ಬೆಂಗಳೂರು : ಮಹಿಳೆಯ ವಿರುದ್ಧ ಸಂಚು ರೂಪಿಸಿ ಪ್ರಕರಣ ದಾಖಲಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಹಿಳೆಯ ವಿರುದ್ಧ ಸಂಚು ರೂಪಿಸಿ ಪ್ರಕರಣ ದಾಖಲಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಮಹಿಳೆ ನೀಡಿದ್ದ ದೂರಿನ ಆಧಾರದಲ್ಲಿ ಶಾಸಕ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ರಾಜರಾಜೇಶ್ವರಿನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಶಾಸಕ ಮುನಿರತ್ನ ಸೇರಿದಂತೆ 8 ಜನರ ಮೇಲೆ ಎಫ್ ಐಆರ್ ದಾಖಲಾಗಿದೆ.
ಕಿರಣ್ ನಾಯ್ಡು, ಲೋಹಿತ್ ಗೌಡ, ಮಂಜುನಾಥ್, ಲಕ್ಷ್ಮೀ ಜಯರಾಂ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಇನ್ಸ್ ಪೆಕ್ಟರ್ ಗಳಾದಅಯ್ಯಣ್ಣ ರೆಡ್ಡಿ, ಬಿ.ಎನ್.ಲೋಹಿತ್, ಪಿಎಸ್ ಐ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಾಗಿದೆ.