LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯದ ರೈತರೇ ಗಮನಿಸಿ : ಭೂಮಿ ತಂತ್ರಾಂಶದಲ್ಲಿ `ಪಹಣಿ’ ಸೃಜನೆ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

ಬೆಂಗಳೂರು:  ರಾಜ್ಯದಲ್ಲಿ ಭೂ ದಾಖಲೆಗಳ ನಿರ್ವಹಣೆಗೆ ಸಂಬಂಧಿಸಿದಂತೆ 'ಪಹಣಿ ಸೃಜನೆ'ಗೆ (ಹೊಸ ಪಹಣಿ ರಚನೆಗೆ) ಅವಕಾಶ ಕಲ್ಪಿಸುವ ಕುರಿತು ಕಂದಾಯ ಆಯುಕ್ತಾಲಯವು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿ ಮಹತ್ವದ ಸುತ್ತೋಲೆ ಹೊರಡಿಸಿದೆ.

ಇತ್ತೀಚೆಗೆ ಪಹಣಿ ಸೃಜನೆ ಕೋರಿ ಇಲಾಖೆಗೆ ಹಲವು ಪ್ರಸ್ತಾವನೆಗಳು ಸಲ್ಲಿಕೆಯಾಗುತ್ತಿದ್ದು, ಇವುಗಳಲ್ಲಿ ಹೆಚ್ಚಿನ ಪ್ರಕರಣಗಳನ್ನು 'ಪೋಡಿ ಇಂದೀಕರಣ' ಹಾಗೂ 'ಪಹಣಿ ತಿದ್ದುಪಡಿ' ತಂತ್ರಾಂಶದ ಮೂಲಕವೇ ಇತ್ಯರ್ಥಪಡಿಸಲು ಅವಕಾಶವಿದೆ. ಆದ್ದರಿಂದ ಪ್ರತಿಯೊಂದಕ್ಕೂ ಹೊಸದಾಗಿ ಪಹಣಿ ಸೃಜನೆ ಮಾಡುವ ಅಗತ್ಯವಿಲ್ಲ ಎಂದು ಕಂದಾಯ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ಯಾವ ಸಂದರ್ಭಗಳಲ್ಲಿ ಪಹಣಿ ಸೃಜನೆ ಅಗತ್ಯವಿಲ್ಲ?

ಮೂಲ ಸರ್ವೇ ನಂಬರ್ ಲಭ್ಯವಿದ್ದಾಗ: ಭೂಮಿ ತಂತ್ರಾಂಶದಲ್ಲಿ ಈಗಾಗಲೇ ಮೂಲ ಸರ್ವೇ ನಂಬರ್ ಲಭ್ಯವಿದ್ದರೆ, ಹಿಸ್ಸಾಗಳನ್ನು ಒಟ್ಟುಗೂಡಿಸಿ, ಪಹಣಿ ತಿದ್ದುಪಡಿ ತಂತ್ರಾಂಶದ (RRT Correction Module) ಮೂಲಕ ಖಾತೇದಾರರ ವಿವರ ಹಾಗೂ ವಿಸ್ತೀರ್ಣ ಸರಿಪಡಿಸಿ, ಬಳಿಕ ಪೋಡಿ ವಿಭಜನೆ ಕೈಗೊಳ್ಳಬೇಕು.

ದರಖಾಸ್ತು ಪೋಡಿ ಪ್ರಕರಣಗಳು: ಮಂಜೂರಿಯಾದ ಬಳಿಕ ಹೊಸ ಸರ್ವೇ ನಂಬರ್‌ಗೆ ಟಿಪ್ಪಣಿ ಮತ್ತು ಆಕಾರ್ ಬಂದ್ ಸೃಜನೆಯಾಗಿ ಪಹಣಿ ಇಂದೀಕರಣ ಬಾಕಿ ಇದ್ದರೆ, ಅದನ್ನು ಪೋಡಿ ಇಂದೀಕರಣ ತಂತ್ರಾಂಶದ ಮೂಲಕವೇ ಮಾಡಬೇಕು. ಯಾವುದೇ ಕಾರಣಕ್ಕೂ ಹೊಸದಾಗಿ ಪಹಣಿ ಸೃಜನೆ ಮಾಡಬಾರದು.

ಡಿಲೀಟ್ ಆದ ಪಹಣಿಗಳು: ಈ ಹಿಂದೆ RTC MANAGEMENT ತಂತ್ರಾಂಶದಲ್ಲಿ ಪಹಣಿ ಡಿಲೀಟ್ ಮಾಡಿದ್ದರೆ, ಮರು ಸೃಜನೆಗೆ ಅವಕಾಶವಿಲ್ಲ. ಬದಲಿಗೆ ಉಪವಿಭಾಗಾಧಿಕಾರಿಗಳ (AC) ಲಾಗಿನ್ ಮೂಲಕ 'RTC Retrieval' ಆಯ್ಕೆ ಬಳಸಿ ಪಹಣಿಯನ್ನು ಪುನರ್ ಸ್ಥಾಪಿಸಬೇಕು.

ಪಹಣಿ ಸೃಜನೆಗೆ ಯಾವಾಗ ಅವಕಾಶ?

ಕಂದಾಯ ದಾಖಲೆಗಳಲ್ಲಿ ಸರ್ವೇ ನಂಬರ್ ಹಾಗೂ ಅದರ ಹಿಸ್ಸಾ ಪಹಣಿಗಳು ಭೂಮಿ ತಂತ್ರಾಂಶದಲ್ಲಿ ಸಂಪೂರ್ಣವಾಗಿ ಲಭ್ಯವಿಲ್ಲದೇ ಇರುವ ಸಂದರ್ಭದಲ್ಲಿ ಮಾತ್ರವೇ ಜಿಲ್ಲಾಧಿಕಾರಿಗಳ ಲಾಗಿನ್ ಮೂಲಕ ಆಕಾರ್ ಬಂದ್ ನಂತರ ಹೊಸದಾಗಿ ಪಹಣಿ ಸೃಜನೆ ಮಾಡಲು ಅವಕಾಶ ನೀಡಲಾಗಿದೆ.

ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ವ್ಯಾಪ್ತಿಯ ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಕಂದಾಯ ಆಯುಕ್ತರು ಸೂಚಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ತಾಂತ್ರಿಕ ಸಮಸ್ಯೆಗಳೇನಾದರೂ ಎದುರಾದರೆ ಜಿಲ್ಲಾ ಭೂಮಿ ಸಮಾಲೋಚಕರನ್ನು ಸಂಪರ್ಕಿಸಲು ತಿಳಿಸಲಾಗಿದೆ.

news_1788950910_0_919.webp

 

news_1788950910_1_488.webp

 

 

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
CM ಡಿ.ಕೆ. ಶಿವಕುಮಾರ್ ಸರ್ಕಾರದ 100 ದಿನಗಳ ಯಶಸ್ವಿ ಆಡಳಿತ : ನಾಳೆ ವಿಧಾಸೌಧದಲ್ಲಿ `ಶತಕದ ಪಥ, ಪ್ರಗತಿಯ ರಥ’ ವಿಶೇಷ ಕಾರ್ಯಕ್ರಮಬ್ಯಾಂಕ್ ಖಾತೆದಾರ ಮೃತಪಟ್ಟರೆ ನಾಮಿನಿ ಇಲ್ಲದಿದ್ದರೂ ಹಣ ಪಡೆಯಬಹುದೇ? ಇಲ್ಲಿದೆ RBI ನಿಯಮರಾಜ್ಯದ ರೈತರೇ ಗಮನಿಸಿ : ಭೂಮಿ ತಂತ್ರಾಂಶದಲ್ಲಿ `ಪಹಣಿ’ ಸೃಜನೆ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶಭಾರತ್ ಜೋಡೋ ಯಾತ್ರೆ; ದೇಶದ ಜನಸಾಮಾನ್ಯರ ಸಂಕಷ್ಟಕ್ಕೆ ಸಿಕ್ಕ ಪರಿಹಾರ: ಸಿಎಂ ಡಿ ಕೆ ಶಿವಕುಮಾರ್ ಅಭಿಮತBIG NEWS : ರಾಜ್ಯದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ: ಮತಪೆಟ್ಟಿಗೆಗಳ ಮಾಹಿತಿ ಸಲ್ಲಿಸಲು ರಾಜ್ಯ ಚುನಾವಣಾ ಆಯೋಗ ಸೂಚನೆಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಕೋರಿ ರಕ್ತದಲ್ಲಿ ಪತ್ರ ಬರೆದ ಶಿಕ್ಷಕಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಕೋರಿ ರಕ್ತದಲ್ಲಿ ಪತ್ರ ಬರೆದ ಶಿಕಾರಿಪುರದ ಶಿಕ್ಷಕಸೆ.11ರಂದು ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧಿಸಿ ಈಸೂರಿನಿಂದ ಶಿಕಾರಿಪುರದವರೆಗೆ ಪಾದಯಾತ್ರೆ: ಸಚಿವ ಮಧು ಬಂಗಾರಪ್ಪರಾಜ್ಯದ ಮುಜರಾಯಿ ದೇವಾಲಯಗಳ ಅರ್ಚಕರಿಗೆ ಗುಡ್ ನ್ಯೂಸ್: ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ 1 ಲಕ್ಷದವರೆಗೆ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಭಾರತ ರತ್ನ ಪ್ರೊ.ಸಿ.ಎನ್.ರಾವ್ ಅವರಿಗೆ ಯಾವುದೇ ನೋಟಿಸ್ ಜಾರಿ ಮಾಡಿಲ್ಲ: GBA ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸ್ಪಷ್ಟನೆ