LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಲಿಂಕ್ಡ್‌ಇನ್ ಹೊಸ ಸಿಇಒ ಆಗಿ ಡೇನಿಯಲ್ ಶಾಪೆರೊ ನೇಮಕ :ಮೈಕ್ರೋಸಾಫ್ಟ್‌ಗೆ ಬಡ್ತಿ ಪಡೆದ ರಯಾನ್ ರೋಸ್ಲಾನ್ಸ್ಕಿ

ವಾಷಿಂಗ್ಟನ್: ವಿಶ್ವದ ಅತಿದೊಡ್ಡ ವೃತ್ತಿಪರ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಲಿಂಕ್ಡ್‌ಇನ್ (LinkedIn) ತನ್ನ ಆಡಳಿತ ಮಂಡಳಿಯಲ್ಲಿ ಬಿಗ್ ಚೇಂಜ್ ಮಾಡಿದೆ. ಸಂಸ್ಥೆಯ ನೂತನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (CEO) ದೀರ್ಘಕಾಲದ ಅನುಭವಿ ಡೇನಿಯಲ್ ಶಾಪೆರೊ ಅವರನ್ನು ನೇಮಕ ಮಾಡಲಾಗಿದೆ. 2020 ರಿಂದ ಸಂಸ್ಥೆಯನ್ನು ಮುನ್ನಡೆಸಿದ್ದ ರಯಾನ್ ರೋಸ್ಲಾನ್ಸ್ಕಿ ಅವರ ಜಾಗಕ್ಕೆ ಈಗ ಶಾಪೆರೊ ಎಂಟ್ರಿ ಕೊಟ್ಟಿದ್ದಾರೆ.

ಯಾರು ಈ ಡೇನಿಯಲ್ ಶಾಪೆರೊ?

ಸಂಸ್ಥೆಯ ಒಳಗಿನವರನ್ನೇ ಉನ್ನತ ಸ್ಥಾನಕ್ಕೆ ಏರಿಸುವ ಮೂಲಕ ಲಿಂಕ್ಡ್‌ಇನ್ ತನ್ನ ನಂಬಿಕಸ್ಥ ನಾಯಕನಿಗೆ ಮನ್ನಣೆ ನೀಡಿದೆ.ಡೇನಿಯಲ್ ಅವರು 2008 ರಲ್ಲಿ ಲಿಂಕ್ಡ್‌ಇನ್‌ನ 300ನೇ ಉದ್ಯೋಗಿಯಾಗಿ ಸೇರಿದ್ದರು. ಅಂದು ಸಾಮಾನ್ಯ ಉದ್ಯೋಗಿಯಾಗಿ ಸೇರಿದವರು ಇಂದು ಸಂಸ್ಥೆಯ ಅತ್ಯುನ್ನತ ಸಿಇಒ ಪಟ್ಟಕ್ಕೇರಿರುವುದು ವಿಶೇಷ.

ಈ ಹಿಂದೆ ಅವರು ಸಂಸ್ಥೆಯ ಚೀಫ್ ಆಪರೇಟಿಂಗ್ ಆಫೀಸರ್ (COO) ಆಗಿ ಜವಾಬ್ದಾರಿ ನಿಭಾಯಿಸುತ್ತಿದ್ದರು.ಲಿಂಕ್ಡ್‌ಇನ್ ಉತ್ಪನ್ನಗಳ ಅಭಿವೃದ್ಧಿ ಮತ್ತು ಮಾರುಕಟ್ಟೆ ವಿಸ್ತರಣೆಯಲ್ಲಿ ಇವರ ಪಾತ್ರ ಬಹಳ ದೊಡ್ಡದಿದೆ.

ರಯಾನ್ ರೋಸ್ಲಾನ್ಸ್ಕಿ ಅವರ ಮುಂದಿನ ಹಾದಿ?

ಲಿಂಕ್ಡ್‌ಇನ್ ಸಿಇಒ ಸ್ಥಾನದಿಂದ ನಿರ್ಗಮಿಸುತ್ತಿರುವ ರಯಾನ್ ರೋಸ್ಲಾನ್ಸ್ಕಿ ಅವರು ಸಂಸ್ಥೆಯಿಂದ ಹೊರಹೋಗುತ್ತಿಲ್ಲ. ಬದಲಿಗೆ, ಮಾತೃ ಸಂಸ್ಥೆಯಾದ ಮೈಕ್ರೋಸಾಫ್ಟ್ (Microsoft) ನಲ್ಲಿ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ (Executive Vice President) ಬಡ್ತಿ ಪಡೆದಿದ್ದಾರೆ. ರಯಾನ್ ಅವಧಿಯಲ್ಲಿ ಲಿಂಕ್ಡ್‌ಇನ್ ಸದಸ್ಯರ ಸಂಖ್ಯೆ 70 ಕೋಟಿಯಿಂದ 130 ಕೋಟಿಗೆ ಏರಿಕೆಯಾಗಿರುವುದು ಅವರ ಯಶಸ್ವಿ ನಾಯಕತ್ವಕ್ಕೆ ಸಾಕ್ಷಿ.

ಮುಂದಿನ ಗುರಿ: AI ಕ್ರಾಂತಿ

ಪ್ರಸ್ತುತ ಮಾರುಕಟ್ಟೆಯಲ್ಲಿ ಕೃತಕ ಬುದ್ಧಿಮತ್ತೆ (AI) ಹವಾ ಜೋರಾಗಿದೆ. ಲಿಂಕ್ಡ್‌ಇನ್ ಕೂಡ ತನ್ನ ಸೇವೆಗಳಲ್ಲಿ AI ಅನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದು, ಈ ತಾಂತ್ರಿಕ ಬದಲಾವಣೆಯನ್ನು ಯಶಸ್ವಿಯಾಗಿ ಮುನ್ನಡೆಸುವ ಜವಾಬ್ದಾರಿ ಈಗ ಶಾಪೆರೊ ಹೆಗಲ ಮೇಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಮತ್ತು ಕಂಪನಿಗಳಿಗೆ ಮತ್ತಷ್ಟು ಸುಧಾರಿತ ಸೇವೆ ನೀಡುವುದು ಇವರ ಮುಂದಿರುವ ದೊಡ್ಡ ಸವಾಲು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ