LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಪ್ಪು ವೆಲ್ವೆಟ್ ಗೌನ್, ತಲೆಯ ಮೇಲೊಂದು ಕಿರೀಟ: ಪ್ಯಾರಿಸ್ ಫ್ಯಾಷನ್ ಶೋನಲ್ಲಿ ಕಣ್ಮನ ಸೆಳೆದ ಐಶ್ವರ್ಯಾ ರೈ ಬಚ್ಚನ್

ಇತ್ತೀಚಿನ ದಿನಗಳಲ್ಲಿ ಬೆಳ್ಳಿಪರದೆಯಿಂದ ತುಸು ದೂರ ಉಳಿದಿರುವ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್, ಜಾಗತಿಕ ಮಟ್ಟದ ಕಾರ್ಯಕ್ರಮಗಳಲ್ಲಿ ತಮ್ಮ ಉಪಸ್ಥಿತಿಯಿಂದ ಸದಾ ಸುದ್ದಿಯಲ್ಲಿರುತ್ತಾರೆ. ಖ್ಯಾತ ಸೌಂದರ್ಯವರ್ಧಕ ಸಂಸ್ಥೆ ಲೊರಿಯಲ್ ಪ್ಯಾರಿಸ್‌ನ ಜಾಗತಿಕ ರಾಯಭಾರಿಯಾಗಿರುವ ಅವರು, ಪ್ರತಿಷ್ಠಿತ ಕ್ಯಾನ್ಸ್ ಫಿಲ್ಮ್ ಫೆಸ್ಟಿವಲ್ ಹಾಗೂ ಪ್ಯಾರಿಸ್ ಫ್ಯಾಷನ್ ವೀಕ್‌ನಂತಹ ದೊಡ್ಡ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ.

ಈ ಬಾರಿಯ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲೂ ಐಶ್ವರ್ಯಾ ರೈ ತಮ್ಮ ಸೌಂದರ್ಯ ಮತ್ತು ಸರಳತೆಯಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈ ಫ್ಯಾಷನ್ ಶೋನ ಉದ್ಘಾಟನಾ ಸಮಾರಂಭದಲ್ಲಿ ಜಾಗತಿಕ ಸಂಗೀತ ಲೋಕದ ದೈತ್ಯ ಪ್ರತಿಭೆ ಸಿಲೀನ್ ಡಿಯೋನ್ ತಮ್ಮ ಐಕಾನಿಕ್ ಐ ಆಮ್ ಅಲೈವ್ ಗೀತೆಯನ್ನು ಗಾಯನ ಮಾಡುವ ಮೂಲಕ ಎಲ್ಲರನ್ನೂ ರಂಜಿಸಿದರು. ಈ ವೇಳೆ ಐಶ್ವರ್ಯಾ ರೈ ಅವರು ಸಿಲೀನ್ ಡಿಯೋನ್ ಅವರನ್ನು ಅಪ್ಪಿಕೊಂಡು, ಮುದ್ದಾಡಿ ಶುಭಾಶಯ ತಿಳಿಸಿದರು. ಅಷ್ಟೇ ಅಲ್ಲದೆ, ವೇದಿಕೆಯ ಮೇಲೆ ಇಬ್ಬರೂ ಕೈಹಿಡಿದು ಹೆಜ್ಜೆ ಹಾಕುತ್ತಾ ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿದರು.

ಈ ವರ್ಣರಂಜಿತ ಸಂಜೆ ಐಶ್ವರ್ಯಾ ರೈ ಜೊತೆಗೆ ಹಾಲಿವುಡ್ ಹಾಗೂ ಜಾಗತಿಕ ಮಟ್ಟದ ಪ್ರಸಿದ್ಧ ತಾರೆಗಳಾದ ಕೆಂಡಲ್ ಜೆನ್ನರ್, ಸಿಮೋನ್ ಆಶ್ಲಿ, ವೈಯೋಲಾ ಡೇವಿಸ್, ಕ್ಯಾರಾ ಡೆಲೆವಿನ್, ಜೇನ್ ಫೋಂಡಾ ಮತ್ತು ಈವಾ ಲೋಂಗೋರಿಯಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಕಪ್ಪು ವರ್ಣದ ರೇಷ್ಮೆ ಗೌನ್‌ನಲ್ಲಿ ಮಿಂಚಿದ ತಾರೆ

ಸೆಪ್ಟೆಂಬರ್ 28 ರಂದು ನಡೆದ ಈ ಫ್ಯಾಷನ್ ರ‍್ಯಾಂಪ್ ವಾಕ್‌ನಲ್ಲಿ ಐಶ್ವರ್ಯಾ ರೈ ಕಪ್ಪು ಬಣ್ಣದ ವೆಲ್ವೆಟ್ ಗೌನ್ ಧರಿಸಿ ಅತ್ಯಂತ ಆಕರ್ಷಕವಾಗಿ ಕಂಗೊಳಿಸಿದರು. ಆಕರ್ಷಕ ಕಿರೀಟ ಧರಿಸಿದ್ದ ಅವರ ರಾಜಸಿಕ ಉಡುಪು ಪ್ರೇಕ್ಷಕರ ಗಮನ ಸೆಳೆಯಿತು.

ಚಿತ್ರರಂಗದ ವಿಚಾರಕ್ಕೆ ಬಂದರೆ, ಐಶ್ವರ್ಯಾ ರೈ ಕೊನೆಯದಾಗಿ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಭಾಗ 2 ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.


Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
UPI ಮೂಲಕ ₹10 ಸಾವಿರ ಪಾವತಿಸಿದರೆ ಎಷ್ಟು ಶುಲ್ಕ ಬೀಳುತ್ತದೆ..? ಅ.1 ರಿಂದ ಯಾವ ವಹಿವಾಟಿಗೆ ಎಷ್ಟು?ರೈತರಿಗೆ ಬಿಗ್ ಅಲರ್ಟ್..! ಪಾರಾಕ್ವಾಟ್ ಕಳೆನಾಶಕ ಮಾರಾಟಕ್ಕೆ ಕೇಂದ್ರದಿಂದ ಬ್ರೇಕ್Pitru Paksha: ಪಿತೃಪಕ್ಷದಲ್ಲಿ ಮಕ್ಕಳು ಜನಿಸಿದರೆ ಅದೃಷ್ಟವೇ? ಅಶುಭವೇ? ಜ್ಯೋತಿಷ್ಯ ಏನು ಹೇಳುತ್ತದೆ?ಲಕ್ಷದ್ವೀಪದ ಬಳಿ 3,000 ಕೋಟಿ ರೂ.ಗಿಂತಲೂ ಹೆಚ್ಚು ಮೌಲ್ಯದ 510 ಕೆಜಿ ಮಾದಕವಸ್ತು ಸಹಿತ ಐವರು ಪಾಕಿಸ್ತಾನಿ ಪ್ರಜೆಗಳು ಅರೆಸ್ಟ್BREAKING : ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ; ಚೀನಾ ಮಣಿಸಿ ಚಿನ್ನ ಗೆದ್ದ ಮಹಿಳೆಯರ ಆರ್ಚರಿ ತಂಡ!BREAKING : KPSC ನೇಮಕಾತಿ ಅಕ್ರಮ: ಪಶು ವೈದ್ಯಾಧಿಕಾರಿ ಬೆನ್ನಲ್ಲೇ RTO ಇನ್ಸ್‌ಪೆಕ್ಟರ್‌ ಹುದ್ದೆಯಲ್ಲೂ ಕೋಟಿ ಕೋಟಿ ಡೀಲ್ ಬಟಾಬಯಲು!BREAKING : ಅಡುಗೆ ಎಣ್ಣೆ ಮರುಬಳಕೆಗೆ ಬ್ರೇಕ್: ಸಾರ್ವಜನಿಕರು ಹಾಗೂ ಹೋಟೆಲ್‌ಗಳಿಗೆ ಶೀಘ್ರದಲ್ಲೇ ಹೊಸ ಮಾರ್ಗಸೂಚಿ!ಸಿನಿಮಾ ಟಿಕೆಟ್ ಗೆ ಶೇ. 2ರಷ್ಟು ಸೆಸ್ ವಿರೋಧಿಸಿ ಹೈಕೋರ್ಟ್ ಮೆಟ್ಟಿಲೇರಿದ ಚಿತ್ರಮಂದಿರ ಮಾಲೀಕರುEPFO ವೇತನ ಮಿತಿ ₹25,000ಕ್ಕೆ ಏರಿಕೆ; ಸೆಪ್ಟೆಂಬರ್ PF ಲೆಕ್ಕ ಹೇಗೆ? ಇಲ್ಲಿದೆ 3 ಲೆಕ್ಕಾಚಾರಬೆಂಗಳೂರು ಸೇರಿ ರಾಜ್ಯದ ಹಲವೆಡೆ ಭಾರಿ ಮಳೆ; 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್