LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ALERT : ‘ಕೂಲ್ ಡ್ರಿಂಕ್ಸ್’ ಪ್ರಿಯರೇ ಎಚ್ಚರ ! ತಂಪು ಪಾನೀಯದ ವ್ಯಸನಕ್ಕೆ ಯಾದಗಿರಿಯಲ್ಲಿ 19 ವರ್ಷದ ಯುವಕ ಬಲಿ

ಬೆಂಗಳೂರು: ಎನರ್ಜಿ ಡ್ರಿಂಕ್‌ಗಳು ಹಾಗೂ ತಂಪು ಪಾನೀಯಗಳ (ಸಾಫ್ಟ್ ಡ್ರಿಂಕ್ಸ್) ಅತಿಯಾದ ಸೇವನೆ ಎಷ್ಟು ಅಪಾಯಕಾರಿ ಎಂಬುದಕ್ಕೆ ಎಚ್ಚರಿಕೆಯಾದ ಘಟನೆ ಕರ್ನಾಟಕದಲ್ಲಿ ಬೆಳಕಿಗೆ ಬಂದಿದೆ. ಎನರ್ಜಿ ಡ್ರಿಂಕ್‌ಗಳ ವ್ಯಸನಕ್ಕೆ ಒಳಗಾಗಿದ್ದ 19 ವರ್ಷದ ಯುವಕನೊಬ್ಬ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದಾನೆ.

ದಿನಕ್ಕೆ 3-4 ಬಾಟಲಿ ಎನರ್ಜಿ ಡ್ರಿಂಕ್!

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಬಾಳು ದೇಶಾಯಿ (19) ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು. ಕಳೆದ ಕೆಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ದೊರೆಯುವ ‘ಸ್ಟಿಂಗ್’ ಎನರ್ಜಿ ಡ್ರಿಂಕ್ ಸೇವನೆಗೆ ಆತ ಚಟವಾಗಿದ್ದನೆಂದು ಕುಟುಂಬಸ್ಥರು ಹಾಗೂ ಸ್ನೇಹಿತರು ತಿಳಿಸಿದ್ದಾರೆ. ಮನೆಯಲ್ಲಿ ಎಷ್ಟೇ ಬುದ್ಧಿವಾದ ಹೇಳಿದರೂ ಕೇಳದೇ, ದಿನಕ್ಕೆ ಸುಮಾರು 3ರಿಂದ 4 ಬಾಟಲಿ ಎನರ್ಜಿ ಡ್ರಿಂಕ್ ಕುಡಿಯುತ್ತಿದ್ದನೆಂದು ಆತನ ಆಪ್ತರು ಹೇಳಿದ್ದಾರೆ.

ಕಿಡ್ನಿ ವೈಫಲ್ಯದಿಂದ ಸಾವು

ಕಳೆದ ಕೆಲವು ದಿನಗಳಿಂದ ಬಾಳು ದೇಶಾಯಿ ಆರೋಗ್ಯ ಹದಗೆಡತೊಡಗಿತ್ತು. ತೀವ್ರ ದೌರ್ಬಲ್ಯ ಹಾಗೂ ದೈಹಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಆತನನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೂನ್ 12ರಂದು ಆತ ಮೃತಪಟ್ಟಿದ್ದಾನೆ. ಅತಿಯಾಗಿ ಎನರ್ಜಿ ಡ್ರಿಂಕ್ ಸೇವಿಸಿದ್ದರಿಂದಲೇ ಕಿಡ್ನಿಗಳು ಸಂಪೂರ್ಣ ಹಾನಿಗೊಳಗಾಗಿ ಕಿಡ್ನಿ ವೈಫಲ್ಯ ಉಂಟಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಎನರ್ಜಿ ಡ್ರಿಂಕ್‌ಗಳ ಅಪಾಯ ಏನು?

ಈ ಘಟನೆ ಬಳಿಕ ತಂಪು ಪಾನೀಯಗಳು ಮತ್ತು ಎನರ್ಜಿ ಡ್ರಿಂಕ್‌ಗಳ ಆರೋಗ್ಯದ ಮೇಲಿನ ದುಷ್ಪರಿಣಾಮಗಳ ಕುರಿತು ರಾಜ್ಯಾದ್ಯಂತ ಚರ್ಚೆ ಆರಂಭವಾಗಿದೆ.ಎನರ್ಜಿ ಡ್ರಿಂಕ್‌ಗಳಲ್ಲಿ ಅಧಿಕ ಪ್ರಮಾಣದ ಕ್ಯಾಫಿನ್ ಇರುತ್ತದೆ.ಇದು ಹೃದಯ ಬಡಿತದ ವೇಗ ಹೆಚ್ಚಿಸಿ ರಕ್ತದೊತ್ತಡದ ಮೇಲೆ ದುಷ್ಪರಿಣಾಮ ಬೀರುತ್ತದೆ.ಹೆಚ್ಚಿನ ಸಕ್ಕರೆ ಅಂಶದಿಂದ ಸ್ಥೂಲಕಾಯ ಮತ್ತು ಮಧುಮೇಹದ ಅಪಾಯ ಹೆಚ್ಚುತ್ತದೆ.ಬಣ್ಣ ಹಾಗೂ ರುಚಿಗಾಗಿ ಬಳಸುವ ಕೃತಕ ರಾಸಾಯನಿಕಗಳು ಯಕೃತ್ತು (ಲಿವರ್) ಮತ್ತು ಕಿಡ್ನಿಗಳ ಮೇಲೆ ಹೆಚ್ಚಿನ ಒತ್ತಡ ಉಂಟುಮಾಡುತ್ತವೆ.ದೀರ್ಘಕಾಲ ಸೇವನೆಯಿಂದ ಕಿಡ್ನಿಗಳ ಶೋಧನಾ ಸಾಮರ್ಥ್ಯ ಕುಸಿದು ಗಂಭೀರ ಸಮಸ್ಯೆಗಳು ಎದುರಾಗಬಹುದು.

ಕೂಲ್‌ಡ್ರಿಂಕ್ ಪ್ರಿಯರೇ ಎಚ್ಚರ!

ಮನೆಯಲ್ಲಿ ತಯಾರಿಸುವ ನೈಸರ್ಗಿಕ ಹಣ್ಣಿನ ರಸಗಳು ಆರೋಗ್ಯಕ್ಕೆ ಉತ್ತಮ. ಆದರೆ ಕಾರ್ಬೊನೇಟೆಡ್ ಪಾನೀಯಗಳು, ಸಂರಕ್ಷಕಗಳನ್ನು ಹೊಂದಿರುವ ಪ್ಯಾಕ್ಡ್ ಜ್ಯೂಸ್‌ಗಳು ಹಾಗೂ ಎನರ್ಜಿ ಡ್ರಿಂಕ್‌ಗಳ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ವೈದ್ಯರು ಎಚ್ಚರಿಸಿದ್ದಾರೆ.ಯಾವುದೇ ಆಹಾರ ಅಥವಾ ಪಾನೀಯವನ್ನು ಮಿತಿಮೀರಿ ಸೇವಿಸುವುದು ಅಪಾಯಕಾರಿಯಾಗಿದ್ದು, ಈ ದುರಂತ ಘಟನೆ ಮತ್ತೊಮ್ಮೆ ಅದನ್ನು ನೆನಪಿಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ