ವ್ಯವಹರಿಸಿದರೆ ಆದಾಯ ತೆರಿಗೆ ಇಲಾಖೆಯಿಂದ ತೊಂದರೆ ಎದುರಾಗುವ ಸಾಧ್ಯತೆ ಇದೆ.

ನಗದು ವ್ಯವಹಾರಗಳು ಪಾರದರ್ಶಕವಾಗಿ ನಡೆಯುವಂತೆ ಮಾಡಲು ಆದಾಯ ತೆರಿಗೆ ಇಲಾಖೆ ಹಲವು ನಿಯಮಗಳು ಹಾಗೂ ಮಿತಿಗಳನ್ನು ವಿಧಿಸಿದೆ. ದೇಶದ ಪ್ರತಿಯೊಬ್ಬರೂ ಈ ನಿಯಮಗಳನ್ನು ಪಾಲಿಸಬೇಕು. ವಿಶೇಷವಾಗಿ ದೊಡ್ಡ ಪ್ರಮಾಣದ ನಗದು ವ್ಯವಹಾರಗಳ ಮೇಲೆ ಇಲಾಖೆಯ ನಿಗಾ ಇರುತ್ತದೆ.

ತುರ್ತು ಸಂದರ್ಭಗಳಲ್ಲಿ ಹಲವರು ಸ್ನೇಹಿತರು ಅಥವಾ ಸಂಬಂಧಿಕರಿಂದ ಹಣವನ್ನು ಸಾಲವಾಗಿ ಪಡೆಯುತ್ತಾರೆ. ಸಾಮಾನ್ಯವಾಗಿ ಇಂತಹ ಸಾಲಗಳಿಗೆ ಯಾವುದೇ ದಾಖಲೆಗಳು ಇರುವುದಿಲ್ಲ. ಆದರೆ ದೊಡ್ಡ ಮೊತ್ತದ ಇಂತಹ ನಗದು ವ್ಯವಹಾರಗಳು ಆದಾಯ ತೆರಿಗೆ ನಿಯಮ ಉಲ್ಲಂಘನೆಯಾಗಿ ಪರಿಗಣಿಸಲ್ಪಡಬಹುದು.

ಸಾಲವಾಗಿ ಹಣ ನೀಡುತ್ತೀರಾ ಅಥವಾ ಪಡೆಯುತ್ತೀರಾ?

ನಗದು ರೂಪದಲ್ಲಿ ಪಡೆಯುವ ಸಾಲಗಳ ಕುರಿತು ಆದಾಯ ತೆರಿಗೆ ಇಲಾಖೆ ಕೆಲವು ಮಿತಿಗಳನ್ನು ನಿಗದಿಪಡಿಸಿದೆ. ಯಾವುದೇ ವ್ಯಕ್ತಿಯಿಂದ ₹20,000 ಕ್ಕಿಂತ ಹೆಚ್ಚು ಮೊತ್ತವನ್ನು ನಗದು ರೂಪದಲ್ಲಿ ಸಾಲವಾಗಿ ಪಡೆಯಬಾರದು ಎಂದು ನಿಯಮಗಳು ಹೇಳುತ್ತವೆ.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 269SS ಪ್ರಕಾರ, ₹20,000 ಕ್ಕಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಸಾಲ ಅಥವಾ ಠೇವಣಿ ರೂಪದಲ್ಲಿ ಪಡೆಯುವುದು ಕಾನೂನುಬಾಹಿರವಾಗಿದೆ. ಈ ನಿಯಮವನ್ನು ಉಲ್ಲಂಘಿಸಿದರೆ ಸಾಲ ನೀಡಿದ ವ್ಯಕ್ತಿಗೂ ಹಾಗೂ ಪಡೆದ ವ್ಯಕ್ತಿಗೂ ದಂಡ ವಿಧಿಸಬಹುದು.

ಹಣ ನೀಡಿದ ವ್ಯಕ್ತಿಯಿಂದ ಆ ಹಣದ ಮೂಲದ ಬಗ್ಗೆ ಇಲಾಖೆಯು ವಿವರಗಳನ್ನು ಕೇಳಬಹುದು. ಸರಿಯಾದ ದಾಖಲೆಗಳನ್ನು ಒದಗಿಸಲು ವಿಫಲವಾದರೆ ಕ್ರಮ ಕೈಗೊಳ್ಳಬಹುದು.

ಆದ್ದರಿಂದ ₹20,000 ಕ್ಕಿಂತ ಹೆಚ್ಚಿನ ಮೊತ್ತದ ವ್ಯವಹಾರಗಳನ್ನು ಆನ್‌ಲೈನ್ ವರ್ಗಾವಣೆ, ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ನಡೆಸುವುದು ಉತ್ತಮ.

ಯಾವ ವ್ಯವಹಾರಗಳಿಗೆ ಈ ನಿಯಮ ಅನ್ವಯಿಸುತ್ತದೆ?

ಸೆಕ್ಷನ್ 269SS ಕೇವಲ ಸಾಲಗಳು ಮತ್ತು ಠೇವಣಿಗಳಿಗೆ ಮಾತ್ರ ಅನ್ವಯಿಸುತ್ತದೆ.

ಆದರೆ ಸೆಕ್ಷನ್ 269ST ಪ್ರಕಾರ, ಚಿನ್ನ ಖರೀದಿ, ಆಸ್ತಿ ಮಾರಾಟ ಹಾಗೂ ಇತರ ವ್ಯವಹಾರಗಳಲ್ಲಿ ₹2 ಲಕ್ಷಕ್ಕಿಂತ ಹೆಚ್ಚು ನಗದು ಸ್ವೀಕರಿಸಲು ಅಥವಾ ಪಾವತಿಸಲು ಅವಕಾಶವಿಲ್ಲ.

ಆದಾಯ ತೆರಿಗೆ ಇಲಾಖೆ ಇಂತಹ ಉಲ್ಲಂಘನೆಗಳನ್ನು ಪತ್ತೆಹಚ್ಚಿದರೆ ಭಾರೀ ದಂಡ ವಿಧಿಸಬಹುದು. ವ್ಯವಹಾರಗಳ ಆಡಿಟ್ ವೇಳೆ ಅಥವಾ ವಾರ್ಷಿಕ ಮಾಹಿತಿ ವರದಿ (Annual Information Statement – AIS) ಮೂಲಕ ಇಂತಹ ವ್ಯವಹಾರಗಳು ಇಲಾಖೆಯ ಗಮನಕ್ಕೆ ಬರಬಹುದು.

ಆದ್ದರಿಂದ ₹20,000 ಕ್ಕಿಂತ ಹೆಚ್ಚಿನ ಸಾಲ ವ್ಯವಹಾರಗಳನ್ನು ಡಿಜಿಟಲ್ ಮಾಧ್ಯಮಗಳ ಮೂಲಕ ನಡೆಸುವುದು ಸುರಕ್ಷಿತ. ಇಲ್ಲದಿದ್ದರೆ ಆದಾಯ ತೆರಿಗೆ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ, ಉಲ್ಲಂಘನೆಯ ಮೊತ್ತದ 100% ರಷ್ಟು ದಂಡ ವಿಧಿಸುವ ಸಾಧ್ಯತೆ ಇದೆ.

ಹೊಸ ನಿಯಮಗಳ ಬಗ್ಗೆ ತಿಳಿದಿಲ್ಲದ ಕಾರಣ ಅಥವಾ “ಏನೂ ಆಗುವುದಿಲ್ಲ” ಎಂಬ ನಿರ್ಲಕ್ಷ್ಯದಿಂದ ಹಲವರು ಇನ್ನೂ ನಗದು ರೂಪದಲ್ಲಿ ಹಣ ನೀಡುತ್ತಿರುತ್ತಾರೆ. ಆದರೆ ಆರ್ಥಿಕ ತಜ್ಞರು ಇಂತಹ ಪದ್ಧತಿಯನ್ನು ತಪ್ಪಿಸುವಂತೆ ಸಲಹೆ ನೀಡುತ್ತಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕ