LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೇಸಿಗೆಯ ಬಿಸಿಲಿಗೆ ಅಮೃತ ಈ ಸತ್ತು ಕೂಲರ್: ತೂಕ ಇಳಿಸುವುದರ ಜೊತೆಗೆ ದೇಹಕ್ಕೆ ನೀಡುತ್ತೆ ಎನರ್ಜಿ

ಉತ್ತರ ಭಾರತದಲ್ಲಿ ಬೇಸಿಗೆಯ ದಿನಗಳಲ್ಲಿ ಅತಿ ಹೆಚ್ಚು ಜನಪ್ರಿಯವಾಗಿರುವ ಸಾಂಪ್ರದಾಯಿಕ ಪಾನೀಯಗಳಲ್ಲಿ ಸತ್ತು ಕೂಲರ್ ಕೂಡ ಒಂದು. ಪಂಜಾಬ್, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದ ಗ್ರಾಮೀಣ ಭಾಗಗಳಲ್ಲಿ ಮನೆಮಾತಾಗಿದ್ದ ಈ ದೇಸಿ ಎನರ್ಜಿ ಡ್ರಿಂಕ್, ಈಗ ತನ್ನಲ್ಲಿರುವ ಅದ್ಭುತ ಆರೋಗ್ಯ ಗುಣಗಳಿಂದಾಗಿ ನಗರ ಪ್ರದೇಶದ ಜನರನ್ನೂ ಆಕರ್ಷಿಸುತ್ತಿದೆ. ಇದು ಕೇವಲ ಬಾಯಾರಿಕೆ ನೀಗಿಸುವುದು ಮಾತ್ರವಲ್ಲದೆ, ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುವ ಮತ್ತು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಅತ್ಯುತ್ತಮ ಡಿಟಾಕ್ಸ್ ಪಾನೀಯವಾಗಿ ಕೆಲಸ ಮಾಡುತ್ತದೆ.

ಬೇಕಾಗುವ ಸಾಮಗ್ರಿಗಳು:

  • ಸತ್ತು ಪುಡಿ (ಹುರಿದ ಕಡ್ಲೆ ಹಿಟ್ಟು) – 50 ಗ್ರಾಂ
  • ಸಕ್ಕರೆ – 15 ಗ್ರಾಂ
  • ನಿಂಬೆ ರಸ – 10 ಮಿ.ಲೀ
  • ನೀರು – 100 ಮಿ.ಲೀ
  • ಐಸ್ ಕ್ಯೂಬ್ಸ್ – 5 ರಿಂದ 6
  • ಹುರಿದ ಜೀರಿಗೆ ಪುಡಿ – ಅರ್ಧ ಚಮಚ

ತಯಾರಿಸುವ ವಿಧಾನ: ಮೊದಲಿಗೆ ಒಂದು ಪಾತ್ರೆಗೆ ನೀರನ್ನು ಹಾಕಿಕೊಂಡು, ಅದಕ್ಕೆ ಸತ್ತು ಪುಡಿ, ಸಕ್ಕರೆ ಮತ್ತು ಫ್ರೆಶ್ ನಿಂಬೆ ರಸವನ್ನು ಸೇರಿಸಿ. ಹಿಟ್ಟು ಗಂಟುಕಟ್ಟದಂತೆ ಚಮಚದಿಂದ ಚೆನ್ನಾಗಿ ಕೈಯಾಡಿಸಿ ಮಿಶ್ರಣ ಮಾಡಿಕೊಳ್ಳಿ. ನಂತರ ಈ ಪಾನೀಯವನ್ನು ಒಂದು ಎತ್ತರದ ಗ್ಲಾಸ್‌ಗೆ ಸುರಿದು, ಅದಕ್ಕೆ ಐಸ್ ಕ್ಯೂಬ್ಸ್‌ಗಳನ್ನು ಹಾಕಿ. ಕೊನೆಯದಾಗಿ ಮೇಲಿನಿಂದ ಹುರಿದ ಜೀರಿಗೆ ಪುಡಿಯನ್ನು ಉದುರಿಸಿ ಅಲಂಕರಿಸಿದರೆ, ಬೇಸಿಗೆಯ ತಾಪವನ್ನು ತಣಿಸುವ ರುಚಿಕರ ಹಾಗೂ ಆರೋಗ್ಯಕರ ಸತ್ತು ಕೂಲರ್ ಸವಿಯಲು ಸಿದ್ಧವಾಗುತ್ತದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ