LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನವರಾತ್ರಿ ಉಪವಾಸಕ್ಕೆ ಸ್ಪೆಷಲ್ ಸ್ನ್ಯಾಕ್ಸ್: ಮನೆಯಲ್ಲೇ ಸುಲಭವಾಗಿ ಮಾಡಿ ನಾಲಿಗೆಗೆ ರುಚಿ ನೀಡುವ ವ್ರತ್ ಫ್ರೈಸ್

ಉಪವಾಸದ ಸಮಯದಲ್ಲಿ ಪ್ರತಿದಿನ ಸಾಬುದಾನ ವಡೆ ಅಥವಾ ಆಲೂ ಟಿಕ್ಕಿ ತಿಂದು ಬೇಸರವಾಗಿದ್ದರೆ ಈ ಹೊಸ ಶೈಲಿಯ ತಿಂಡಿಯನ್ನು ಒಮ್ಮೆ ಪ್ರಯತ್ನಿಸಬಹುದು. ನವರಾತ್ರಿ ಹಬ್ಬದ ವಿಶೇಷ ದಿನಗಳಲ್ಲಿ ಸುಲಭವಾಗಿ ತಯಾರಿಸಲು ಡಿಜಿಟಲ್ ಕ್ರಿಯೇಟರ್ ನಿಶಾ ಅವರು ಹತ್ತು ನಿಮಿಷದಲ್ಲಿ ಮಾಡಬಹುದಾದ ಅತ್ಯಂತ ರುಚಿಕರವಾದ ವ್ರತ್ ಫ್ರೈಸ್ ರೆಸಿಪಿಯನ್ನು ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಇದಕ್ಕೆ ಹಸಿರು ಚಟ್ನಿ ಅಥವಾ ಶೇಂಗಾ ಚಟ್ನಿ ಜೊತೆಯಾದರೆ ಸವಿ ಮತ್ತಷ್ಟು ಹೆಚ್ಚಾಗುತ್ತದೆ.

ಈ ವಿಶೇಷ ಫ್ರೈಸ್ ಮಾಡಲು ಅತಿಯಾದ ಸಾಮಗ್ರಿಗಳ ಅಗತ್ಯವಿರುವುದಿಲ್ಲ. ಮನೆಯಲ್ಲಿ ಸುಲಭವಾಗಿ ಸಿಗುವ ಆಲೂಗಡ್ಡೆ, ಸೈಂಧವ ಉಪ್ಪು, ಕಾಳುಮೆಣಸಿನ ಪುಡಿ ಮತ್ತು ಸಿಂಗಾರ ಹಿಟ್ಟು ಇದ್ದರೆ ಸಾಕು. ಇದನ್ನು ತಯಾರಿಸುವುದು ಹೇಗೆ ಎಂಬ ಸರಳ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು: ಎರಡು ಮಧ್ಯಮ ಗಾತ್ರದ ಆಲೂಗಡ್ಡೆ ರುಚಿಗೆ ತಕ್ಕಷ್ಟು ಸೈಂಧವ ಉಪ್ಪು ಒಂದು ಚಮಚ ಕಾಳುಮೆಣಸಿನ ಪುಡಿ ಕಾಲು ಕಪ್ ಸಿಂಗಾರ ಹಿಟ್ಟು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಕರೆಯಲು ಎಣ್ಣೆ

ಮಾಡುವ ವಿಧಾನ: ಮೊದಲಿಗೆ ಆಲೂಗಡ್ಡೆಯ ಸಿಪ್ಪೆ ಸುಲಿದು ಉದ್ದನೆಯ ತೆಳಪದರದ ಚಕ್ಕೆಗಳಾಗಿ ಕತ್ತರಿಸಿ ಚೆನ್ನಾಗಿ ತೊಳೆಯಬೇಕು. ನಂತರ ಅವುಗಳನ್ನು ಸ್ವಲ್ಪ ಹೊತ್ತು ಕುದಿಸಿ ನೀರನ್ನು ಸಂಪೂರ್ಣವಾಗಿ ಬಸಿದುಕೊಂಡು ಸ್ವಲ್ಪ ತಣ್ಣಗಾಗಲು ಬಿಡಬೇಕು. ಬಳಿಕ ಒಂದು ಪಾತ್ರೆಗೆ ಹಾಕಿ ಅದಕ್ಕೆ ಸಿಂಗಾರ ಹಿಟ್ಟು, ಕಾಳುಮೆಣಸಿನ ಪುಡಿ ಹಾಗೂ ಸೈಂಧವ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಆಲೂಗಡ್ಡೆಗೆ ಹಿಟ್ಟು ಚೆನ್ನಾಗಿ ಅಂಟಿಕೊಳ್ಳುವಂತೆ ನೋಡಿಕೊಳ್ಳಿ. ಈಗ ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಮಸಾಲೆ ಹಚ್ಚಿದ ಆಲೂಗಡ್ಡೆ ತುಂಡುಗಳನ್ನು ಹಾಕಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕರಿದುಕೊಳ್ಳಬೇಕು. ಬಳಿಕ ಹೆಚ್ಚುವರಿ ಎಣ್ಣೆ ಸೋರಲು ಟಿಶ್ಯೂ ಪೇಪರ್ ಮೇಲೆ ತೆಗೆಯಿರಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿದರೆ ರುಚಿಕರವಾದ ಕ್ರಿಸ್ಪಿ ವ್ರತ್ ಫ್ರೈಸ್ ಸವಿಯಲು ಸಿದ್ಧವಾಗುತ್ತದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
‘ಪ್ರೇಮದ ಊರಲಿ’ ಚಿತ್ರದ ಟಿವಿ ಹಾಗೂ OTT ಪ್ರಸಾರ ಹಕ್ಕುಗಳ ಕುರಿತು ಚಿತ್ರ ತಂಡದಿಂದ ಅಧಿಕೃತ ಸ್ಪಷ್ಟನೆಮುಂದಿನ ವಾರ ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರು, ಕೇಂದ್ರದ ಅಧಿಕಾರಿಗಳ ಸಭೆ: ಸಿಎಂ ಡಿ ಕೆ ಶಿವಕುಮಾರ್BREAKING: ಕೊಡಗಿನ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ: ತೀರ್ಥರೂಪಿಣಿಯಾಗಿ 'ಕಾವೇರಿ ಮಾತೆ' ದರ್ಶನ | Talakaveriಮಾಯಾ ಜಿಂಕೆಯಂತೆ ಬಣ್ಣ ಬದಲಿಸುತ್ತಾ ಮಾರುಕಟ್ಟೆಗೆ ಲಗ್ಗೆ ಇಟ್ಟ ರಾಯಲ್ ಎನ್ ಫೀಲ್ಡ್: ಕ್ಲಾಸಿಕ್ 650 ಹೈಪರ್‌ಶಿಫ್ಟ್ ಎಡಿಷನ್ ಬಿಡುಗಡೆನೀವು ಅನಾರೋಗ್ಯದಿಂದ ಬಳಲುತ್ತೀದ್ದೀರಾ? ಈ ಮಂತ್ರ ಪಠಿಸಿ ನೋಡಿ, ಆರೋಗ್ಯ ವೃದ್ಧಿ ಗ್ಯಾರಂಟಿBREAKING: ವಿಧಾನ ಪರಿಷತ್ ಚುನಾವಣೆ ಹಿನ್ನಲೆ: ಅ.23ರಂದು ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರುಸಿದ್ದರಾಮಯ್ಯ ಅವರೇ ನಿಮ್ಮ ರಕ್ತ ಕುದಿಯುತ್ತಿಲ್ವಾ?: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನೆಅರ್ಥಪೂರ್ಣವಾಗಿ ವಾಲ್ಮೀಕಿ ಜಯಂತಿ ಆಚರಿಸಲು ನಿರ್ಧಾರ: ಸಚಿವ ಟಿ.ರಘುಮೂರ್ತಿರಾಜ್ಯ ಸರ್ಕಾರದಿಂದ 8 IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ | IAS Officer Transferಸಾಗರದಲ್ಲಿ ಶೇ.60 ಕನ್ನಡ ನಾಮಫಲಕ ಕಡ್ಡಾಯಕ್ಕೆ ಜಮೀಲ್ ಸಾಗರ್ ಆಗ್ರಹ: ಎಸಿಗೆ ಮನವಿ