ಹಾವೇರಿ : ಪ್ರೀತಿಸಿ ಮದುವೆಯಾದ ಜೋಡಿಗೆ ಪೋಷಕರಿಂದ ಕಿರುಕುಳ ನೀಡಿದ್ದು, ಬಲವಂತವಾಗಿ ಯುವತಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದಕ್ಕೆ ಮನನೊಂದು ಯುವಕ ನೇಣಿಗೆ ಶರಣಾಗಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ಮಂಜುನಾಥ್ ಅಗಡಿ (24) ನೇಣಿಗೆ ಶರಣಾಗಿದ್ದಾರೆ.
ಆತ್ಮಹತ್ಯೆಗು ಮುನ್ನ 'ಮುಂದಿನ ಜನ್ಮ ಅಂತ ಇದ್ರೆ ನಿನ್ನವನಾಗಿಯೇ ಹುಟ್ಟಿಬರುವೆ' ಎಂದು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿ ಮಂಜುನಾಥ್ ನೇಣಿಗೆ ಶರಣಾಗಿದ್ದಾನೆ. 2 ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ ಮಂಜುನಾಥ್ ಇತ್ತೀಚಿಗಷ್ಟೆ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಆದ್ರೆ, ಈ ಮದುವೆ ಯುವತಿಯ ಪೋಷಕರಿಗೆ ಇಷ್ಟ ಇರಲಿಲ್ಲ. ಹಾಗಾಗಿ ಹಾವೇರಿ ಮಹಿಳಾ ಠಾಣೆಗೆ ನಾಪತ್ತೆ ದೂರು ನೀಡಿದ್ದರು. ಕೆಲ ದಿನಗಳ ಹಿಂದೆ ಠಾಣೆಯಲ್ಲಿ ವಿಚಾರಣೆಯು ನಡೆದಿತ್ತು. ಪೋಷಕರು ಬಲವಂತವಾಗಿ ಯುವತಿ ಮನೆಗೆ ಕರೆದೋಯ್ದಿದ್ರು. ಇದರಿಂದ ಮನನೊಂದ ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿದ್ದಾನೆ.