LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರತಿದಿನ ಒಂದೇ ಇಡ್ಲಿ ತಿಂದು ಬೇಸರವಾಗಿದೆಯೇ? ಹಾಗಿದ್ದರೆ ಒಮ್ಮೆ ಟ್ರೈ ಮಾಡಿ ಪೌಷ್ಟಿಕಾಂಶಯುಕ್ತ ಸ್ಟಫ್ಡ್ ಪಾಲಕ್ ಇಡ್ಲಿ!

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಉಪಾಹಾರಗಳಲ್ಲಿ ಇಡ್ಲಿ ಕೂಡ ಒಂದು. ಪ್ರತಿದಿನ ಒಂದೇ ರೀತಿಯ ಇಡ್ಲಿ ತಿಂದು ಬೇಸರವಾಗಿದ್ದರೆ, ಆರೋಗ್ಯ ಮತ್ತು ರುಚಿಯನ್ನು ದುಪ್ಪಟ್ಟು ಮಾಡುವ ವಿಶೇಷ ಪಾಲಕ್ ಮತ್ತು ಪನೀರ್ ಇಡ್ಲಿಯನ್ನು ನೀವು ಮನೆಯಲ್ಲೇ ಪ್ರಯತ್ನಿಸಬಹುದು. ಪಾಲಕ್ ಸೊಪ್ಪಿನ ಗುಣ ಹಾಗೂ ಪನೀರ್‌ನ ಪ್ರೊಟೀನ್ ಒಳಗೊಂಡಿರುವ ಈ ಇಡ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ. ಇದನ್ನು ಬೆಳಗಿನ ಉಪಾಹಾರಕ್ಕೆ ಅಥವಾ ಸಂಜೆಯ ಸ್ನಾಕ್ಸ್ ರೂಪದಲ್ಲಿ ಚಟ್ನಿ ಮತ್ತು ಸಾಂಬಾರ್ ಜೊತೆ ಸವಿಯಬಹುದು.

ಇಡ್ಲಿ ತಯಾರಿಸಲು ಬೇಕಾಗುವ ಸಾಮಗ್ರಿಗಳು

  • ಇಡ್ಲಿ ಅಕ್ಕಿ – 1 ಕಪ್
  • ಉದ್ದಿನ ಬೇಳೆ – ಅರ್ಧ ಕಪ್
  • ಮೆಂತ್ಯ ಕಾಳು – ಅರ್ಧ ಚಮಚ
  • ರುಚಿಗೆ ತಕ್ಕಷ್ಟು ಉಪ್ಪು
  • ಕತ್ತರಿಸಿದ ಪಾಲಕ್ ಸೊಪ್ಪು – ಅರ್ಧ ಕಪ್
  • ತುರಿದ ಪನೀರ್ – ಅರ್ಧ ಕಪ್
  • ಈರುಳ್ಳಿ – ಅರ್ಧ
  • ಹಸಿರು ಮೆಣಸಿನಕಾಯಿ – 1 ಸಣ್ಣದು
  • ತುರಿದ ಶುಂಠಿ – ಅರ್ಧ ಚಮಚ
  • ಜೀರಿಗೆ – ಅರ್ಧ ಚಮಚ
  • ಅಡುಗೆ ಎಣ್ಣೆ – ಅಗತ್ಯವಿರುವಷ್ಟು

ಮಾಡುವ ವಿಧಾನ

ಮೊದಲಿಗೆ ಇಡ್ಲಿ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಮೆಂತ್ಯ ಕಾಳುಗಳೊಂದಿಗೆ ಚೆನ್ನಾಗಿ ತೊಳೆದು, ಪ್ರತ್ಯೇಕವಾಗಿ ಒಂದು ಅಥವಾ ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು.

ಬಳಿಕ ನೆನೆಸಿದ ಅಕ್ಕಿ ಮತ್ತು ಬೇಳೆಯನ್ನು ಪ್ರತ್ಯೇಕವಾಗಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಇವೆರಡನ್ನೂ ಒಟ್ಟಿಗೆ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಹಿಟ್ಟನ್ನು ಕೆಲವು ಗಂಟೆಗಳ ಕಾಲ ಹುದುಗಲು (ಫರ್ಮೆಂಟ್ ಆಗಲು) ಬಿಡಬೇಕು.

ಈಗ ಇಡ್ಲಿಯ ಒಳಗಿಡುವ ಸ್ಟಫಿಂಗ್ ಸಿದ್ಧಪಡಿಸಿಕೊಳ್ಳಿ. ಒಂದು ಪಾತ್ರೆಯಲ್ಲಿ ಎಣ್ಣೆ ಕಾಯಿಸಿ ಜೀರಿಗೆ ಹಾಕಿ ಸಾಸಿವೆ ಸಿಡಿಸಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಇದಕ್ಕೆ ಕತ್ತರಿಸಿದ ಪಾಲಕ್ ಸೊಪ್ಪು, ತುರಿದ ಪನೀರ್, ಶುಂಠಿ, ಹಸಿರು ಮೆಣಸಿನಕಾಯಿ ಮತ್ತು ಉಪ್ಪು ಸೇರಿಸಿ ಕೆಲವು ನಿಮಿಷಗಳ ಕಾಲ ಬೇಯಿಸಿ ಒಲೆಯಿಂದ ಕೆಳಗಿಳಿಸಿ.

ಕೊನೆಯದಾಗಿ ಇಡ್ಲಿ ಪಾತ್ರೆಯ ತಟ್ಟೆಗಳಿಗೆ ಎಣ್ಣೆ ಸವರಿ, ಮೊದಲು ಸ್ವಲ್ಪ ಇಡ್ಲಿ ಹಿಟ್ಟನ್ನು ಹಾಕಿ. ಅದರ ಮೇಲೆ ಸಿದ್ಧಪಡಿಸಿದ ಪಾಲಕ್ ಮತ್ತು ಪನೀರ್ ಮಿಶ್ರಣವನ್ನು ಸ್ವಲ್ಪ ಪ್ರಮಾಣದಲ್ಲಿ ಇಡಿ. ಮಿಶ್ರಣದ ಮೇಲೆ ಮತ್ತೊಮ್ಮೆ ಇಡ್ಲಿ ಹಿಟ್ಟನ್ನು ಮುಚ್ಚಿ.

ಹೀಗೆ ಸಿದ್ಧಪಡಿಸಿದ ಇಡ್ಲಿಗಳನ್ನು ಸುಮಾರು 10 ರಿಂದ 15 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿದರೆ, ಬಿಸಿಬಿಸಿಯಾದ ಮತ್ತು ಪೌಷ್ಟಿಕಾಂಶಯುಕ್ತ ಸ್ಟಫ್ಡ್ ಪಾಲಕ್ ಇಡ್ಲಿ ಸವಿಯಲು ಸಿದ್ಧವಾಗುತ್ತದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
SHOCKING : ಮದುವೆಯಾಗುವುದಾಗಿ ನಂಬಿಸಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ; ಬಳ್ಳಾರಿಯಲ್ಲಿ ಕಾಮುಕ ಉಪನ್ಯಾಸಕ ಅರೆಸ್ಟ್.!ಕ್ವಾರಿ ದುರಂತ: ಕ್ರಷರ್ ಮಾಲೀಕನನ್ನು ತಕ್ಷಣ ಬಂಧಿಸಿ; ತಲಾ 1 ಕೋಟಿ ಪರಿಹಾರ ಕೊಡಿಸಬೇಕು: ಶಾಸಕ ಎಸ್.ಟಿ.ಸೋಮಶೇಖರ್ ಆಗ್ರಹಪದೇಪದೇ ಕ್ವಾರಿ ದುರಂತಗಳು ಸಂಭವಿಸುತ್ತಿದ್ದರೂ ಯಾರ ಮೇಲೂ ಕ್ರಮ ಆಗದಿರುವುದು ಬೇಸರದ ಸಂಗತಿ ಎಂದ ಹೆಚ್.ಡಿ.ಕುಮಾರಸ್ವಾಮಿಪ್ರಧಾನಿ, ಸಿಎಂ, ಸಚಿವರು ಸತತ 30 ದಿನ ನ್ಯಾಯಾಂಗ ಬಂಧನದಲ್ಲಿದ್ದರೆ ಅಧಿಕಾರದಿಂದ ವಜಾ ತಿದ್ದುಪಡಿ ಮಸೂದೆ ಮಂಡನೆ ಸಾಧ್ಯತೆBREAKING : ಜುಲೈ 20ರೊಳಗೆ ‘NEET UG’ ಮರುಪರೀಕ್ಷೆಯ ಫಲಿತಾಂಶ ಪ್ರಕಟ : NTA ಮಾಹಿತಿಕೆಲಸದ ಒತ್ತಡದಿಂದ ಸಂತಾನೋತ್ಪತ್ತಿ ಸಾಮರ್ಥ್ಯ ಕುಗ್ಗುತ್ತಿದೆಯೇ ? ವೈದ್ಯರು ಹೇಳುವುದೇನು ?ಕಢಿ ತಿನ್ನಬೇಕೆನಿಸಿದರೆ ಪಕೋಡ ಮಾಡುವ ಜಂಜಾಟ ಬೇಡ: ಹತ್ತೇ ನಿಮಿಷದಲ್ಲಿ ಮಾಡಿ ಸೂಪರ್ ಟೇಸ್ಟಿ ಬೂಂದಿ ಕಢಿಲವ್ ಸ್ಟೋರಿ ಕೊನೆಗೊಂಡಿದ್ದು ಪೊಲೀಸ್ ಸ್ಟೇಷನ್‌ನಲ್ಲಿ: ಎಂಪೈರ್ ಸ್ಟೇಟ್ ಬಿಲ್ಡಿಂಗ್ ತುತ್ತತುದಿಗೇರಿ ಪ್ರಪೋಸ್ ಮಾಡಿದ ಪ್ರೇಮಿಗಳ ಬಂಧನಖಾಲಿ ಇರುವ ಮದ್ಯದ ಸನ್ನದುಗಳನ್ನು ಹರಾಜಿನ ಮೂಲಕ ಹಂಚಿಕೆ ಮಾಡಲು ಮುಂದಾದ ಸರ್ಕಾರBIG NEWS : ರಾಜ್ಯದ ದೇವಸ್ಥಾನಗಳಲ್ಲಿ ಸಿನಿಮಾ/ಧಾರಾವಾಹಿ ಶೂಟಿಂಗ್‌’ಗೆ ಶುಲ್ಕ ಎಷ್ಟು ? ಇಲ್ಲಿದೆ ದರಪಟ್ಟಿ