LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಡುಗೆ ಮನೆಯಲ್ಲಿ ಹೆಚ್ಚು ಸಮಯ ಕಳೆಯಲು ಇಷ್ಟವಿಲ್ಲವೇ? ಕೇವಲ ಹತ್ತೇ ನಿಮಿಷದಲ್ಲಿ ಮಾಡಿ ಚೀಸಿ ವೆಜಿಟೇಬಲ್ ಪಾಸ್ತಾ

ದಿನಾ ಒಂದೇ ರೀತಿಯ ಆಹಾರ ತಿಂದು ಬೇಸರವಾಗಿದ್ದರೆ ಅಥವಾ ಅಡುಗೆ ಮನೆಯಲ್ಲಿ ಹೆಚ್ಚು ಸಮಯ ಕಳೆಯಲು ಇಷ್ಟವಿಲ್ಲದಿದ್ದರೆ ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಪಾಸ್ತಾ ಅತ್ಯುತ್ತಮ ಆಯ್ಕೆಯಾಗಿದೆ. ಅದರಲ್ಲೂ ಮಕ್ಕಳಿಗೆ ಚೀಸ್ ಎಂದರೆ ಎಲ್ಲಿಲ್ಲದ ಪ್ರೀತಿ. ವಿವಿಧ ತರಕಾರಿಗಳು, ಹಾಲು ಮತ್ತು ಚೀಸ್ ಬಳಸಿ ಮಾಡುವ ಈ ಚೀಸಿ ವೆಜಿಟೇಬಲ್ ಪಾಸ್ತಾ ತಿನ್ನಲು ಎಷ್ಟು ರುಚಿಯಾಗಿರುತ್ತದೆಯೋ, ಮಾಡುವುದು ಕೂಡ ಅಷ್ಟೇ ಸುಲಭ. ಬಾಯಲ್ಲಿ ಇಟ್ಟರೆ ಕರಗುವಂತಹ ಕ್ರೀಮಿ ಪಾಸ್ತಾ ರೆಸಿಪಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು ನಿಮಗೆ ಇಷ್ಟವಾದ ಯಾವುದೇ ಆಕಾರದ ಎರಡು ಕಪ್ ಪಾಸ್ತಾ, ಎರಡು ಚಮಚ ಆಲಿವ್ ಆಯಿಲ್, ಎರಡು ಕಪ್ ಕತ್ತರಿಸಿದ ತರಕಾರಿಗಳು (ಬ್ರೊಕೋಲಿ, ಸ್ವೀಟ್ ಕಾರ್ನ್, ಕ್ಯಾಪ್ಸಿಕಂ, ಅಣಬೆ), ಎರಡು ಚಮಚ ಬೆಣ್ಣೆ, ಎರಡು ಚಮಚ ಮೈದಾ ಹಿಟ್ಟು, ಎರಡು ಕಪ್ ಹಾಲು, ಎರಡು ಕಪ್ ತುರಿದ ಚೀಸ್ (ಮೊಜರೆಲ್ಲಾ ಅಥವಾ ಚೆಡ್ಡಾರ್), ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಳುಮೆಣಸಿನ ಪುಡಿ.

ಪಾಸ್ತಾ ಬೇಯಿಸುವ ವಿಧಾನ ಮೊದಲಿಗೆ ಒಂದು ದೊಡ್ಡ ಪಾತ್ರೆಯಲ್ಲಿ ನೀರನ್ನು ಹಾಕಿ ಚೆನ್ನಾಗಿ ಕುದಿಸಿ. ನೀರು ಕುದಿಯುವಾಗ ಅದಕ್ಕೆ ಸ್ವಲ್ಪ ಉಪ್ಪು ಮತ್ತು ಪಾಸ್ತಾ ಹಾಕಿ ಬೇಯಿಸಿಕೊಳ್ಳಿ. ಪಾಸ್ತಾ ಅತಿಯಾಗಿ ಬೇಯದಂತೆ ಹದವಾಗಿ ಬೆಂದ ನಂತರ, ನೀರನ್ನು ಸಂಪೂರ್ಣವಾಗಿ ಸೋಸಿ ಪಾಸ್ತಾವನ್ನು ಪಕ್ಕಕ್ಕೆ ಎತ್ತಿಟ್ಟುಕೊಳ್ಳಿ.

ತರಕಾರಿಗಳನ್ನು ಹುರಿಯುವುದು ಈಗ ಒಂದು ಬಾಣಲಿಗೆಗೆ ಆಲಿವ್ ಆಯಿಲ್ ಹಾಕಿ ಬಿಸಿ ಮಾಡಿ. ಅದಕ್ಕೆ ನೀವು ಕತ್ತರಿಸಿಟ್ಟುಕೊಂಡ ತರಕಾರಿಗಳನ್ನು ಸೇರಿಸಿ. ಜೊತೆಗೆ ಸ್ವಲ್ಪ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಹಾಕಿ ಲಘುವಾಗಿ ಹುರಿಯಿರಿ. ತರಕಾರಿಗಳು ಸ್ವಲ್ಪ ಮೆತ್ತಗಾದ ತಕ್ಷಣ ಅವುಗಳನ್ನು ಒಂದು ತಟ್ಟೆಗೆ ತೆಗೆದಿಟ್ಟುಕೊಳ್ಳಿ.

ಕ್ರೀಮಿ ಚೀಸ್ ಸಾಸ್ ತಯಾರಿ ಅದೇ ಬಾಣಲಿಗೆಯಲ್ಲಿ ಬೆಣ್ಣೆಯನ್ನು ಹಾಕಿ ಕರಗಿಸಿ. ನಂತರ ಅದಕ್ಕೆ ಮೈದಾ ಹಿಟ್ಟನ್ನು ಸೇರಿಸಿ ಗಂಟಿಲ್ಲದಂತೆ ಒಂದು ನಿಮಿಷ ಚೆನ್ನಾಗಿ ಕೈಯಾಡಿಸಿ. ಈಗ ಉರಿಯನ್ನು ಕಡಿಮೆ ಮಾಡಿ, ಹಾಲನ್ನು ಸ್ವಲ್ಪ ಸ್ವಲ್ಪವಾಗಿ ಸುರಿಯುತ್ತಾ ಸತತವಾಗಿ ಕೈಯಾಡಿಸುತ್ತಿರಿ. ಮಿಶ್ರಣವು ಗಟ್ಟಿಯಾಗುವವರೆಗೆ ಅಂದರೆ ಸುಮಾರು ಐದರಿಂದ ಏಳು ನಿಮಿಷ ಬೇಯಿಸಿ. ನಂತರ ಇದಕ್ಕೆ ತುರಿದ ಚೀಸ್ ಸೇರಿಸಿ, ಅದು ಸಂಪೂರ್ಣವಾಗಿ ಕರಗುವವರೆಗೆ ಕೈಯಾಡಿಸಿ.

ಮಿಶ್ರಣ ಮಾಡಿ ಸವಿಯಿರಿ ಈಗ ಸಿದ್ಧವಾಗಿರುವ ಕ್ರೀಮಿ ಸಾಸ್‌ಗೆ ಮುಂಚಿತವಾಗಿ ಬೇಯಿಸಿಟ್ಟ ಪಾಸ್ತಾವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಹುರಿದಿಟ್ಟುಕೊಂಡ ತರಕಾರಿಗಳನ್ನು ಸೇರಿಸಿ ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿ. ಕೊನೆಯದಾಗಿ ರುಚಿ ನೋಡಿ ಅಗತ್ಯವಿದ್ದರೆ ಸ್ವಲ್ಪ ಉಪ್ಪು ಮತ್ತು ಕಾಳುಮೆಣಸಿನ ಪುಡಿ ಸೇರಿಸಿ. ಮೇಲೆ ಇನ್ನಷ್ಟು ತುರಿದ ಚೀಸ್ ಉದುರಿಸಿದರೆ ಬಿಸಿಬಿಸಿಯಾದ ಚೀಸಿ ವೆಜಿಟೇಬಲ್ ಪಾಸ್ತಾ ಸವಿಯಲು ಸಿದ್ಧ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ