LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕುಟುಂಬಸಮೇತರಾಗಿ ಉಜ್ಜಯಿನಿ ಮಹಾಕಾಳೇಶ್ವರನ ದರ್ಶನ ಪಡೆದ ಸುರೇಶ್ ರೈನಾ! ಭಸ್ಮಾರತಿಯಲ್ಲಿ ಭಾಗಿ!

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರು ಭಾನುವಾರ ಕುಟುಂಬಸಮೇತರಾಗಿ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಪ್ರಸಿದ್ಧ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ಶಿವನ ಆಶೀರ್ವಾದ ಪಡೆದರು.

ಬೆಳಗಿನ ಜಾವ ನಡೆದ ವಿಶೇಷ ಭಸ್ಮಾರತಿ ಪೂಜೆಯಲ್ಲಿ ಸುರೇಶ್ ರೈನಾ ತಮ್ಮ ಪತ್ನಿ ಪ್ರಿಯಾಂಕಾ, ಭಾವ ವಿವೇಕ್ ಹಾಗೂ ನಾದಿನಿ ನೇಹಾ ಅವರೊಂದಿಗೆ ಭಾಗವಹಿಸಿದ್ದರು. ಜ್ಯೋತಿರ್ಲಿಂಗಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ, ಈ ದೈವಿಕ ಅನುಭವದ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕುಟುಂಬದೊಂದಿಗೆ ಭಸ್ಮಾರತಿಯಲ್ಲಿ ಪಾಲ್ಗೊಂಡಿದ್ದು ಅತ್ಯಂತ ವಿಶೇಷ ಹಾಗೂ ಮನಸ್ಸಿಗೆ ಶಾಂತಿ ನೀಡಿದ ಕ್ಷಣ ಎಂದು ರೈನಾ ಬರೆದುಕೊಂಡಿದ್ದಾರೆ. ಮಹಾಕಾಲನ ದಿವ್ಯ ಸನ್ನಿಧಿಯಲ್ಲಿ ಕುಳಿತು ಪ್ರಾರ್ಥಿಸಿದ್ದು ನನ್ನ ಹೃದಯವನ್ನು ಅಪಾರ ಕೃತಜ್ಞತೆ ಮತ್ತು ಪ್ರಶಾಂತತೆಯಿಂದ ತುಂಬಿದೆ ಎಂದು ಅವರು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯವು ದೇಶಾದ್ಯಂತ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಇಲ್ಲಿ ಬೆಳಗಿನ ಜಾವ ಜರುಗುವ ಭಸ್ಮಾರತಿಯು ಅತ್ಯಂತ ಪವಿತ್ರ ಹಾಗೂ ಪ್ರಸಿದ್ಧ ಪೂಜಾ ವಿಧಿಯಾಗಿದೆ.


Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅರಮನೆ ಗಜಪಡೆ ಕ್ಯಾಂಪ್‌ನಲ್ಲಿ ಹಬ್ಬದ ಕಳೆ: ಮಾವುತರು, ಕಾವಾಡಿಗಳ ಕುಟುಂಬಗಳಿಗೆ ಭರ್ಜರಿ ಗಿಫ್ಟ್!ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ ಪ್ರಕಟ: ಎಚ್‌.ಟಿ.ರತ್ನಾಕರ್‌ಗೆ ಜೀವಮಾನ ಸಾಧನೆ ಗೌರವ; ಇಲ್ಲಿದೆ ಸಂಪೂರ್ಣ ಪಟ್ಟಿಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಗದಗ KRIDL ಎಇಇ ಹೈದರಾಬಾದ್‌ನಲ್ಲಿ ಪತ್ತೆ: ಸಿಎಂ ಡಿ.ಕೆ.ಶಿವಕುಮಾರ್AI ಮೂಲಕ ಪ್ರವಾಸೋದ್ಯಮವನ್ನು ಹೆಚ್ಚು ಸಮಗ್ರ, ಸುಸ್ಥಿರ ಮತ್ತು ಅರ್ಥಪೂರ್ಣವಾಗಿಸಲ ಸಚಿವ ಕೆ.ಜೆ. ಜಾರ್ಜ್  ಕರೆಅ.2ರಿಂದ 'ನೈಸ್ ರಸ್ತೆ' ವಿರುದ್ಧ ಪ್ರತಿಭಟನೆ ಆರಂಭ: ಕೇಂದ್ರ HDKಕಿತ್ತು ಬಂದ ರಸ್ತೆ ಕಾಮಗಾರಿ ಬಗ್ಗೆ ಪ್ರಶ್ನಿಸಿದ ಯುವಕನಿಗೆ ಸಚಿವ ಕಪಾಳಮೋಕ್ಷ | VIDEO'ಪತ್ರಕರ್ತರಿಗೆ ರೈಲ್ವೆ ಪಾಸ್' ಮರುಜಾರಿಗೊಳಿಸಲು ಕೇಂದ್ರ ಸಚಿವ ವಿ.ಸೋಮಣ್ಣಗೆ KUWJ ಮನವಿಸಾಲಮನ್ನಾ ಮಾಡಲು ಕಾಂಗ್ರೆಸ್ ಬೆಂಬಲ ಸುಳ್ಳು; ಆ ಪಾಪಿಗಳು ಸಹಕಾರ ನೀಡಲಿಲ್ಲ- HDKCRIME: ಲೈಂಗಿಕ ಕಿರುಕುಳ ನೀಡುತ್ತಿದ್ದವನ ಕತ್ತು ಹಿಸುಕಿ ಕೊಂದ ಮಹಿಳೆ, ಅರೆಸ್ಟ್!ಸಾರ್ವಜನಿಕ ಶೌಚಾಲಯದಲ್ಲಿ ವಿಷಕಾರಿ ರಾಸಾಯನಿಕ ಅನಿಲ ಉಸಿರಾಡಿ ಇಬ್ಬರು ಸಾವು