LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯದಲ್ಲಿ 'ಗೃಹ ಜ್ಯೋತಿ' ತಪ್ಪಿದವರಿಗೆ ಗುಡ್ ನ್ಯೂಸ್: ಮತ್ತೆ ಸಮೀಕ್ಷೆ ವಿಸ್ತರಣೆ | Gruha Jyothi Scheme

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹ ಜ್ಯೋತಿ’ ಯೋಜನೆಯಡಿ ಬೆಸ್ಕಾಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮನೆ-ಮನೆ ಸಮೀಕ್ಷೆಯಿಂದ ವಂಚಿತರಾದ ಗ್ರಾಹಕರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಸಮೀಕ್ಷಾ ಸಿಬ್ಬಂದಿ ಭೇಟಿ ನೀಡಿದ ವೇಳೆ ಮನೆಗೆ ಬೀಗ ಹಾಕಿದ್ದ ಕಾರಣಕ್ಕೆ ಅಥವಾ ಮನೆ ಖಾಲಿಯಿದ್ದ ಪರಿಣಾಮ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಗ್ರಾಹಕರು, ಅಕ್ಟೋಬರ್.31ರೊಳಗೆ ಸಮೀಪದ ಬೆಸ್ಕಾಂ ಉಪ ವಿಭಾಗ ಕಚೇರಿಗೆ ಖುದ್ದಾಗಿ ತೆರಳಿ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಕೊನೆಯ ಅವಕಾಶ ಕಲ್ಪಿಸಲಾಗಿದೆ.

ಶೇ. 97.45ರಷ್ಟು ಸಮೀಕ್ಷೆ ಪೂರ್ಣ

ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಹಾಗೂ ಅಮೃತ ಜ್ಯೋತಿ ಫಲಾನುಭವಿಗಳು ಸೇರಿದಂತೆ ಒಟ್ಟು 74,29,773 ಗೃಹ ಜ್ಯೋತಿ ಗ್ರಾಹಕರಿದ್ದಾರೆ. ಈ ಪೈಕಿ ಅಕ್ಟೋಬರ್‌ 14ರ ವರೆಗೆ 72,40,489 ಗ್ರಾಹಕರ (ಶೇ. 97.45) ಮನೆ ಸಮೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದೆ.

16.37 ಲಕ್ಷ ಗ್ರಾಹಕರಿಗೆ ಅಂತಿಮ ಅವಕಾಶ

ಸಮೀಕ್ಷಾ ಕಾರ್ಯದ ವೇಳೆ ಸುಮಾರು 16.37 ಲಕ್ಷ ಗ್ರಾಹಕರು ಸ್ಥಳದಲ್ಲಿ ಲಭ್ಯವಾಗಿಲ್ಲ. ಇದರಲ್ಲಿ 16.09 ಲಕ್ಷ ಮನೆಗಳು ಬೀಗ ಹಾಕಲ್ಪಟ್ಟಿದ್ದರೆ, 28,519 ಮನೆಗಳು ಖಾಲಿಯಿರುವುದು ಪತ್ತೆಯಾಗಿದೆ. ಈ ವರ್ಗದ ಅರ್ಹ ಫಲಾನುಭವಿಗಳು ಯೋಜನೆಯ ಲಾಭದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸಮೀಕ್ಷೆ ಅವಧಿಯನ್ನು ವಿಸ್ತರಿಸುವಂತೆ ಬೆಸ್ಕಾಂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಬೆಸ್ಕಾಂ ವಿನಂತಿಯನ್ನು ಪರಿಗಣಿಸಿದ ರಾಜ್ಯ ಸರ್ಕಾರ, ಸಮೀಕ್ಷೆಯ ಅವಧಿಯನ್ನು ಅಕ್ಟೋಬರ್‌ 31ರವರೆಗೆ ವಿಸ್ತರಿಸಿ ಅಧಿಕೃತ ಆದೇಶ ಹೊರಡಿಸಿದೆ.

ದಾಖಲೆ ಪರಿಶೀಲನೆಗೆ ಇದುವೇ ಕೊನೆ ದಿನ

ಮನೆ-ಮನೆ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಗ್ರಾಹಕರು ಅಕ್ಟೋಬರ್ 31ರ ಒಳಗೆ ತಮ್ಮ ವ್ಯಾಪ್ತಿಯ ಬೆಸ್ಕಾಂ ಉಪ ವಿಭಾಗ ಕಚೇರಿಗೆ ನೇರವಾಗಿ ಭೇಟಿ ನೀಡಿ ನಿಗದಿತ ದಾಖಲೆಗಳನ್ನು ಒದಗಿಸಿ ಪರಿಶೀಲನೆ ಪೂರ್ಣಗೊಳಿಸಬೇಕು. ಇದು ದಾಖಲೆಗಳ ಪರಿಶೀಲನೆಗೆ ನೀಡಲಾಗುತ್ತಿರುವ ಅಂತಿಮ ಹಾಗೂ ಒಂದು ಬಾರಿಯ ಅವಕಾಶವಾಗಿದ್ದು, ತಪ್ಪಿದಲ್ಲಿ ಯೋಜನೆಯ ಪ್ರಯೋಜನ ಪಡೆಯಲು ತೊಂದರೆಯಾಗಬಹುದು ಎಂದು ಬೆಸ್ಕಾಂ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಾಕಿಸ್ತಾನದ ಪೇಶಾವರದಲ್ಲಿ ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿತ: ಮೃತರ ಸಂಖ್ಯೆ 35ಕ್ಕೆ ಏರಿಕೆಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿರಾಜ್ಯದ 226 ತಾಲ್ಲೂಕುಗಳು ಬರಪೀಡಿತ; ₹60 ಸಾವಿರ ಕೋಟಿಗೂ ಅಧಿಕ ನಷ್ಟದ ಅಂದಾಜು : ಡಿಸಿಎಂ ಡಾ.ಜಿ ಪರಮೇಶ್ವರ್ದೀಪಾವಳಿ ವೇಳೆ ರಸ್ತೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸಲು ನಿಷೇಧ: ಬಾಂಬೆ ಹೈಕೋರ್ಟ್ ಮಹತ್ವದ ಆದೇಶಇಂಫಾಲದ ಬಿಎಸ್ಎಫ್ ಶಿಬಿರದಲ್ಲಿ ಫುಡ್ ಪಾಯ್ಸನಿಂಗ್ ನಿಂದ 81 ಸಿಬ್ಬಂದಿ, 3 ನಾಗರಿಕರು ಅಸ್ವಸ್ಥ: ಆಸ್ಪತ್ರೆಗೆ ದಾಖಲುಪುನೀತ್ ರಾಜ್‌ಕುಮಾರ್ ಸಾವು : ಕೊನೆಯ ಒಂದೂವರೆ ಗಂಟೆಯಲ್ಲಿ ಏನಾಯಿತು? ವೈದ್ಯರು ಬಿಚ್ಚಿಟ್ಟ ಆಘಾತಕಾರಿ ಮಾಹಿತಿ!ಮೊದಲ ದಿನವೇ ಬಾಕ್ಸ್ ಆಫೀಸ್ ಕೊಳ್ಳೆಹೊಡೆದ ಸೂಪರ್ ಸ್ಟಾರ್ ರಜನಿಕಾಂತ್ ‘ಜೈಲರ್ 2’ ಗಳಿಸಿದ್ದೆಷ್ಟು ಗೊತ್ತಾ…?ರೈತರಿಗೆ ದೀಪಾವಳಿ ಗಿಫ್ಟ್‌! ಪಿಎಂ ಕಿಸಾನ್ 24ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ್?ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಮಾಡಿದ ರಾಕೇಶ್ ಶೆಟ್ಟಿ ಬಂಧನಕ್ಕೆ 2 ದಿನ ಡೆಡ್ ಲೈನ್ ಕೊಟ್ಟ HDK‘ಎಸ್ಐಆರ್’ ವಿವಾದದ ನಡುವೆಯೇ, ಅರ್ಹ ಮತದಾರರ ನೋಂದಣಿ ಹೆಚ್ಚಿಸಲು ಚುನಾವಣಾ ಆಯೋಗ ಮಹತ್ವದ ಹೆಜ್ಜೆ: SSR ನಡೆಸುವುದಾಗಿ ಘೋಷಣೆ