LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

Gold Price : ಚಿನ್ನ ಪ್ರೀಯರಿಗೆ ಭರ್ಜರಿ ಗುಡ್ ನ್ಯೂಸ್ : ಬಂಗಾರದ ಬೆಲೆಯಲ್ಲಿ ₹1900 ಭಾರಿ ಕುಸಿತ, 5 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ!

ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಯುದ್ಧದ ಅಸ್ಥಿರತೆ, ಕಚ್ಚಾತೈಲ ಬೆಲೆಯಲ್ಲಿನ ಏರಿಕೆ ಮತ್ತು ಹಣದುಬ್ಬರದ ಭೀತಿಯ ನಡುವೆಯೂ ಚಿನ್ನ ಹಾಗೂ ಬೆಳ್ಳಿ ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ನಿರಾಸೆ ಮೂಡಿದ್ದು, ಬೆಲೆಗಳು ತೀವ್ರ ಕುಸಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಐದು ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದ್ದು, ದೇಶೀಯ ಮಾರುಕಟ್ಟೆಯಲ್ಲೂ ಇದರ ಬಿಸಿ ತಟ್ಟಿದೆ. ಕಳೆದ ನಾಲ್ಕು ದಿನಗಳಲ್ಲಿ ಚಿನ್ನದ ಬೆಲೆಯು ಬರೋಬ್ಬರಿ 5,500 ರೂ.ಗಳಿಗೂ ಅಧಿಕ ನಷ್ಟ ಅನುಭವಿಸಿದೆ.

ಅಕ್ಟೋಬರ್ 23ರ ಶುಕ್ರವಾರದ ವಹಿವಾಟಿನಲ್ಲಿ ಚಿನ್ನದ ದರದಲ್ಲಿ ಭಾರಿ ಇಳಿಕೆಯಾಗಿದೆ. 24 ಕ್ಯಾರೆಟ್ (ಅಪರಂಜಿ) ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ ಬರೋಬ್ಬರಿ 1,900 ರೂ.ಗಳಷ್ಟು ಕುಸಿದು, 1,42,480 ರೂಪಾಯಿಗೆ ತಲುಪಿದೆ. ಇದರೊಂದಿಗೆ 1 ಗ್ರಾಂ ಶುದ್ಧ ಚಿನ್ನದ ಬೆಲೆ 14,248 ರೂಪಾಯಿ ದಾಖಲಾಗಿದೆ. ಜಾಗತಿಕ ಆರ್ಥಿಕ ಬದಲಾವಣೆಗಳ ನೇರ ಪ್ರಭಾವವು ಈ ಇಳಿಕೆಗೆ ಕಾರಣವೆಂದು ವಿಶ್ಲೇಷಿಸಲಾಗಿದೆ.

ಆಭರಣ ಪ್ರಿಯರಿಗೆ ನೆಮ್ಮದಿ ತರುವಂತೆ 22 ಕ್ಯಾರೆಟ್ ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆಯೂ ಸಹ ಇಳಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 1,750 ರೂ. ಇಳಿಕೆಯಾಗಿ 1,30,600 ರೂ.ಗೆ (1 ಗ್ರಾಂಗೆ 13,060 ರೂ.) ತಲುಪಿದೆ. ಹಾಗೆಯೇ, 18 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 1,430 ರೂ. ಕುಸಿದು 1,06,860 ರೂ.ಗೆ (1 ಗ್ರಾಂಗೆ 10,686 ರೂ.) ಮಾರಾಟವಾಗುತ್ತಿದೆ.

ಚಿನ್ನದ ಜೊತೆಜೊತೆಗೆ ಬೆಳ್ಳಿ ಬೆಲೆಯಲ್ಲೂ ಸತತ ಎರಡನೇ ದಿನವೂ ಭಾರಿ ಕುಸಿತ ದಾಖಲಾಗಿದೆ. ಅಕ್ಟೋಬರ್ 23ರಂದು 1 ಗ್ರಾಂ ಬೆಳ್ಳಿ ಬೆಲೆಯಲ್ಲಿ 5 ರೂ. ಕಡಿಮೆಯಾಗಿ 220 ರೂ.ಗೆ ತಲುಪಿದೆ. ಪರಿಣಾಮವಾಗಿ, ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 5,000 ರೂ.ಗಳಷ್ಟು ಭಾರೀ ಇಳಿಕೆ ಕಂಡುಬಂದಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 2,20,000 ರೂಪಾಯಿಗೆ ದಾಖಲಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರಲ್ಲಿ ವಾಣಿವಿಲಾಸ್ ಆಸ್ಪತ್ರೆ ವೈದ್ಯರ ಯಡವಟ್ಟು : 57 ದಿನದ ಹೆಣ್ಣು ಮಗುವಿನ ಕಾಲು ಬೆರಳುಗಳೆ ಕಟ್!ದೆಹಲಿಯ ವಾಯುಮಾಲಿನ್ಯ ನಿಯಂತ್ರಣದಲ್ಲಿ GRAP ವಿಫಲವೇ? ಶಾಶ್ವತ ಪರಿಹಾರಕ್ಕೆ ವರ್ಷವಿಡೀ ಕ್ರಮ ಅಗತ್ಯಪಂಜಾಬ್ ಚುನಾವಣೆಗೆ ಮುನ್ನ ಬಿಜೆಪಿ ಜೊತೆ ಮೈತ್ರಿ ಸುಳಿವು ನೀಡಿದ ಸುಖ್‌ಬೀರ್ ಬಾದಲ್; ಎಎಪಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿBREAKING : ಸ್ಟಿಂಗ್ ಆಪರೇಷನ್ ನಲ್ಲಿ ನಮ್ಮ ಪಕ್ಷದವರೆ ಇದ್ದಾರೆ : ಯತೀಂದ್ರ ಸಿದ್ದರಾಮಯ್ಯ ಹೊಸ ಬಾಂಬ್!BREAKING : ಬೆಂಗಳೂರಲ್ಲಿ ಭೂಕಂಪ : ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 3.0 ರಷ್ಟು ದಾಖಲು, ಬೆಚ್ಚಿಬಿದ್ದ ಜನತೆ!BREAKING : 109 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ; ತುರ್ತು ಭೂ ಸ್ಪರ್ಶವಿಶ್ವದ ನಂ.1 ಸ್ಕಾಚ್ ವಿಸ್ಕಿ ಮಾರುಕಟ್ಟೆಯಾಗಲು ಭಾರತ ಸಜ್ಜು! ಮದ್ಯದ ಬೆಲೆ ಕಡಿಮೆಯಾಗುತ್ತಾ?ಮಂಡ್ಯ: ಕಬ್ಬಿನ ಬೆಲೆ ಏರಿಕೆ ಹಾಗೂ ಸಾಲ ಮನ್ನಾ ಮಾಡುವಂತೆ ಗಣಂಗೂರು ಟೋಲ್ ಬಳಿ ರೈತರ ಉಗ್ರ ಪ್ರತಿಭಟನೆ; ಹೆದ್ದಾರಿ ಬಂದ್!Gold Price : ಚಿನ್ನ ಪ್ರೀಯರಿಗೆ ಭರ್ಜರಿ ಗುಡ್ ನ್ಯೂಸ್ : ಬಂಗಾರದ ಬೆಲೆಯಲ್ಲಿ ₹1900 ಭಾರಿ ಕುಸಿತ, 5 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ!BIG NEWS : ವಿಧಾನ ಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ : ಬಿಜೆಪಿ ಶಾಸಕ ಮುನಿರತ್ನ ಮೇಲೆ ಹಲ್ಲೆಗೆ ಯತ್ನ!