ರಾಯಚೂರು : ರಾಯಚೂರಲ್ಲಿ ಭೀಕರವಾದ ಕೋಲೆ ನಡೆದಿದ್ದು ಊಟ ಮಾಡುವಾಗ ಮಚ್ಚಿನಿಂದ ಹೊಡೆದು ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ ಕೃತ್ಯದ ಬಳಿಕ ಕೊಲೆ ಮಾಡಿರುವ ಆರೋಪಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಿನ್ನೆ ಈ ಒಂದು ಘಟನೆ ನಡೆದಿದೆ.
ಹನುಮೇಶ್ (32) ಎಂಬ ಯುವಕನನ್ನು ಶಂಕರ್ ಎಂಬ ಆರೋಪಿ ಕೊಲೆ ಮಾಡಿದ್ದಾನೆ. ಆರೋಪಿಯ ಸಹೋದರಿ ಜೊತೆ ಹನುಮೇಶ್ ಅನೈತಿಕ ಸಂಬಂಧ ಇಟ್ಟುಕೊಂಡಿರುವ ಶಂಕೆ ಹಿನ್ನೆಲೆಯಲ್ಲಿ ಈ ಒಂದು ಅನುಮಾನದಿಂದ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ನಿನ್ನೆ ಮಧ್ಯಾಹ್ನ ಮನೆಯಲ್ಲಿ ಹರಮೇಶ್ ಊಟ ಮಾಡುತ್ತಿದ್ದ ಈ ವೇಳೆ ಹಿಂದಿನಿಂದ ಮನೆಗೆ ಬಂದಿದ್ದ ಆರೋಪಿ ಶಂಕರ್ ಮಚ್ಚಿನಿಂದ ಹಲವು ಬಾರಿ ಹಲ್ಲೆ ನಡೆಸಿ ಹನುಮೇಶನನ್ನು ಕೊಲೆ ಮಾಡಿದ್ದಾನೆ. ಕೊಲೆಯ ಬಳಿಕ ಶಂಕರ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಸದ್ಯ ಮಾನ್ವಿ ಪೊಲೀಸರಿಂದ ಶಂಕರ್ ವಿಚಾರಣೆ ನಡೆಯುವುದು ಪೋಸ್ಟ್ ಹಾಕಿದ್ದ ಮಾನೀ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.