ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಕಾರ್ಯದರ್ಶಿಗಳಾಗಿ ಮೂವರನ್ನು ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.
ಮಾಧ್ಯಮ ಕಾರ್ಯದರ್ಶಿ -1 ಹುದ್ದೆಗೆ ಹಿರಿಯ ಪತ್ರಕರ್ತ ಪಿ. ತ್ಯಾಗರಾಜ್, ಮಾಧ್ಯಮ ಕಾರ್ಯದರ್ಶಿ -2 ಹುದ್ದೆಗೆ ಆರ್. ಜಯಪ್ರಕಾಶ್, ಮಾಧ್ಯಮ ಕಾರ್ಯದರ್ಶಿ -3 ಹುದ್ದೆಗೆ ರಾಘವೇಂದ್ರ ಭಟ್ ಅವರನ್ನು ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶಿಸಿದೆ.
