LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಪ್ಪ ಪ್ರೀತಿಯಿಂದ ಕರೆಯುತ್ತಿದ್ದ ಹೆಸರಲ್ಲೇ ಬ್ಯುಸಿನೆಸ್ ಆರಂಭಿಸಿದ ಅಪ್ಪು ಪುತ್ರಿ ವಂದಿತಾ: ಇಲ್ಲಿದೆ ನುಕಾಸ್ ಕೆಫೆ ರೋಚಕ ಕಥೆ

ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಕೇವಲ ನಟನೆಯಷ್ಟೇ ಅಲ್ಲದೆ ಸಿನಿಮಾ ನಿರ್ಮಾಣ, ಸಂಗೀತ ಹಾಗೂ ವಿವಿಧ ಕ್ಷೇತ್ರಗಳ ಉದ್ಯಮಗಳಲ್ಲಿ ಅಪಾರ ಆಸಕ್ತಿ ಇತ್ತು. ಅಪ್ಪು ಅವರ ಉದ್ಯಮಶೀಲತೆಯ ಅದೇ ರಕ್ತ ಈಗ ಅವರ ಕಿರಿಯ ಪುತ್ರಿ ವಂದಿತಾ ಅವರಲ್ಲೂ ಹರಿಯುತ್ತಿದೆ. ಹೌದು, ಪುನೀತ್ ರಾಜ್‌ಕುಮಾರ್ ಅವರ ಮುದ್ದಿನ ಮಗಳು ವಂದಿತಾ ಈಗ ಅಧಿಕೃತವಾಗಿ ಉದ್ಯಮ ರಂಗಕ್ಕೆ ಹೆಜ್ಜೆ ಇಟ್ಟಿದ್ದಾರೆ. ಅದೂ ಕೂಡ ತಮ್ಮ ತಂದೆ ತಮಗೆ ಇಟ್ಟಿದ್ದ ಅತ್ಯಂತ ಪ್ರೀತಿಯ ಹೆಸರಿನಲ್ಲೇ ಈ ಬ್ಯುಸಿನೆಸ್ ಆರಂಭಿಸಿರುವುದು ಇಡೀ ರಾಜಕುಮಾರ್ ಕುಟುಂಬ ಹಾಗೂ ಅಭಿಮಾನಿಗಳಲ್ಲಿ ವಿಶೇಷ ಸಂಭ್ರಮ ಮೂಡಿಸಿದೆ.

ಅಪ್ಪ ಪ್ರೀತಿಯಿಂದ ಕರೆಯುತ್ತಿದ್ದ ಹೆಸರೇ ಈಗ ಬ್ರ್ಯಾಂಡ್

ವಂದಿತಾ ಅವರು ಆರಂಭಿಸಿರುವ ಈ ಬೇಕಿಂಗ್ ಉದ್ಯಮದ ಹಿಂದೆ ಅಪ್ಪನ ನೆನಪಿನ ದೊಡ್ಡ ಶಕ್ತಿಯೇ ಅಡಗಿದೆ. ಅಪ್ಪು ಅವರು ತಮ್ಮ ಮುದ್ದಿನ ಮಗಳನ್ನು ಪ್ರೀತಿಯಿಂದ ನುಕಾ ಎಂದೇ ಕರೆಯುತ್ತಿದ್ದರು. ಈಗ ಅದೇ ಹೆಸರನ್ನು ತಮ್ಮ ಉದ್ಯಮಕ್ಕೆ ಇಡುವ ಮೂಲಕ ವಂದಿತಾ ತಂದೆಗೆ ವಿಶೇಷ ಗೌರವ ಸಲ್ಲಿಸಿದ್ದಾರೆ.

ಕುಟುಂಬದವರು ಮತ್ತು ಆಪ್ತರಿಗೆ ಮಾತ್ರ ಸೀಮಿತವಾಗಿದ್ದ ತಮ್ಮ ಬೇಕಿಂಗ್ ಹವ್ಯಾಸವನ್ನು ಈಗ ಅವರು ವ್ಯವಹಾರವಾಗಿ ಬದಲಿಸಿಕೊಂಡಿದ್ದಾರೆ. ವಂದಿತಾ ಅವರೇ ಖುದ್ದಾಗಿ ಮನೆಯಲ್ಲೇ ಅತ್ಯಂತ ಪ್ರೀತಿ, ಕಾಳಜಿ ಹಾಗೂ ಶುಚಿತ್ವದಿಂದ ಈ ರುಚಿಕರವಾದ ಹೋಮ್‌ಮೇಡ್ ಸ್ನ್ಯಾಕ್ಸ್ ಮತ್ತು ಕೇಕ್ ಪ್ರಭೇದಗಳನ್ನು ಸಿದ್ಧಪಡಿಸುತ್ತಿದ್ದಾರೆ.
ಈ ಹಿಂದೆ ಅಪ್ಪು ಅವರು ತಮ್ಮ ಅತ್ತಿಗೆ ಗೀತಾ ಶಿವರಾಜ್ ಕುಮಾರ್ ಅವರಿಗೂ ಬೇಕಿಂಗ್ ಉದ್ಯಮ ಆರಂಭಿಸುವಂತೆ ಸದಾ ಪ್ರೋತ್ಸಾಹಿಸುತ್ತಿದ್ದರು. ದೊಡ್ಡಮ್ಮ ಗೀತಾ ಅವರಂತೆಯೇ ವಂದಿತಾ ಅವರಿಗೂ ಬೇಕಿಂಗ್‌ನಲ್ಲಿ ಅದ್ಭುತ ಕೌಶಲ್ಯ ಮತ್ತು ಆಸಕ್ತಿ ಇದ್ದಿದ್ದರಿಂದ, ಇಂದು ಅಪ್ಪನ ಆಸೆಯನ್ನೇ ತಮ್ಮ ಬ್ಯುಸಿನೆಸ್ ಆಗಿ ಬದಲಾಯಿಸಿಕೊಂಡಿದ್ದಾರೆ.

ಹವ್ಯಾಸವೇ ಆಯ್ತು ಬ್ಯುಸಿನೆಸ್: ಮನೆಯಲ್ಲೇ ತಯಾರಾಗುತ್ತೆ ಬಿಸಿಬಿಸಿ ಖಾದ್ಯ

ಆರಂಭದಲ್ಲಿ ವಂದಿತಾ ಅವರು ಕೇವಲ ತಮ್ಮ ಆಪ್ತರು ಹಾಗೂ ಕುಟುಂಬದವರಿಗಾಗಿ ಕೇಕು ಮತ್ತು ಬೇಕರಿ ಖಾದ್ಯಗಳನ್ನು ತಯಾರಿಸುತ್ತಿದ್ದರು. ಇತ್ತೀಚೆಗಷ್ಟೇ ತಮ್ಮ ಸೋದರ ವಿನಯ್ ರಾಜ್‌ಕುಮಾರ್ ನಟನೆಯ ‘ಗ್ರಾಮಾಯಣ’ ಸಿನಿಮಾದ ಪ್ರಚಾರದ ವೇಳೆ ಅಣ್ಣನಿಗಾಗಿ ವಿಶೇಷವಾಗಿ ‘ಗ್ರಾಮಾಯಣ’ ಎಂದು ಬರೆದ ಕೇಕ್ ಸಿದ್ಧಪಡಿಸಿ ಎಲ್ಲರ ಗಮನ ಸೆಳೆದಿದ್ದರು. ಈ ಹವ್ಯಾಸವೇ ಈಗ ದೊಡ್ಡ ಉದ್ಯಮವಾಗಿ ರೂಪಾಂತರಗೊಂಡಿದೆ.

ಯಾವೆಲ್ಲಾ ಖಾದ್ಯಗಳು ಲಭ್ಯ?: ನುಕಾಸ್ ಕೆಫೆಯಲ್ಲಿ ವಿಶ್ವವಿಖ್ಯಾತ ತಿರಮಿಸು, ತರಹೇವಾರಿ ರುಚಿಕರ ಕೇಕುಗಳು, ಬಿಸ್ಕೆಟ್‌ಗಳು, ಬ್ರೆಡ್, ಬ್ರೌನಿ, ಚೀಸ್ ಕೇಕ್ ಹಾಗೂ ಕಪ್ ಕೇಕ್‌ಗಳು ಲಭ್ಯವಿವೆ.

ಆನ್‌ಲೈನ್ ಆರ್ಡರ್ ಸೌಲಭ್ಯ: ಈ ಎಲ್ಲಾ ಸ್ವಾದಿಷ್ಟ ಖಾದ್ಯಗಳನ್ನು ಗ್ರಾಹಕರು ಆನ್‌ಲೈನ್ ಮೂಲಕ ಆರ್ಡರ್ ಮಾಡಿ ನೇರವಾಗಿ ಮನೆಗೇ ತರಿಸಿಕೊಳ್ಳಬಹುದು. ಇದಕ್ಕಾಗಿ ವಂದಿತಾ ಅವರೇ ಖುದ್ದಾಗಿ ಒಂದು ವಿಶೇಷ ವೆಬ್‌ಸೈಟ್ ಅನ್ನು ವಿನ್ಯಾಸಗೊಳಿಸಿದ್ದಾರೆ.

ಪ್ರಾಮಾಣಿಕತೆಯೇ ಇವರ ಬ್ರ್ಯಾಂಡ್

ವಂದಿತಾ ಅವರ ಈ ಉದ್ಯಮದ ವಿಶೇಷತೆಯೆಂದರೆ, ಗ್ರಾಹಕರಿಗೆ ನೀಡುವ ಪ್ರತಿಯೊಂದು ಖಾದ್ಯವನ್ನು ಅವರೇ ಖುದ್ದಾಗಿ ಮನೆಯಲ್ಲೇ ಸ್ವತಃ ತಯಾರಿಸುತ್ತಾರೆ. ಯಾವುದೇ ಕೃತಕತೆ ಇಲ್ಲದೆ ಅತ್ಯಂತ ಶುಚಿಯಾಗಿ ತಾವೊಬ್ಬರೇ ಎಲ್ಲವನ್ನೂ ಸಿದ್ಧಪಡಿಸುವುದರಿಂದ, “ಕೆಲವೊಮ್ಮೆ ಆರ್ಡರ್ ಹೆಚ್ಚಾದಾಗ ಡೆಲಿವರಿ ತಡವಾಗಬಹುದು, ದಯವಿಟ್ಟು ಸಹಕರಿಸಿ” ಎಂದು ತಮ್ಮ ವೆಬ್‌ಸೈಟ್‌ನಲ್ಲಿ ಮೊದಲೇ ಮುಕ್ತವಾಗಿ ಹೇಳಿಕೊಳ್ಳುವ ಮೂಲಕ ವಂದಿತಾ ತಮ್ಮ ಪ್ರಾಮಾಣಿಕತೆಯಿಂದ ಗ್ರಾಹಕರ ಮನ ಗೆದ್ದಿದ್ದಾರೆ.ಅಪ್ಪನ ಆಶೀರ್ವಾದದೊಂದಿಗೆ ಸ್ವಾವಲಂಬಿ ಬದುಕಿನತ್ತ ಹೆಜ್ಜೆ ಇಟ್ಟಿರುವ ರಾಜಕುಮಾರ್ ಕುಡಿಯ ಈ ಹೊಸ ಪ್ರಯತ್ನಕ್ಕೆ ಕನ್ನಡಿಗರಿಂದ ಭಾರಿ ಬೆಂಬಲ ಹಾಗೂ ಪ್ರಶಂಸೆ ವ್ಯಕ್ತವಾಗುತ್ತಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕ