ಬೆಂಗಳೂರು: ರಾಜ್ಯದಲ್ಲಿ ದುಬಾರಿ ದುನಿಯಾ ಆರಂಭವಾಗಿದೆ. ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಶಾಲಾ ಶುಲ್ಕ ಹೆಚ್ಚಳವಾಗಿದೆ. ಇದರ ಜೊತೆಗೆ ಈಗ ನೋಟ್ ಬುಕ್, ವರ್ಕ್ ಬುಕ್ ಗಳ ಬೆಲೆಯೂ ಏರಿಕೆಯಾಗಿದ್ದು, ಪೋಷಕರಿಗೆ ಮತ್ತೊಂದು ಶಾಕ್ ಎದಿರಾಗಿದೆ.
ಶಾಲಾ ಶುಲ್ಕ ಹೆಚ್ಚಳ ಬೆನ್ನಲ್ಲೇ ನೋಟ್ ಬುಕ್, ವರ್ಕ್ ಬುಕ್ ಗಳ ಬೆಲೆಯೂ ಏರಿಕೆಯಾಗಿದ್ದು, ರಾಜ್ಯದಲ್ಲಿ ಶಾಲಾ-ಕಾಲೇಜುಗಳ ಆರಂಭಕ್ಕೆ ಮುನ್ನವೇ ಪೋಷಕರು ಸಾಲು ಸಾಲು ಆರ್ಥಿಕ ಸಂಕಷ್ಟಗಳನ್ನು ಎದುರಿಸುವಂತಾಗಿದೆ.
ಶಾಲಾ ಶುಲ್ಕ ಮತ್ತು ಶಾಲಾ ವಾಹನಗಳ ಬಾಡಿಗೆ ದರ ಈಗಾಗಲೇ ಹೆಚ್ಚಳವಾಗಿದ್ದು, ಇದೀಗ ನೋಟ್‌ಬುಕ್, ವರ್ಕ್‌ಬುಕ್ ಹಾಗೂ ಪೇಪರ್‌ಗಳ ಬೆಲೆಯು ಶೇಕಡ 20ರಿಂದ 25ರಷ್ಟು ಏರಿಕೆಯಾಗಿ ಪೋಷಕರಿಗೆ ಮತ್ತೊಂದು ಶಾಕ್, ಶಾಲಾ ಶುಲ್ಕ ಹೆಚ್ಚಳ ಬೆನ್ನಲ್ಲೇ ನೋಟ್ ಬುಕ್, ವರ್ಕ್ ಬುಕ್ ಗಳ ಬೆಲೆಯೂ ಏರಿಕೆ ಮಾಡಲಾಗಿದೆ.
ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ಇಂಧನ ದರ ಹೆಚ್ಚಳವೇ ಈ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ. ಗಲ್ಫ್ ರಾಷ್ಟ್ರಗಳ ಯುದ್ಧದಿಂದ ಕಚ್ಚಾ ವಸ್ತುಗಳ ಬೆಲೆ ಹೆಚ್ಚಾಗಿದೆ. ಪೇಪರ್ ತಯಾರಿಕೆಗೆ ಬೇಕಾದ ಕೆಮಿಕಲ್ಸ್ ಮತ್ತು ಕಲರ್ಸ್‌ಗಳು ಲಭ್ಯವಾಗುತ್ತಿಲ್ಲ. ಅಲ್ಲದೆ, ಇಂಧನ ದರ ಏರಿಕೆಯಿಂದಾಗಿ ನೋಟ್‌ಬುಕ್ಸ್, ವರ್ಕ್‌ಬುಕ್ ಹಾಗೂ ಪೇಪರ್‌ಗಳ ಮುದ್ರಣ ವೆಚ್ಚವೂ ಹೆಚ್ಚಾಗಿದೆ ಎಂದು ಉದ್ಯಮಿಗಳು ತಿಳಿಸಿದ್ದಾರೆ.