LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಿದ್ರೆಯಿಂದ ಎದ್ದ ಬಳಿಕದ ಮೊದಲ 90 ನಿಮಿಷಗಳೇ ನಿಮ್ಮ ದಿನವನ್ನು ನಿರ್ಧರಿಸುತ್ತವೆ.. ಹೇಗೆ ಕಳೆಯಬೇಕು ಗೊತ್ತಾ?


ಬೆಳಗ್ಗೆ ನಿದ್ರೆಯಿಂದ ಎದ್ದ ಬಳಿಕದ ಮೊದಲ 90 ನಿಮಿಷಗಳು ನಿಮ್ಮ ಇಡೀ ದಿನದ ಆರೋಗ್ಯ, ಚೈತನ್ಯ ಮತ್ತು ಕಾರ್ಯಕ್ಷಮತೆಯನ್ನು ನಿರ್ಧರಿಸಬಹುದು. ಈ ಅವಧಿಯಲ್ಲಿ ಸೂರ್ಯನ ಬೆಳಕಿನಲ್ಲಿ ಸಮಯ ಕಳೆಯುವುದು, ನೀರು ಕುಡಿಯುವುದು, ಲಘು ವ್ಯಾಯಾಮ ಮಾಡುವುದು ಹಾಗೂ ಮೊಬೈಲ್, ಕಾಫಿಯಿಂದ ಸ್ವಲ್ಪ ಸಮಯ ದೂರವಿರುವುದು ದೇಹದ ಜೈವಿಕ ಗಡಿಯಾರವನ್ನು (ಸರ್ಕೇಡಿಯನ್ ರಿದಮ್) ಸಮತೋಲನದಲ್ಲಿರಿಸಿ ಉತ್ತಮ ಆರೋಗ್ಯಕ್ಕೆ ನೆರವಾಗುತ್ತದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಹೈದರಾಬಾದ್’ನ ಅಪೋಲೋ ಆಸ್ಪತ್ರೆಯ ನ್ಯೂರಾಲಜಿಸ್ಟ್ ಡಾ. ಸುಧೀರ್ ಕುಮಾರ್ ಅವರ ಪ್ರಕಾರ, ಬೆಳಗಿನ ಸಮಯದಲ್ಲಿ ಕೆಲವು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ದೇಹದ ಸರ್ಕೇಡಿಯನ್ ರಿದಮ್ (Circadian Rhythm) ಸಮತೋಲನದಲ್ಲಿರುತ್ತದೆ. ಇದರಿಂದ ದೇಹಕ್ಕೆ ಸಹಜ ಶಕ್ತಿ ದೊರೆಯುವುದರ ಜೊತೆಗೆ ಉತ್ತಮ ನಿದ್ರೆಯೂ ಸಿಗುತ್ತದೆ.

ಬೆಳಗ್ಗೆ ಸೂರ್ಯನ ಬೆಳಕಿನಲ್ಲಿ ಸಮಯ ಕಳೆಯಿರಿ
ನಿದ್ರೆಯಿಂದ ಎದ್ದ 30ರಿಂದ 60 ನಿಮಿಷಗಳೊಳಗೆ ಕನಿಷ್ಠ 10ರಿಂದ 20 ನಿಮಿಷಗಳ ಕಾಲ ನೈಸರ್ಗಿಕ ಸೂರ್ಯನ ಬೆಳಕಿನಲ್ಲಿ ಇರಲು ತಜ್ಞರು ಸಲಹೆ ನೀಡುತ್ತಾರೆ. ಇದರಿಂದ ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನ್ ಸಮತೋಲನವಾಗಿ ಬಿಡುಗಡೆಯಾಗಿ ದಿನವಿಡೀ ಉತ್ಸಾಹ ಮತ್ತು ಚೈತನ್ಯದಿಂದ ಇರಲು ನೆರವಾಗುತ್ತದೆ.

ಎದ್ದ ತಕ್ಷಣ ಕಾಫಿ ಅಥವಾ ಟೀ ಕುಡಿಯಬೇಡಿ
ಬಹುತೇಕರಿಗೆ ಬೆಳಗ್ಗೆ ಎದ್ದ ಕೂಡಲೇ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಆದರೆ ದೇಹವು ಸಹಜವಾಗಿ ಎಚ್ಚರಗೊಳ್ಳಲು ಸಮಯ ನೀಡುವುದು ಮುಖ್ಯ. ಆದ್ದರಿಂದ ನಿದ್ರೆಯಿಂದ ಎದ್ದ ಬಳಿಕ ಕನಿಷ್ಠ 60ರಿಂದ 90 ನಿಮಿಷಗಳ ನಂತರ ಟೀ ಅಥವಾ ಕಾಫಿ ಸೇವಿಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಮೊದಲು ನೀರು ಕುಡಿಯಿರಿ
ರಾತ್ರಿಯಿಡೀ ನಿದ್ರೆಯಲ್ಲಿರುವಾಗ ದೇಹದಲ್ಲಿ ಸ್ವಲ್ಪ ಮಟ್ಟಿಗೆ ನೀರಿನ ಕೊರತೆ ಉಂಟಾಗುತ್ತದೆ. ಆದ್ದರಿಂದ ಬೆಳಗ್ಗೆ ಎದ್ದ ತಕ್ಷಣ ಸುಮಾರು 500 ಮಿಲಿ ನೀರು ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ತೇವಾಂಶ ದೊರೆಯುತ್ತದೆ. ಇದರಿಂದ ದೇಹದ ಚಯಾಪಚಯ ಕ್ರಿಯೆ (Metabolism) ಕೂಡ ಚುರುಕುಗೊಳ್ಳುತ್ತದೆ.

ಲಘು ವ್ಯಾಯಾಮ ಮಾಡಿ
ಬೆಳಗ್ಗೆ ಸ್ವಲ್ಪ ಹೊತ್ತು ನಡೆಯುವುದು, ದೇಹವನ್ನು ಹಿಗ್ಗಿಸುವುದು (Stretching) ಅಥವಾ ಲಘು ವ್ಯಾಯಾಮ ಮಾಡುವುದರಿಂದ ದೇಹ ಚುರುಕಾಗುತ್ತದೆ. ಇದು ಮೆದುಳಿಗೆ ದಿನ ಆರಂಭವಾಗಿದೆ ಎಂಬ ಸಂದೇಶವನ್ನು ನೀಡಿ ಏಕಾಗ್ರತೆ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ.

ಎದ್ದ ತಕ್ಷಣ ಮೊಬೈಲ್ ಬಳಸುವುದನ್ನು ತಪ್ಪಿಸಿ
ನಿದ್ರೆಯಿಂದ ಎದ್ದ ಕೂಡಲೇ ಸಾಮಾಜಿಕ ಜಾಲತಾಣಗಳು, ಸಂದೇಶಗಳು ಅಥವಾ ಇ-ಮೇಲ್ಗಳನ್ನು ನೋಡುವುದರಿಂದ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಬೆಳಗಿನ ಮೊದಲ ಒಂದು ಗಂಟೆಯಾದರೂ ಮೊಬೈಲ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಒಳ್ಳೆಯದು.

‘ಸ್ನೂಜ್’ ಬಟನ್ ಒತ್ತಬೇಡಿ
ಅಲಾರಂ ಮೊಳಗಿದಾಗ ಪ್ರತೀ ಬಾರಿ ‘ಸ್ನೂಜ್’ ಬಟನ್ ಒತ್ತುವುದರಿಂದ ಮೆದುಳು ಮತ್ತೆ ನಿದ್ರೆಗೆ ಜಾರಲು ಪ್ರಯತ್ನಿಸುತ್ತದೆ. ಇದರಿಂದ ದಿನವಿಡೀ ಆಯಾಸ ಮತ್ತು ಮಂದಗತಿ ಕಾಡಬಹುದು. ಹೀಗಾಗಿ ಅಲಾರಂ ಮೊಳಗಿದ ತಕ್ಷಣ ಎದ್ದುಬರುವುದು ಉತ್ತಮ.

ಪೌಷ್ಟಿಕ ಉಪಹಾರ ಸೇವಿಸಿ
ಬೆಳಗಿನ ಉಪಹಾರ ದಿನವಿಡೀ ಶಕ್ತಿ ನೀಡುವ ಪ್ರಮುಖ ಆಹಾರವಾಗಿದೆ. ಹೆಚ್ಚಿನ ಸಕ್ಕರೆ ಇರುವ ಆಹಾರಗಳ ಬದಲಿಗೆ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿನಾಂಶ ಹೊಂದಿರುವ ಆಹಾರ ಸೇವಿಸಿದರೆ ದೇಹಕ್ಕೆ ಅಗತ್ಯವಾದ ಶಕ್ತಿ ದೊರೆಯುತ್ತದೆ.

ಆರೋಗ್ಯಕರ ಬೆಳಗ್ಗೇ ಆರೋಗ್ಯಕರ ದಿನಕ್ಕೆ ಭದ್ರ ಅಡಿಪಾಯ
ಬೆಳಗಿನ ಸಮಯದಲ್ಲಿ ಈ ಸರಳ ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸುವುದರಿಂದ ದೈಹಿಕ ಆರೋಗ್ಯ ಸುಧಾರಿಸುವುದಷ್ಟೇ ಅಲ್ಲದೆ, ಮಾನಸಿಕ ನೆಮ್ಮದಿ, ಉತ್ತಮ ಏಕಾಗ್ರತೆ ಹಾಗೂ ಗುಣಮಟ್ಟದ ನಿದ್ರೆಯನ್ನೂ ಪಡೆಯಬಹುದು. ಸಣ್ಣ ಬದಲಾವಣೆಗಳಿಂದ ದೊಡ್ಡ ಆರೋಗ್ಯ ಲಾಭ ಪಡೆಯಬೇಕಾದರೆ ಪ್ರತಿದಿನವನ್ನು ಆರೋಗ್ಯಕರ ಬೆಳಗ್ಗಿನಿಂದ ಆರಂಭಿಸುವುದು ಅತ್ಯಗತ್ಯ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕ