LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

England ನಲ್ಲಿ ಪಾಕಿಸ್ತಾನ ತಂಡಕ್ಕೆ ಅಕ್ರಮ ವಲಸಿಗರ ಸಂಚಲನ!

ಇಂಗ್ಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನ ಅಂಡರ್-19 ಕ್ರಿಕೆಟ್ ತಂಡಕ್ಕೆ ಪೋರ್ಟ್ಸ್‌ಮೌತ್ ನಗರದಲ್ಲಿ ಒಂದು ವಿಚಿತ್ರ ಹಾಗೂ ಮುಜುಗರದ ಸನ್ನಿವೇಶ ಎದುರಾಗಿದೆ. ತಂಗಿದ್ದ ಹೊಟೇಲ್ ಹೊರಗಡೆ ಜಮಾಯಿಸಿದ ವಲಸೆ ವಿರೋಧಿ ಪ್ರತಿಭಟನಾಕಾರರು, ಯುವ ಕ್ರಿಕೆಟಿಗರನ್ನು ಅಕ್ರಮವಾಗಿ ದೇಶಕ್ಕೆ ಬಂದ ವಲಸಿಗರು ಎಂದು ತಪ್ಪಾಗಿ ತಿಳಿದುಕೊಂಡು ಗಲಾಟೆ ನಡೆಸಿದ ಘಟನೆ ನಡೆದಿದೆ.

ಪೋರ್ಟ್ಸ್‌ಮೌತ್‌ನ ಮ್ಯಾರಿಯಟ್ ಹೊಟೇಲ್‌ಗೆ ವಿದೇಶಿ ಪುರುಷರ ದೊಡ್ಡ ಗುಂಪೊಂದು ಆಗಮಿಸಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ವಲಸೆ ವಿರೋಧಿ ಗುಂಪು ಹೊಟೇಲ್ ಮುಂದೆ ಜಮಾಯಿಸಿ ಪ್ರತಿಭಟನೆ ಆರಂಭಿಸಿತ್ತು. ಸಾಮಾನ್ಯವಾಗಿ ವಲಸಿಗರನ್ನು ಕರೆದೊಯ್ಯಲು ಬಳಸುವ ಕಂಪನಿಯ ಬಸ್‌ನಲ್ಲೇ ಈ ಕ್ರಿಕೆಟಿಗರು ಬಂದಿಳಿದದ್ದು ಈ ಗೊಂದಲಕ್ಕೆ ಪ್ರಮುಖ ಕಾರಣವಾಯಿತು. ಸ್ಥಳೀಯರಲ್ಲಿ ಉಂಟಾದ ಈ ಭ್ರಮೆಯಿಂದಾಗಿ ಹೊಟೇಲ್ ಆವರಣದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ವಿಷಯ ತಿಳಿದ ತಕ್ಷಣ ಸ್ಥಳೀಯ ಮಂಡಳಿ ಸದಸ್ಯ ಜಾರ್ಜ್ ಮ್ಯಾಡ್‌ವಿಕ್ ಸ್ಥಳಕ್ಕೆ ಧಾವಿಸಿ ಹೊಟೇಲ್ ಆಡಳಿತ ಮಂಡಳಿ ಹಾಗೂ ಪಾಕಿಸ್ತಾನ ತಂಡದ ಕೋಚ್ ಅವರೊಂದಿಗೆ ಮಾತುಕತೆ ನಡೆಸಿದರು. ಬಂದಿರುವುದು ವಲಸಿಗರಲ್ಲ, ಪ್ರವಾಸಕ್ಕೆ ಬಂದಿರುವ ಪಾಕಿಸ್ತಾನ ಅಂಡರ್-19 ಕ್ರಿಕೆಟ್ ಆಟಗಾರರು ಎಂದು ಸ್ಪಷ್ಟಪಡಿಸಿದ ನಂತರ ಪ್ರತಿಭಟನಾಕಾರರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಅದೃಷ್ಟವಶಾತ್ ಆಟಗಾರರು ಹಾಗೂ ಪ್ರತಿಭಟನಾಕಾರರ ನಡುವೆ ಯಾವುದೇ ಗಲಾಟೆ ನಡೆದಿಲ್ಲ. ಪ್ರಸ್ತುತ ಗೊಂದಲ ತಿಳಿಯಾಗಿದ್ದು, ಯುವ ಆಟಗಾರರು ತಮ್ಮ ಮುಂದಿನ ಪಂದ್ಯಗಳತ್ತ ಗಮನ ಹರಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಾಧ್ಯಂತ ಗಣೇಶ ಹಬ್ಬಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್: ಜಿಲ್ಲೆಗಳಿಗೆ ಹಿರಿಯ ಅಧಿಕಾರಿಗಳನ್ನು ನಿಯೋಜನೆBIG NEWS: ಜೈಲಲ್ಲಿ ಪ್ರಜ್ವಲ್​​​​ ರೇವಣ್ಣ ಕರೆ ಮಾಡಿದ್ದು ಯಾರಿಗೆ ಗೊತ್ತಾ?ದೇವನಹಳ್ಳಿ ಎಂಎಸ್‌ಎಂಇ ತಂತ್ರಜ್ಞಾನ ಕೇಂದ್ರದಿಂದ ವರ್ಷಕ್ಕೆ 10,000 ಮಂದಿಗೆ ಆಧುನಿಕ ಕೌಶಲ್ಯ ತರಬೇತಿ: ರೋಹಿಣಿ ಸಿಂಧೂರಿBIG NEWS: ಇದು ಸಮಗ್ರ ಕರ್ನಾಟಕ ನಿರ್ಮಾಣಕ್ಕೆ ಡಿಕೆಶಿ ನೀಲನಕ್ಷೆ: ಆಡಳಿತದ 100ನೇ ದಿನಕ್ಕೆ 3 ಮಹಾಸಂಕಲ್ಪ, 9 ಯೋಜನೆಗಳ ಘೋಷಣೆಹೇಮಾವತಿ ಕಾಲುವೆಗೆ ಉರುಳಿದ ಅಕ್ಕಿ ಲಾರಿ: ಕ್ಲೀನರ್ ಸಾವು, ಚಾಲಕ ಗಂಭೀರಇದು 100 ದಿನಗಳ ಸಂಭ್ರಮಾಚರಣೆಯಲ್ಲ, ದೃಢ ಕರ್ನಾಟಕದ ಸಂಕಲ್ಪ: ಡಿಸಿಎಂ ಡಾ.ಜಿ.ಪರಮೇಶ್ವರ್BREAKING: ದಕ್ಷಿಣ ಭಾರತದಲ್ಲೂ ನೇಪಾಳದಂತ ದುರಂತ ಮರುಕಳಿಸಲಿದೆ: ಕೋಡಿಮಠ ಶ್ರೀಗಳ ಸ್ಪೋಟಕ ಭವಿಷ್ಯಭಾರತೀಯ ಮೂಲದ ದಂಪತಿಗಳಿಂದ ಅಮೆರಿಕದ ವಿಶ್ವವಿದ್ಯಾಲಯಕ್ಕೆ ₹167 ಕೋಟಿಗೂ ಅಧಿಕ ದೇಣಿಗೆ₹2.5 ಲಕ್ಷ ಸಾಲಕ್ಕೆ ಸಿವಿಲ್ಸ್ ವಿದ್ಯಾರ್ಥಿ ಬಲಿ; 19 ಮಂದಿಯ ಹೆಸರು ಬರೆದಿಟ್ಟು ಆತ್ಮಹತ್ಯೆ20 ದಿನ ಗೆಸ್ಟ್‌ಹೌಸ್‌ನಲ್ಲಿ ವಾಸವಿದ್ದ ನವವಿವಾಹಿತ ಜೋಡಿ ಕೊನೆಗೆ ಶವವಾಗಿ ಪತ್ತೆ! ನಡೆದಿದ್ದೇನು..?