LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕರ್ನಾಟಕಕ್ಕೆ ಏಕೈಕ ಮಾಸ್ ಲೀಡರ್ ಯಡಿಯೂರಪ್ಪ: ಬರಪೀಡಿತ ನಾಡಿಗೂ ನೀರುಣಿಸಿ, ರೈತರ ಬದುಕು ಹಸನಾಗಿಸಿದ ಭಗೀರಥ: ಸಂಸದ ಬಸವರಾಜ್ ಬೊಮ್ಮಾಯಿ

ಚಿತ್ರದುರ್ಗ: ಬರ ಪಡೀತ ಮಧ್ಯ ಕರ್ನಾಟಕ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಗಂಗಾ ಮಾತೆಯನ್ನು ಭೂಮಿತಾಯಿಗೆ ಉಣಬಡಿಸಿ ಅದಕ್ಕೆ ರೈತರ ಬೆವರು ಸೇರಿದಾಗ ಅಲ್ಲಿ ಬಂಗಾರದ ಬೆಳೆ ಬೆಳೆಯಲು ಅವಕಾಶ ಒದಗಿಸಿದ ಭಗೀರಥ ಬಿ.ಎಸ್. ಯಡಿಯೂರಪ್ಪ. ರಾಜ್ಯದ ಇತಿಹಾಸದಲ್ಲಿ ಇದನ್ನು ಯಾರು ಮರೆಯಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಶ್ಲಾಘಿಸಿದ್ದಾರೆ.

ಚಿತ್ರದುರ್ಗದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬಸವರಾಜ್ ಬೊಮ್ಮಾಯಿ, ಯಡಿಯೂರಪ್ಪ ಅನ್ನುವ ಹೆಸರಿನಲ್ಲಿಯೇ ದೊಡ್ಡ ಶಕ್ತಿ ಇದೆ. ಇಡೀ ಕರ್ನಾಟಕದಲ್ಲಿ ಬಡವರ ಮನೆಯಲ್ಲಿ, ಬಡವರ ಮನದಲ್ಲಿ ದಲಿತರ ಹೃದಯದಲ್ಲಿ ಮಿಡಿಯುತ್ತಿರುವ ಹೆಸರು ಯಡಿಯೂರಪ್ಪ. ಕೋಟೆ ನಾಡು, ಒನಕೆ ಓಬವ್ವನ ನಾಡು, ಮದಕರಿ ನಾಯಕನ ನಾಡಿನಲ್ಲಿ ಬಿಸಿಲು ಬರಗಾಲ ಶಾಸ್ವತವಾಗಿದ್ದಾಗ ಈ ನಾಡಿಗೆ ಶಾಶ್ವತವಾಗಿ ನೀರು ಉಣಿಸಬೇಕೆಂದು ಭದ್ರಾ ಮೇಲ್ದಂಡೆ ಯೋಜನೆ ಬಹಳ ವರ್ಷದಿಂದ ನೆನೆಗುದಿಗೆ ಬಿದ್ದಿತ್ತು. ನಿಜಲಿಂಗಪ್ಪ ಅವರ ಕಾಲದಿಂದ ನೆನೆಗುದಿಗೆ ಬಿದ್ದಂತಹ ಈ ಯೋಜನೆಗೆ ಯಡಿಯೂರಪ್ಪ ಅವರು 2008 ರಲ್ಲಿ ಮುಖ್ಯಮಂತ್ರಿ ಆದ ತಕ್ಷಣವೇ ಮಧ್ಯ ಕರ್ನಾಟಕದ ಬಿಸಿಲಿನ ನಾಡಿಗೆ ಕುಡಿಯುವ ನೀರು ಕೊಡಬೇಕು ಎಂದು ನಿರ್ಣಯ ಮಾಡಿ, ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ಕೊಟ್ಟಿದ್ದಾರೆ. ಅದೇ ರೀತಿ ವಾಣಿ ವಿಲಾಸ ಸಾಗರಕ್ಕೆ ಐದು ಟಿಎಂಸಿ ನೀರು ಕೊಟ್ಟಿದ್ದರಿಂದ ಚಿತ್ರದುರ್ಗ ಜಿಲ್ಲೆಗೆ ಕುಡಿಯುವ ನೀರು, ಕೃಷಿಗೆ ನೀರು ಕೊಟ್ಟಿರುವ ಭಗೀರಥ ನಮ್ಮ ನಾಯಕ ಬಿ.ಎಸ್. ಯಡಿಯೂರಪ್ಪ ಎಂದರು.

ವಿರೋಧ ಪಕ್ಷದಲ್ಲಿ ಇದ್ದಾಗ ಯಾತಕ್ಕಾಗಿ ಹೋರಾಟ ಮಾಡಿದ್ದರೊ ಅಧಿಕಾರಕ್ಕೆ ಬಂದಾಗ ಆ ಹೊರಾಟದ ಬೇಡಿಕೆಗಳಿಗೆ, ಆ ಯೋಜನೆಗಳಿಗೆ ಕಾಯಕಲ್ಪ ಕೊಟ್ಟು ಅವರ ಹೋರಾಟದ ಪ್ರಾಮಾಣಿಕತೆಯ ಪ್ರದರ್ಶನ ಮಾಡಿರುವುದು ನಮ್ಮ ಧೀಮಂತ ನಾಯಕ ಯಡಿಯೂರಪ್ಪ. ಬಿಜಾಪುರದಲ್ಲಿ ಕೆರೆ ತುಂಬಿಸುವ ಯೋಜನೆ, ಶಿಗ್ಗಾವಿಯಲ್ಲಿ ಕೆರೆ ತುಂಬಿಸುವ ಯೋಜನೆ, ದಾವಣಗೆರೆಯ ರಾಜನಹಳ್ಳಿಯ ಕೆರೆ ತುಂಬಿಸುವ ಯೋಜನೆ, ಉಮ್ರಾಣಿ ಅಮೃತಪುರ ಯೋಜನೆ, ಚನ್ನಗಿರಿ ಯೋಜನೆ, ಅದೇ ರೀತಿ ತುಮಕೂರು ಜಿಲ್ಲೆಯಲ್ಲಿ ಗೂಳೂರು ಹೆಬ್ಬೂರು ಯೋಜನೆ, ಬರ ಪೀಡಿತ ಚಾಮರಾಜ ನಗರದಲ್ಲಿಯೂ ಕೆರೆ ತುಂಬಿಸುವ ಯೋಜನೆ, ರಾಜ್ಯದ ಉದ್ದಗಲಕ್ಕೂ ಕೂಡ ಗಂಗಾ ಮಾತೆಯನ್ನು ಭೂಮಿತಾಯಿಗೆ ಉಣಬಡಿಸಿ ಅದಕ್ಕೆ ರೈತರ ಬೆವರು ಸೇರಿದಾಗ ಅಲ್ಲಿ ಬಂಗಾರದ ಬೆಳೆ ಬೆಳೆಯಲು ಅವಕಾಶ ಒದಗಿಸಿದ ನಾಯಕ ಬಿ.ಎಸ್. ಯಡಿಯೂರಪ್ಪ. ರಾಜ್ಯ ಹಾಗೂ ರಾಜ್ಯದ ಜನರು ಇದನ್ನು ಗುರುತಿಸಬೇಕು. ರಾಜಕಾರಣದಲ್ಲಿ ಸುಳ್ಳು ಹೇಳಿ ಜನರನ್ನು ಜನಾಂಗವನ್ನು ದಾರಿ ತಪ್ಪಿಸಿ ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡುವಂತಹ ಈ ದಿನಮಾನಗಳಲ್ಲಿ ಒಬ್ಬ ಪ್ರಾಮಾಣಿಕ ಜನಪರವಾಗಿರುವ ಜನನಾಯಕರಾಗಿರುವಂತ ರೈತನ ಮಗ ಆಗಿರುವಂತವರ ಕೈಯಲ್ಲಿ ಅಧಿಕಾರ ಕೊಟ್ಟರೆ ಏನಾಗುತ್ತದೆ ಎನ್ನುವುದಕ್ಕೆ ಯಡಿಯೂರಪ್ಪ ನವರು ರಾಜ್ಯಕ್ಕೆ ಮಾಡಿ ತೋರಿಸಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಇದನ್ನು ಯಾರು ಮರೆಯಲು ಸಾಧ್ಯವಿಲ್ಲ. ಯಾರೇ ಪ್ರಯತ್ನ ಮಾಡಿದರೂ ಸಾಧ್ಯವಿಲ್ಲ ಎಂದು ಹೇಳಿದರು.

ನಮ್ಮ ರಾಜ್ಯದ ಮುಖ್ಯಮಂತ್ರಿ ಮಾಸ್ ಲೀಡರ್ ಅಂತ ಹೇಳುತ್ತಾರೆ. ಕರ್ನಾಟಕದಲ್ಲಿ ಇತಿಹಾಸ ಸೃಷ್ಟಿ ಮಾಡುವಂತಹ ಈ ಬೃಹತ್ ಜನಶಕ್ತಿ ಕರ್ನಾಟಕದಲ್ಲಿ ಏಕೈಕ ಮಾಸ್ ಲೀಡರ್ ಯಡಿಯೂರಪ್ಪ. ಸಾಮಾಜಿಕ ನ್ಯಾಯ ಅಂತ ಭಾಷಣ ಬಿಗಿದವರು, ಹಿಂದುಳಿದ ವರ್ಗಕ್ಕೆ ಏನು ಮಾಡಿದರು. ಎಸ್ಸಿ ಎಸ್ಟಿ ಜನಾಂಗಕ್ಕೆ ಏನು ಮಾಡಿದರು. ಮೊನ್ನೆ ಅವರು ತೆಗೆದುಕೊಂಡಿರುವ ನಿರ್ಣಯ ದಲಿತ ಸಮೂಹಕ್ಕೆ ಅನ್ಯಾಯ ಮಾಡಿದ್ದಾರೆ. ಯಡಿಯೂರಪ್ಪ ಅವರು ವಾಲ್ಮೀಕಿ ಜಯಂತಿ, ಭಕ್ತ ಕನಕದಾಸರ ಜಯಂತಿ, ಹಲವಾರು ಹಿಂದುಳಿದ ವರ್ಗಗಳ ಪುಣ್ಯಾತ್ಮರನ್ನು ನೆನಪಿಸುವಂತ ಜಯಂತಿ ಮಾಡಿ, ಕಾಗಿನೆಲೆ ಅಭಿವೃದ್ಧಿ, ಬಂಜಾರ ಅಭಿವೃದ್ಧಿ ನಿಗಮ, ಹಲವಾರು ಹಿಂದುಳಿದ ವರ್ಗಗಳಿಗೆ ನಿಗಮ ಮಾಡಿ, ಹಣ ಕೊಟ್ಟು ಅಭಿವೃದ್ದಿ ಮಾಡಿರುವ ನಾಯಕ ಬಿ.ಎಸ್. ಯಡಿಯೂರಪ್ಪ ಎಂದು ಹೇಳಿದರು.

ಬಡವರಿಗಾಗಿ ಹೃದಯ ಮಿಡಿಯುತ್ತದೆ. ಒಬ್ಬ ನಾಯಕನ‌ ಪರೀಕ್ಷೆ ಯಾವಾಗ ಆಗುತ್ತದೆ ಗೊತ್ತಾ ? ರಾಜ್ಯದ ಸಂಕಷ್ಟದ ಕಾಲದಲ್ಲಿ ಯಾರು ಜನರ ಮಧ್ಯ ಹೋಗಿ ಜನರಿಗೆ ನೈತಿಕ ಶಕ್ತಿ ತುಂಬಿ ಅವರ ದುಃಖ ದುಮ್ಮಾನವನ್ನು ದೂರ ಮಾಡುತ್ತಾರೆ. ಅವರೇ ನಿಜವಾದ ಜನನಾಯಕ. ಎರಡು ಉದಾಹರಣೆ 2009 ರಲ್ಲಿ ರಾಜ್ಯದಲ್ಲಿ ಭೀಕರ ಪ್ರವಾಹ ಬಂದಿತ್ತು. ಆ ಸಂದರ್ಭದಲ್ಲಿ ನಾವು ಮೈಸೂರಿನಲ್ಲಿ ಮೀಟಿಂಗ್ ನಲ್ಲಿದ್ದೇವು, ಆ ಮೀಟಿಂಗ್ ಬಿಟ್ಟು ಹೊರಟರೆ ಪ್ರವಾಹವಾಗಿರುವ ಊರುಗಳಿಗೆ ಹೋಗಿ 22 ದಿನ ಮನೆಗೆ ಹೋಗಲಿಲ್ಲ. ಅಲ್ಲಿಂದ ಬಂದ ಮೇಲೆ ಶಾಶ್ವತ ಪರಿಹಾರ ಕೊಡಬೇಕು ಅಂತ 63 ಹಳ್ಳಿಗಳನ್ನು ಪುನರ್ ವಸತಿ ಮಾಡಿ, ಪುನರ್ ನಿರ್ಮಾಣ ಮಾಡಿ ಹೊಸ ಹಳ್ಳಿಗಳನ್ನು ಮಾಡಿ ಮೂಲಬೂತ ಸೌಕರ್ಯ ಕೊಟ್ಟು 67 ಸಾವಿರ ಮನೆ ಕೊಟ್ಟ ಧೀಮಂತ ನಾಯಕ ಯಡಿಯೂರಪ್ಪ.
ಇನ್ನೊಂದು ಅಗ್ನಿ ಪರೀಕ್ಷೆ ಕೊವಿಡ್ ಆಗಿದ್ದ ಸಂದರ್ಭದಲ್ಲಿ. ಅಕ್ಕಪಕ್ಕದ ರಾಜ್ಯಗಳು ಕೇರಳ, ಆಂಧ್ರಪ್ರದೇಶ ಮಹಾರಾಷ್ಟ್ರದಲ್ಲಿ ಹಲವಾರು ಸಾವು ನೋವುಗಳಾಗಿದ್ದವು. ಅದು ಕರ್ನಾಟಕದಲ್ಲಿ ಆಗಬಾರದು ಎಂದು ಮೊದಲನೇ ದಿನದಿಂದ ಹಠ ಮಾಡಿ ಔಷಧಿಗಳನ್ನು ತಂದು ಕೊವಿಡ್ ನ್ನು ನಿಯಂತ್ರಣ ಮಾಡಿ, ಕೂಲಿ ಕಾರ್ಮಿಕರಿಗೆ ವಿಶೇಷ ಅನುದಾನ ಕೊಟ್ಟು, ಅವರ ಬದುಕನ್ನು ಉಳಿಸಿ ಆಕ್ಷಿಜನ್ ಇಲ್ಲದಾಗ ಬೇರೆ ಬೇರೆ ಪ್ರದೇಶಗಳಿಂದ ಆಕ್ಷಿಜನ್ ತಂದು ಆಸ್ಪತ್ರೆಗೆ ತಂದು ಕೊಟ್ಟಿರುವ ಧೀಮಂತ ನಾಯಕ ಯಡಿಯೂರಪ್ಪ ಎಂದು ಹೇಳಿದರು.

ಯಡಿಯೂರಪ್ಪ ಅವರು ನಾವು ಮಾತನಾಡಬಾರದು ನಮ್ಮ ಕೆಲಸ ಮಾತನಾಡಬೇಕು ಅಂತ ಹೇಳುತ್ತಿದ್ದರು. ಅಂತ ಧಿಮಂತ ನಾಯಕನ ಅಭಿಮಾನೋತ್ಸವ ಮಾಡುವ ಸೌಭಾಗ್ಯ ನಮ್ಮದಾಗಿದೆ. ವಯಕ್ತಿಕವಾಗಿ ನನಗೆ ಆಶೀರ್ವಾದ ಮಾಡಿ, ಮಾರ್ಗದರ್ಶನ ಮಾಡಿ, ಸ್ಥಾನ ಮಾನ, ಗೌರವ ಕೊಟ್ಟು, ನಮಗೆ ಶಕ್ತಿ ಕೊಟ್ಟು, ಇನಷ್ಷು ಶಕ್ತಿ ತುಂಬಿರುವ ನನ್ನ ನೆಚ್ಚಿನ ನಾಯಕ ಯಡಿಯೂರಪ್ಪ ನವರಿಗೆ ನೂರು ವರ್ಷಕಾಲ ಭಗವಂತ ಆಶೀರ್ವಾದ ಮಾಡಲಿ, ಆರೋಗ್ಯದಿಂದ ಇರಲಿ, ಕರ್ನಾಟಕವನ್ನು ಮುನ್ನಡೆಸಲಿ ನಮ್ಮೆಲ್ಲರಿಗೂ ಆಶಿರ್ವಾದ ಮಾಡಲಿ, ಈ ಅಭಿಮಾನೋತ್ಸವದಲ್ಲಿ ಒಂದೇ ಒಂದು ಆಡಳಿತ ಪಕ್ಚದ ಸೂರ್ಯ ಮುಳುಗುತ್ತಿದೆ. ನಮ್ಮ ಪಕ್ಷದ ಸೂರ್ಯ ಉದಯ ಆಗುತ್ತಿದೆ. ಅವರ ಹಡಗು ಮುಳಿಗುತ್ತಿದೆ. ನಮ್ಕ ಹಡಗು ದಡ ಸೇರುತ್ತಿದೆ. ಬರುವ ದಿನಗಳಲ್ಲಿ ಒಕ್ಕಟ್ಟಾಗಿ, ಒಂದಾಗಿ ಯಡಿಯೂರಪ್ಪ ಅವರ ಆಡಳಿತ ಅವರ ಕಾರ್ಯಕ್ರಮಗಳು ಮತ್ತೆ ಕರ್ನಾಟಕದಲ್ಲಿ ಸ್ಥಾಪನೆ ಆಗಬೇಕು ಅದಕ್ಕೆ ನಾವು ಇಲ್ಲಿಂದ ಸಂಕಲ್ಪ ಮಾಡಿದರೆ ಮತ್ತೆ ಯಡಿಯೂರಪ್ಪ ಅವರ ಆಶೀರ್ವಾದದ ನಮ್ಮ ಪಕ್ಷದ ಸರ್ಕಾರ ವಿಧಾನಸೌಧದ ಮೂರನೆ ಮಹಡಿಯಲ್ಲಿ ಆಗಬೇಕು. ಕರ್ನಾಟಕ ಮಾತೆ ಭುವನೇಶ್ವರಿಯ ಸೇವೆ ಮಾಡುವ ಅವಕಾಶ ನಮ್ಮದಾಗಬೇಕು. ಚಾಮುಂಡೇಶ್ವರಿ ದುರ್ಗಾಮಾತೆಯ ಆಶೀರ್ವಾದ ಎಲ್ಲರಿಗೂ ಸಿಗಲಿ, ಯಡಿಯೂರಪ್ಪ ಅವರ ಮುಖಾಂತರ ‌ಎಲ್ಲರಿಗೂ ಆಶೀರ್ವಾದ ಹರಿದು ಬರಲಿ ಎಂದು ಆಶಿಸಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ನಾಳೆ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮನ: ಈ ಮಾರ್ಗಗಳಲ್ಲಿ ಸಂಚಾರ ಬದಲಾವಣೆಕರ್ನಾಟಕಕ್ಕೆ ಏಕೈಕ ಮಾಸ್ ಲೀಡರ್ ಯಡಿಯೂರಪ್ಪ: ಬರಪೀಡಿತ ನಾಡಿಗೂ ನೀರುಣಿಸಿ, ರೈತರ ಬದುಕು ಹಸನಾಗಿಸಿದ ಭಗೀರಥ: ಸಂಸದ ಬಸವರಾಜ್ ಬೊಮ್ಮಾಯಿBIG NEWS: ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಅಧಿಕೃತ ಬೆಂಬಲ ಘೋಷಿಸಿದ ವಿಸಿಕೆ: ಸರ್ಕಾರ ರಚನೆಗೆ ಮ್ಯಾಜಿಕ್ ಸಂಖ್ಯೆ ದಾಟಿದ ದಳಪತಿಕಾಂಪೌಂಡ್ ಗೇಟ್ ಬಿದ್ದು 5 ವರ್ಷದ ಮಗು ಸಾವುBIG NEWS: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಭಿಮಾನೋತ್ಸವ: ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾಚಿನ್ನ ಖರೀದಿದಾರರಿಗೆ ವೀಕೆಂಡ್ ಗಿಫ್ಟ್: ಇಂದು ಚಿನ್ನದ ಬೆಲೆ ಇಳಿಕೆ, ಬೆಳ್ಳಿ ಬೆಲೆ ಸ್ಥಿರ ಮೇ 9ರ ಲೇಟೆಸ್ಟ್ ದರ ಪಟ್ಟಿ ನೋಡಿಹೊಳೆಯುವ ಮುಖದ ಚರ್ಮಕ್ಕಾಗಿ ಆಲೂಗಡ್ಡೆ ಫೇಸ್ ಪ್ಯಾಕ್: ಮನೆಯಲ್ಲೇ ಸಿಗುವ ಈ ವಸ್ತುವಿನಿಂದ ಪಡೆಯಿರಿ ಇನ್‌ಸ್ಟಂಟ್ ಗ್ಲೋಪ್ರವಾಸದ ಸಮಯದಲ್ಲಿ ಕಾಂತಿ ಕಳೆದುಕೊಳ್ಳುವ ಕೂದಲಿಗೆ ‘ಆಯಿಲಿಂಗ್’ ಸಂಜೀವಿನಿ: ಕೂದಲು ಉದುರುವಿಕೆಗೆ ಇಲ್ಲಿದೆ ಬ್ರೇಕ್BREAKING: ಗೊಬ್ಬರ ತುಂಬಿದ್ದ ಲಾರಿ-ಕಾರಿನ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ನಾಲ್ವರು ದುರ್ಮರಣBIG NEWS: ಯಾವುದೇ ಹುದ್ದೆ ಹಾಗೂ ಅಧಿಕಾರಕ್ಕಾಗಿ ವಿಸಿಕೆ ಬೇಡಿಕೆ ಇಟ್ಟಿಲ್ಲ: ಪಕ್ಷದ ಘನತೆಗೆ ಕುಂದು ತರಲು ಅಪಪ್ರಾಚಾರ ನಡೆಸಲಾಗುತ್ತಿದೆ: ವಿಸಿಕೆ ನಾಯಕ ರವಿಕುಮಾರ್ ಸ್ಪಷ್ಟನೆ