LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮೇಕೆದಾಟು ಯೋಜನೆಗೆ ವಿಜಯ್ ಎಂಟ್ರಿ: ತಮಿಳುನಾಡಿನ ಹೊಸ ಹೆಜ್ಜೆಗೆ ಸಿಎಂ ಡಿಕೆಶಿ ಖಡಕ್ ತಿರುಗೇಟು

ಬೆಂಗಳೂರು: ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕನ್ನಡಿಗರ ಕನಸಿನ ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಗೆ (Mekedatu Project) ಮರುಜೀವ ನೀಡಲು ಸಿಎಂ ಡಿ.ಕೆ. ಶಿವಕುಮಾರ್‌ ಭರ್ಜರಿ ಹೆಜ್ಜೆಯಿಟ್ಟಿದ್ದಾರೆ ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (C. Joseph Vijay) ಅವರೊಂದಿಗೆ ಈ ಕುರಿತು ಯಾವುದೇ ಕಟ್ಟುಪಾಡುಗಳಿಲ್ಲದೆ, ಯಾವುದೇ ಸಮಯದಲ್ಲಾದರೂ ನೇರ ಮಾತುಕತೆ ನಡೆಸಲು ತಾನು ಸಿದ್ಧ ಎಂದು ಡಿ.ಕೆ. ಶಿವಕುಮಾರ್ ಗುರುವಾರ ಬೆಂಗಳೂರಿನಲ್ಲಿ ಬಿಗ್ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ.ಇಬ್ಬರು ಸಿಎಂಗಳ ನಡುವಿನ ಈ ಮಾತುಕತೆಯ ಆಫರ್ ಈಗ ದಕ್ಷಿಣ ಭಾರತದ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಕಾವೇರಿ ನಮ್ಮಿಬ್ಬರ ಹಂಚಿಕೆಯ ನದಿ. ಇದನ್ನು ಕೇವಲ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದು ತಮಿಳುನಾಡು ನಾಯಕರಿಗೆ ಕಿವಿಮಾತು ಹೇಳಿದ್ದಾರೆ.”ಮೇಕೆದಾಟು ಯೋಜನೆ ಕುರಿತು ತಮಿಳುನಾಡು ಸಿಎಂ ಜೊತೆ ಮಾತುಕತೆ ನಡೆಸಲು ನಾನು ಸದಾ ಸಿದ್ಧ. ತಮಿಳುನಾಡು ಇರಲಿ, ಕರ್ನಾಟಕ ಇರಲಿ, ನಾವೆಲ್ಲ ಒಂದೇ ದೇಶ, ಒಂದೇ ಜನ. ನಾವೆಲ್ಲರೂ ಒಂದೇ ನದಿಯ ನೀರನ್ನು ಅವಲಂಬಿಸಿದ್ದೇವೆ. ಕುಡಿಯಲು, ಕೃಷಿಗೆ, ಕೈಗಾರಿಕೆಗೆ ಎಲ್ಲದಕ್ಕೂ ನೀರು ಬೇಕು. ರಾಜಕೀಯ ಬದಿಗಿಟ್ಟು ಜನರ ಹಿತದೃಷ್ಟಿಯಿಂದ ನಾವು ಮುನ್ನಡೆಯಬೇಕು,” ಎಂದು ಶಿವಕುಮಾರ್ ಮಾರ್ಮಿಕವಾಗಿ ನುಡಿದಿದ್ದಾರೆ.

ಅಲ್ಲದೆ, ತಮಿಳುನಾಡಿನ ಆಡಳಿತ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಕೂಡ ಭಾಗಿಯಾಗಿರುವುದರಿಂದ, ಅಲ್ಲಿನ ಸರ್ಕಾರದೊಂದಿಗೆ ತಾಳ್ಮೆಯಿಂದಲೇ ಮಾತುಕತೆ ಮುಂದುವರಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

ಮೇಕೆದಾಟು ಜಲಾಶಯದಿಂದ ತಮಿಳುನಾಡಿಗೇನು ಲಾಭ? (The Formula)

ತಮಿಳುನಾಡು ಕೇವಲ ವಿರೋಧ ಮಾಡುತ್ತಿದೆ, ಆದರೆ ಈ ಪ್ರಾಜೆಕ್ಟ್‌ನಿಂದ ತಮಿಳುನಾಡಿಗೇ ಹೆಚ್ಚು ಲಾಭ ಎಂದು ಡಿ.ಕೆ. ಶಿವಕುಮಾರ್ ಡಿಟೇಲ್ಸ್ ಬಿಚ್ಚಿಟ್ಟಿದ್ದಾರೆ:

ಸಂಕಷ್ಟದ ಸಮಯದಲ್ಲಿ ನೆರವು: ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ವಾರ್ಷಿಕ 177 ಟಿಎಂಸಿ (TMC) ನೀರನ್ನು ಬಿಡಲು ಕರ್ನಾಟಕ ಬದ್ಧವಾಗಿದೆ. ಮೇಕೆದಾಟು ಜಲಾಶಯ ನಿರ್ಮಾಣವಾದರೆ, ಮಳೆ ಇಲ್ಲದ ಸಂಕಷ್ಟದ ವರ್ಷಗಳಲ್ಲೂ ತಮಿಳುನಾಡಿನ ಪಾಲಿನ ನೀರನ್ನು ಸುಲಭವಾಗಿ ರೆಗ್ಯುಲೇಟ್ ಮಾಡಿ ಹರಿಸಬಹುದು.

ಕರ್ನಾಟಕದ ಜಿಲ್ಲೆಗಳಿಗೆ ನೀರು: ಈ ಬ್ಯಾಲೆನ್ಸಿಂಗ್ ರಿಸರ್ವಾಯರ್‌ನಿಂದಾಗಿ ಮಂಡ್ಯ, ಹಾಸನ, ಚಾಮರಾಜನಗರ ಮತ್ತು ತುಮಕೂರು ಜಿಲ್ಲೆಗಳಿಗೆ ಅಗತ್ಯವಿದ್ದಾಗ ನೀರು ಬಿಡಲು ಹೆಲ್ಪ್ ಆಗಲಿದೆ.

ಕರೆಂಟ್ ಉತ್ಪಾದನೆ: ಈ ಯೋಜನೆಯಿಂದ ಸುಮಾರು 400 ಮೆಗಾವ್ಯಾಟ್ (MW) ವಿದ್ಯುತ್ ಉತ್ಪಾದನೆ ಮಾಡಬಹುದು. ಇದಕ್ಕೆ ತಮಿಳುನಾಡಿನಿಂದ ಒಂದು ರೂಪಾಯಿ ಹಣವೂ ಬೇಕಾಗಿಲ್ಲ, ಸಂಪೂರ್ಣ ವೆಚ್ಚವನ್ನು ಕರ್ನಾಟಕವೇ ಭರಿಸಲಿದೆ.

ತಮಿಳುನಾಡಿನ ಕೆಲವು ರಾಜಕೀಯ ಪಕ್ಷಗಳು ತಮ್ಮ ವೋಟ್ ಬ್ಯಾಂಕ್ ಮತ್ತು ಚುನಾವಣಾ ಲಾಭಕ್ಕಾಗಿ ಈ ವಿಚಾರವನ್ನು ಕೆದಕುತ್ತಿವೆ ಎಂದು ಡಿಕ್ಸಿ ಗರಂ ಆಗಿದ್ದಾರೆ.
“ಮೇಕೆದಾಟು ಕೇವಲ ನನ್ನ ಹೃದಯಕ್ಕೆ ಹತ್ತಿರವಾದ ಯೋಜನೆಯಲ್ಲ, ಇಡೀ ದಕ್ಷಿಣ ಭಾರತಕ್ಕೆ ಮುಖ್ಯವಾದದ್ದು. ಇದು ಕೇವಲ ಕುಡಿಯುವ ನೀರಿನ ಯೋಜನೆ. ಸುಪ್ರೀಂ ಕೋರ್ಟ್ ಅನುಮತಿ ನೀಡಿರುವುದನ್ನು ಬಿಟ್ಟು ಒಂದು ಬಕೆಟ್ ನೀರನ್ನೂ ಸಹ ನಾವು ಕೃಷಿಗೆ ಅಥವಾ ನೀರಾವರಿಗೆ ಬಳಸಿಕೊಳ್ಳಲು ಸಾಧ್ಯವಿಲ್ಲ. ಬೆಂಗಳೂರಿನ ಜನಸಂಖ್ಯೆ ರಾಕೆಟ್ ವೇಗದಲ್ಲಿ ಬೆಳೆಯುತ್ತಿದೆ, ನಮಗೆ ಕುಡಿಯಲು ಕಾವೇರಿ ಬಿಟ್ಟರೆ ಕೃಷ್ಣಾ ನದಿಯಿಂದ ನೀರು ತರಲು ಆಗಲ್ಲ,” ಎಂದು ಖಡಕ್ ಆಗಿ ವಾದ ಮಂಡಿಸಿದ್ದಾರೆ.

ಈಗಾಗಲೇ ಸುಪ್ರೀಂ ಕೋರ್ಟ್ ತಮಿಳುನಾಡಿನ ಮರುಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಿ, ತಾಂತ್ರಿಕ ಮೌಲ್ಯಮಾಪನಕ್ಕಾಗಿ ಕೇಂದ್ರ ಜಲ ಆಯೋಗಕ್ಕೆ (CWC) ವಹಿಸಿದೆ. ಹೀಗಾಗಿ ಕರ್ನಾಟಕದ ಹಿತಾಸಕ್ತಿಗಾಗಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನ ಎಲ್ಲಾ ಸಂಸದರು ಒಟ್ಟಾಗಿ ಹೋರಾಟ ಮುಂದುವರಿಸಲಿದ್ದಾರೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ