LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜನಸಾಮಾನ್ಯರಿಗೆ ರಿಲೀಫ್: ವಾಸಸ್ಥಳ ಪ್ರಮಾಣ ಪತ್ರ ಇನ್ನು ಉಚಿತವಾಗಿ ಗ್ರಾಮ ಪಂಚಾಯತಿಯಲ್ಲೇ ಲಭ್ಯ

ಬೆಂಗಳೂರು: ಹಳ್ಳಿ ಜನರಿಗೆ ರಾಜ್ಯ ಸರ್ಕಾರವು ವೀಕೆಂಡ್ ಮುಗಿಯುತ್ತಲೇ ಭರ್ಜರಿ ಬಿಗ್ ರಿಲೀಫ್ ಒಂದನ್ನು ನೀಡಿದೆ. ಇನ್ಮುಂದೆ ಅತ್ಯಗತ್ಯವಾಗಿ ಬೇಕಾಗುವ ವಾಸಸ್ಥಳ ದೃಢೀಕರಣ ಪತ್ರ (Residence Certificate) ಪಡೆಯಲು ತಾಲೂಕು ಕಚೇರಿ ಅಥವಾ ಹೋಬಳಿ ಕೇಂದ್ರಗಳಿಗೆ ಅಲೆಯುವ ತಾಪತ್ರಯ ತಪ್ಪಿದೆ. ಗ್ರಾಮೀಣ ಜನರ ಅನುಕೂಲಕ್ಕಾಗಿ ತಮ್ಮ ತಮ್ಮ ಗ್ರಾಮ ಪಂಚಾಯತಿಗಳಲ್ಲೇ, ಅದೂ ಸಂಪೂರ್ಣ ಉಚಿತವಾಗಿ ಈ ಪ್ರಮಾಣ ಪತ್ರವನ್ನು ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಿರ್ದೇಶನದ ಮೇರೆಗೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಈ ನೂತನ ಆದೇಶವನ್ನು ಜಾರಿಗೊಳಿಸಿದ್ದು, ಹಳ್ಳಿ ಜನರಿಗೆ ದೊಡ್ಡ ತಲೆನೋವೊಂದು ನಿವಾರಣೆಯಾದಂತಾಗಿದೆ.

ಹೋಬಳಿ ಕೇಂದ್ರಗಳಿಗೆ ಅಲೆಯೋ ಬವಣೆ ಮುಗೀತು

ಇಷ್ಟು ದಿನ ಹಳ್ಳಿ ಜನರಿಗೆ ಶಾಲಾ-ಕಾಲೇಜು ಅಡ್ಮಿಷನ್ ಸ್ಕಾಲರ್‌ಶಿಪ್ ಹೊಸ ಕೆಲಸ ಅಥವಾ ಸರ್ಕಾರದ ಯಾವುದೇ ಯೋಜನೆಗಳಿಗೆ ಅರ್ಜಿ ಸಲ್ಲಿಸಬೇಕೆಂದರೆ ಈ ವಾಸಸ್ಥಳ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕಿತ್ತು.

ಇದಕ್ಕಾಗಿ ಜನ ಅಟಲ್ ಜೀ ಜನಸ್ನೇಹಿ ಕೇಂದ್ರಗಳನ್ನು ಹುಡುಕಿಕೊಂಡು ಹೋಬಳಿ ಕೇಂದ್ರಗಳಿಗೆ ಹೋಗಬೇಕಿತ್ತು.

ಬಸ್ ಚಾರ್ಜ್ ಹಾಕಿಕೊಂಡು ಹೋದರೂ ಸರ್ವರ್ ಬ್ಯುಸಿ, ನಾಳೆ ಬನ್ನಿ ಎನ್ನುವ ಕಿರಿಕಿರಿ ಇರುತ್ತಿತ್ತು.

ತುರ್ತು ಸಂದರ್ಭಗಳಲ್ಲಿ ಸರ್ಟಿಫಿಕೇಟ್ ಸಿಗದೆ ಜನ ಹೈರಾಣಾಗುತ್ತಿದ್ದರು. ಇದನ್ನೆಲ್ಲಾ ಗಮನಿಸಿದ ಸರ್ಕಾರ ಈಗ ಡೈರೆಕ್ಟ್ ಆಗಿ ಗ್ರಾಮ ಪಂಚಾಯತಿಗೇ ಈ ಪವರ್ ಕೊಟ್ಟಿದೆ

ಪಿಡಿಓಗಳಿಗೆ ಸಿಕ್ತು ಬಂಪರ್ ಪವರ್

ಸದ್ಯ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಈಗಾಗಲೇ ಸರ್ಕಾರದ 85ಕ್ಕೂ ಹೆಚ್ಚು ಆನ್‌ಲೈನ್ ಸೇವೆಗಳನ್ನು ನೀಡಲಾಗುತ್ತಿದೆ.

ಈಗ ಇದೇ ಲಿಸ್ಟ್‌ಗೆ ವಾಸಸ್ಥಳ ದೃಢೀಕರಣ ಪತ್ರ ಕೂಡ ಸೇರಿದೆ.

ಈ ಪತ್ರವನ್ನು ವೆರಿಫೈ ಮಾಡಿ ನೀಡುವ ಸಂಪೂರ್ಣ ಅಧಿಕಾರವನ್ನು ಆಯಾ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ (PDO) ನೀಡಲಾಗಿದೆ.

ಇದರಿಂದಾಗಿ ಸ್ಥಳೀಯವಾಗಿಯೇ, ಯಾವುದೇ ವಿಳಂಬವಿಲ್ಲದೆ ಕೈಯಲ್ಲೇ ಸರ್ಟಿಫಿಕೇಟ್ ಸಿಗಲಿದೆ.

ಈ ಹೊಸ ಆದೇಶದ ಟಾಪ್ 4 ಹೈಲೈಟ್ಸ್ ಇಲ್ಲಿದೆ:

ಅಭಿಯಾನ ಮಾದರಿಯಲ್ಲಿ ವಿತರಣೆ: ಪಿಡಿಓಗಳು ತಮ್ಮ ವ್ಯಾಪ್ತಿಯ ಅರ್ಹ ನಿವಾಸಿಗಳಿಗೆ ಒಟ್ಟಿಗೆ ಒಂದು ಬಾರಿಗೆ ಅಭಿಯಾನದ ಮಾದರಿಯಲ್ಲಿ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಅಪ್ಲಿಕೇಶನ್ ಸ್ವೀಕರಿಸಿ ಪತ್ರ ನೀಡಲಿದ್ದಾರೆ.

ಹಳೇ ಸಾಫ್ಟ್‌ವೇರ್ ಬಳಕೆ: ಇದಕ್ಕಾಗಿ ಹೊಸದಾಗಿ ಕಾಯಬೇಕಾಗಿಲ್ಲ, ಪ್ರಸ್ತುತ ಇರುವ ಅಟಲ್ ಜೀ ಜನಸ್ನೇಹಿ ಕೇಂದ್ರದ ತಂತ್ರಾಂಶದಲ್ಲೇ ಈ ಸೌಲಭ್ಯ ಸಿಗಲಿದೆ.

ಒಂದೇ ಒಂದು ರೂಪಾಯಿ ಕೊಡುವಂತಿಲ್ಲ: ಅತ್ಯಂತ ಪ್ರಮುಖ ಟ್ವಿಸ್ಟ್ ಏನಪ್ಪಾ ಅಂದ್ರೆ, ಈ ವಾಸಸ್ಥಳ ಪ್ರಮಾಣ ಪತ್ರ ನೀಡಲು ಸಾರ್ವಜನಿಕರಿಂದ ಯಾವುದೇ ಸೇವಾ ಶುಲ್ಕವನ್ನು ವಿಧಿಸುವಂತಿಲ್ಲ ಎಂದು ಸರ್ಕಾರ ಕಟ್ಟುನಿಟ್ಟಾಗಿ ಆರ್ಡರ್ ಮಾಡಿದೆ. ಅಂದರೆ ಇದು ಫುಲ್ ಫ್ರೀ

ಶೀಘ್ರದಲ್ಲೇ ಗೈಡ್‌ಲೈನ್ಸ್ ರಿಲೀಸ್: ಈ ಸರ್ಟಿಫಿಕೇಟ್ ಪಡೆಯಲು ಗ್ರಾಹಕರು ಯಾವೆಲ್ಲಾ ಐಡಿ ಪ್ರೂಫ್ (ದಾಖಲೆಗಳು) ಕೊಡಬೇಕು ಮತ್ತು ಇದರ ಕಂಪ್ಲೀಟ್ ಪ್ರೊಸೀಜರ್ ಹೇಗಿರಲಿದೆ ಎಂಬುದರ ಬಗ್ಗೆ ಶೀಘ್ರದಲ್ಲೇ ಪ್ರತ್ಯೇಕ ಮಾರ್ಗಸೂಚಿ ಪ್ರಕಟವಾಗಲಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ