LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

KPSC ನೇಮಕಾತಿ ಅಕ್ರಮದ ಜಾಲ ಭೇದಿಸಿದ CID: 13 ಬೇನಾಮಿ ಖಾತೆಗಳಲ್ಲಿದ್ದ 67 ಲಕ್ಷ ಸೀಜ್!

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಭಾರೀ ಭ್ರಷ್ಟಾಚಾರ ಜಾಲದ ತನಿಖೆ ತೀವ್ರಗೊಂಡಿದ್ದು, ಹಿರಿಯ ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರ್ ಗಂಗ್ವಾರ್ ಹಾಗೂ ಪ್ರಕರಣದ ಪ್ರಮುಖ ದಲ್ಲಾಳಿ ಬಸವರಾಜ ಕನ್ನಾಳೆ ನಡುವಿನ ಅಕ್ರಮ ನಂಟು ಬಯಲಾಗಿದೆ. ಸಿಐಡಿ (CID) ಅಧಿಕಾರಿಗಳು ನಡೆಸುತ್ತಿರುವ ಸತತ ವಿಚಾರಣೆಯಲ್ಲಿ ಹಗರಣದ ಕರಾಳ ಮುಖಗಳು ಒಂದೊಂದಾಗಿ ಸಾಕ್ಷ್ಯಸಮೇತ ಬೆಳಕಿಗೆ ಬರುತ್ತಿವೆ.

ಅಧಿಕಾರಿಯ ಸಂಪೂರ್ಣ ಆತಿಥ್ಯ ವಹಿಸಿಕೊಂಡಿದ್ದ ಮಧ್ಯವರ್ತಿ

2024ರಲ್ಲಿ ಗಂಗ್ವಾರ್ ಅವರು ಕೆಪಿಎಸ್‌ಸಿಯ ಪರೀಕ್ಷಾ ನಿಯಂತ್ರಕರಾಗಿ ಅಧಿಕಾರ ವಹಿಸಿಕೊಂಡ ಕ್ಷಣದಿಂದಲೇ ಅವರ ಆಪ್ತ ವಲಯದಲ್ಲಿದ್ದ ಬಸವರಾಜ ಕನ್ನಾಳೆ ಅಕ್ರಮಕ್ಕೆ ರಹದಾರಿ ಸಿದ್ಧಪಡಿಸಿದ್ದನು. ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಉದ್ಯೋಗಾಕಾಂಕ್ಷಿಗಳಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡುವ ಸಂಚಿಗೆ ಅಧಿಕಾರಿಯನ್ನು ಒಪ್ಪಿಸಿದ್ದ ಕನ್ನಾಳೆ, ಅವರ ಸಕಲ ಖರ್ಚು-ವೆಚ್ಚಗಳನ್ನು ತಾನೇ ನೋಡಿಕೊಳ್ಳುತ್ತಿದ್ದನು. ಗಂಗ್ವಾರ್ ಅವರ ನವದೆಹಲಿ ಮತ್ತು ಉತ್ತರ ಪ್ರದೇಶ ಪ್ರವಾಸಗಳಿಗಾಗಿ ಸುಮಾರು 11 ಲಕ್ಷ ರೂಪಾಯಿ ಮೌಲ್ಯದ ವಿಮಾನ ಟಿಕೆಟ್‌ಗಳನ್ನು ಕನ್ನಾಳೆಯೇ ಬುಕ್ ಮಾಡಿಕೊಟ್ಟಿದ್ದ ಅಂಶ ತನಿಖೆಯಲ್ಲಿ ದೃಢಪಟ್ಟಿದೆ. ಅಧಿಕಾರಿಯ ಮನೆಗೆ ನಿರಂತರವಾಗಿ ಭೇಟಿ ನೀಡುತ್ತಿದ್ದ ಈತ, ಅವರ ಇಷ್ಟಾರ್ಥಗಳನ್ನು ಪೂರೈಸುತ್ತಾ ತನ್ನ ಕೈಗೊಂಬೆಯನ್ನಾಗಿಸಿಕೊಂಡು ಡೀಲ್ ಕುದುರಿಸುತ್ತಿದ್ದನು.

ಕಜಕಿಸ್ತಾನಕ್ಕೆ ಪರಾರಿಯಾಗಲು ಯತ್ನ: ದೆಹಲಿ ಏರ್‌ಪೋರ್ಟ್‌ನಲ್ಲಿ ಬಂಧನ

ಪ್ರಕರಣದ ತನಿಖೆ ಸಿಐಡಿ ಕೈಗೆ ಹೋಗುತ್ತಿದ್ದಂತೆ, ತುಮಕೂರು ವಿವಿ ಸಿಂಡಿಕೇಟ್ ಸದಸ್ಯನಾಗಿದ್ದ ಕನ್ನಾಳೆಗೆ ಬಂಧನದ ಆತಂಕ ಶುರುವಾಗಿತ್ತು. ರಾಜಕೀಯ ಪ್ರಭಾವಿಗಳ ರಕ್ಷಣೆಯೂ ಕೈಕೊಟ್ಟಿದ್ದರಿಂದ ವಿದೇಶಕ್ಕೆ ಎಸ್ಕೇಪ್ ಆಗಲು ಸಂಚು ರೂಪಿಸಿದ್ದನು. ಕಜಕಿಸ್ತಾನದಲ್ಲಿ ಒಂದು ತಿಂಗಳು ನೆಲೆಸಲು ವೀಸಾ ಪಡೆದುಕೊಂಡಿದ್ದ ಈತ, ನವದೆಹಲಿ ವಿಮಾನ ನಿಲ್ದಾಣದ ಮೂಲಕ ದೇಶ ಬಿಟ್ಟು ಹಾರಲು ಯತ್ನಿಸುತ್ತಿದ್ದಾಗಲೇ ತನಿಖಾ ತಂಡದ ಬಲೆಗೆ ಬಿದ್ದಿದ್ದಾನೆ.

13 ಬೇನಾಮಿ ಖಾತೆ, ಲಕ್ಷಾಂತರ ನಗದು ಜಪ್ತಿ

ಅಭ್ಯರ್ಥಿಗಳಿಂದ ಸುಲಿಗೆ ಮಾಡುತ್ತಿದ್ದ ಹಣವನ್ನು ಕನ್ನಾಳೆ ಬೇರೆ ಬೇರೆ ಹೆಸರಿನ ಖಾತೆಗಳಿಗೆ ವರ್ಗಾಯಿಸುತ್ತಿದ್ದನು. ಬೀದರ್‌ನ ಓಂ ಶ್ರೀಲಕ್ಷ್ಮಿ ಸೌಹಾರ್ದ ಸೊಸೈಟಿ ಸೇರಿದಂತೆ ವಿವಿಧ ಬ್ಯಾಂಕುಗಳಲ್ಲಿ ನಿರ್ವಹಿಸುತ್ತಿದ್ದ ಇಂತಹ 13 ಬೇನಾಮಿ ಖಾತೆಗಳಲ್ಲಿದ್ದ 67 ಲಕ್ಷ ರೂಪಾಯಿ ನಗದನ್ನು ಸಿಐಡಿ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಇದರೊಂದಿಗೆ ಆತನ ಬೆಂಗಳೂರಿನ ಸಂಜಯನಗರದ ಮನೆಯ ಮೇಲೆ ದಾಳಿ ನಡೆಸಿ 3 ಲಕ್ಷ ರೂಪಾಯಿ ನಗದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಪ್ರಕರಣದ ಬೇರುಗಳನ್ನು ಹೆಕ್ಕಿ ತೆಗೆಯಲು ತನಿಖೆ ಮುಂದುವರಿದಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹೀಗಿದೆ ಇಂದಿನ ಮಂಗಳೂರಲ್ಲಿ ಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ | Karnataka Cabinet Meetingಮಂಗಳೂರು ನೂತನ ಕೇಂದ್ರ ಕಾರಾಗೃಹದ ಮುಖ್ಯ ಗೋಡೆ ನಿರ್ಮಾಣಕ್ಕೆ ₹10 ಕೋಟಿ ಅನುದಾನಕ್ಕೆ ಸಂಪುಟ ಅನುಮೋದನೆಮತದಾರರ ಕರಡು ಪಟ್ಟಿಯಲ್ಲಿ ಭಾರೀ ಲೋಪ: ಚುನಾವಣಾ ಆಯೋಗಕ್ಕೆ ಬಿಕೆ ಹರಿಪ್ರಸಾದ್ ಪತ್ರಮಂಗಳೂರಿಗೆ ಸಿಎಂ ಡಿಕೆಶಿ ಬಂಪರ್ ಗಿಫ್ಟ್: ಜಲ ಮೆಟ್ರೋ, ಬಂದರು, ರಸ್ತೆ ಯೋಜನೆಗಳಿಗೆ ಸಂಪುಟ ಅಸ್ತು, ಇಲ್ಲಿದೆ ಸಂಪೂರ್ಣ ಹೈಲೈಟ್ಸ್BREAKING: ದಕ್ಷಿಣ ಕನ್ನಡ ಜಿಲ್ಲೆ ಇನ್ಮುಂದೆ 'ಮಂಗಳೂರು ಜಿಲ್ಲೆ': ರಾಜ್ಯ ಸಂಪುಟ ಸಭೆಯಲ್ಲಿ ನಿರ್ಧಾರBIG BREAKING: ತುಳುವಿಗೆ ರಾಜ್ಯದ 2ನೇ ಭಾಷೆ ಮಾನ್ಯತೆ ನೀಡಲು ರಾಜ್ಯ ಸಚಿವ ಸಂಪುಟ ತೀರ್ಮಾನಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಿ: ಸಿಎಂ ಡಿ.ಕೆ. ಶಿವಕುಮಾರ್‌ಗೆ ವಕೀಲರ ನಿಯೋಗದಿಂದ ಮನವಿ ಸಲ್ಲಿಕೆKPSC ನೇಮಕಾತಿ ಅಕ್ರಮದ ಜಾಲ ಭೇದಿಸಿದ CID: 13 ಬೇನಾಮಿ ಖಾತೆಗಳಲ್ಲಿದ್ದ 67 ಲಕ್ಷ ಸೀಜ್!BREAKING : ನಟ ದರ್ಶನ್ ಗೆ ಬಿಗ್ ರಿಲೀಫ್ : ಕ್ರಾಸ್ ಎಕ್ಸಾಮಿನೇಷನ್ ವೇಳೆ, ಖುದ್ದು ಹಾಜರಾತಿಗೆ ಅನುಮತಿ ನೀಡಿದ ಹೈಕೋರ್ಟ್ತೆರವುಗೊಳಿಸಿದ್ದ ಫುಟ್‌ಪಾತ್ ಮೇಲೆ ಮತ್ತೆ ವ್ಯಾಪಾರ ಮಾಡಿದ್ರೆ FIR, ಸಾಮಗ್ರಿ ಜಪ್ತಿ: ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ