LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹೈಟೆಕ್ ವೇಶ್ಯಾವಾಟಿಕೆ ದಂಧೆ ಜಾಲ ಪತ್ತೆ: ಭೋಜ್‌ಪುರಿ ಚಿತ್ರರಂಗದ ನಟಿ ಮುಂಬೈನಲ್ಲಿ ಅರೆಸ್ಟ್‌ !

ಹಿಂದಿ ವೆಬ್ ಸರಣಿಗಳು ಹಾಗೂ ಭೋಜ್‌ಪುರಿ ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ನಟಿಯೊಬ್ಬಳು ಮಹಾರಾಷ್ಟ್ರದ ಮುಂಬೈನಲ್ಲಿ ವೇಶ್ಯಾವಾಟಿಕೆ ದಂದೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾಳೆ. ಥಾಣೆ ಅಪರಾಧ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ನಟಿಯನ್ನು ವಶಕ್ಕೆ ಪಡೆದಿದ್ದು, ಈ ವೇಳೆ ಇಬ್ಬರು ನೊಂದ ಮಹಿಳೆಯರನ್ನು ರಕ್ಷಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ವಾಗ್‌ಲೆ ಎಸ್ಟೇಟ್ ವ್ಯಾಪ್ತಿಯ ಪಡ್ವಾಲ್ ನಗರ ಪ್ರದೇಶದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿಯ ಆಧಾರದ ಮೇಲೆ ಥಾಣೆ ಅಪರಾಧ ವಿಭಾಗದ ಮಾನವ ಅಕ್ರಮ ಸಾಗಣೆ ತಡೆ ಘಟಕದ ಸಿಬ್ಬಂದಿ ಸೆಪ್ಟೆಂಬರ್ 26 ರಂದು ಕಾರ್ಯಾಚರಣೆ ನಡೆಸಿ ಬಲೆ ಹೆಣೆದಿದ್ದರು.

ಸದರಿ ಭೋಜ್‌ಪುರಿ ನಟಿಯೇ ಈ ಜಾಲದ ಮುಖ್ಯ ರೂವಾರಿಯಾಗಿದ್ದು, ಮಹಿಳೆಯರನ್ನು ಅನೈತಿಕ ಚಟುವಟಿಕೆಗೆ ತಳ್ಳಲು ಯತ್ನಿಸುತ್ತಿದ್ದಾಳೆ ಎನ್ನಲಾದ ಸುಳಿವು ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ದಾಳಿ ನಡೆಸಿದ ಪೊಲೀಸರು, ನಟಿಯನ್ನು ತಡೆದು ವಶಕ್ಕೆ ಪಡೆದಿದ್ದಾರೆ. ಅದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಇಬ್ಬರು ಸಂತ್ರಸ್ತ ಮಹಿಳೆಯರನ್ನು ರಕ್ಷಿಸಿ ಸುರಕ್ಷಿತ ಕೇಂದ್ರಕ್ಕೆ ಕಳುಹಿಸಲಾಗಿದೆ.

ಬಂಧಿತ ನಟಿಯು ಹಲವಾರು ಭೋಜ್‌ಪುರಿ ಮತ್ತು ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿದ್ದು, ವಿವಿಧ ಒಟಿಟಿ ವೇದಿಕೆಗಳಲ್ಲಿ ಪ್ರಸಾರವಾದ 10 ಕ್ಕೂ ಹೆಚ್ಚು ಜನಪ್ರಿಯ ವೆಬ್ ಸರಣಿಗಳಲ್ಲಿಯೂ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದಾಳೆ ಎನ್ನಲಾಗಿದೆ. ಸದ್ಯ ನಟಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೂಕ್ತ ವಿಧಿಗಳು ಹಾಗೂ ಅನೈತಿಕ ವ್ಯಾಪಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾನೂನು ಪ್ರಕ್ರಿಯೆಯ ಕಾರಣಕ್ಕೆ ನಟಿಯ ಹೆಸರನ್ನು ಪೊಲೀಸರು ಅಧಿಕೃತವಾಗಿ ಹೊರಹಾಕಿಲ್ಲ.

ಪ್ರಕರಣದ ಕುರಿತು ಥಾಣೆ ಅಪರಾಧ ವಿಭಾಗದ ಪೊಲೀಸರು ವಿಸ್ತೃತ ತನಿಖೆ ಮುಂದುವರಿಸಿದ್ದಾರೆ. ಈ ಜಾಲದ ಹಿಂದೆ ಇನ್ನು ಯಾರಾದರೂ ಭಾಗಿಯಾಗಿದ್ದಾರೆಯೇ ಹಾಗೂ ರಕ್ಷಿಸಲ್ಪಟ್ಟ ಮಹಿಳೆಯರನ್ನು ಯಾವ ರೀತಿ ಈ ದಂದೆಗೆ ತರಲಾಗಿತ್ತು ಎಂಬ ಅಂಶಗಳ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ನಟಿಯ ಮೇಲಿನ ಆರೋಪಗಳು ನ್ಯಾಯಾಲಯದಲ್ಲಿ ಇನ್ನೂ ಸಾಬೀತಾಗಬೇಕಿದ್ದು, ವಿಚಾರಣೆ ಪ್ರಗತಿಯಲ್ಲಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
UPI ಮೂಲಕ ₹10 ಸಾವಿರ ಪಾವತಿಸಿದರೆ ಎಷ್ಟು ಶುಲ್ಕ ಬೀಳುತ್ತದೆ..? ಅ.1 ರಿಂದ ಯಾವ ವಹಿವಾಟಿಗೆ ಎಷ್ಟು?ರೈತರಿಗೆ ಬಿಗ್ ಅಲರ್ಟ್..! ಪಾರಾಕ್ವಾಟ್ ಕಳೆನಾಶಕ ಮಾರಾಟಕ್ಕೆ ಕೇಂದ್ರದಿಂದ ಬ್ರೇಕ್Pitru Paksha: ಪಿತೃಪಕ್ಷದಲ್ಲಿ ಮಕ್ಕಳು ಜನಿಸಿದರೆ ಅದೃಷ್ಟವೇ? ಅಶುಭವೇ? ಜ್ಯೋತಿಷ್ಯ ಏನು ಹೇಳುತ್ತದೆ?ಲಕ್ಷದ್ವೀಪದ ಬಳಿ 3,000 ಕೋಟಿ ರೂ.ಗಿಂತಲೂ ಹೆಚ್ಚು ಮೌಲ್ಯದ 510 ಕೆಜಿ ಮಾದಕವಸ್ತು ಸಹಿತ ಐವರು ಪಾಕಿಸ್ತಾನಿ ಪ್ರಜೆಗಳು ಅರೆಸ್ಟ್BREAKING : ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ; ಚೀನಾ ಮಣಿಸಿ ಚಿನ್ನ ಗೆದ್ದ ಮಹಿಳೆಯರ ಆರ್ಚರಿ ತಂಡ!BREAKING : KPSC ನೇಮಕಾತಿ ಅಕ್ರಮ: ಪಶು ವೈದ್ಯಾಧಿಕಾರಿ ಬೆನ್ನಲ್ಲೇ RTO ಇನ್ಸ್‌ಪೆಕ್ಟರ್‌ ಹುದ್ದೆಯಲ್ಲೂ ಕೋಟಿ ಕೋಟಿ ಡೀಲ್ ಬಟಾಬಯಲು!BREAKING : ಅಡುಗೆ ಎಣ್ಣೆ ಮರುಬಳಕೆಗೆ ಬ್ರೇಕ್: ಸಾರ್ವಜನಿಕರು ಹಾಗೂ ಹೋಟೆಲ್‌ಗಳಿಗೆ ಶೀಘ್ರದಲ್ಲೇ ಹೊಸ ಮಾರ್ಗಸೂಚಿ!ಸಿನಿಮಾ ಟಿಕೆಟ್ ಗೆ ಶೇ. 2ರಷ್ಟು ಸೆಸ್ ವಿರೋಧಿಸಿ ಹೈಕೋರ್ಟ್ ಮೆಟ್ಟಿಲೇರಿದ ಚಿತ್ರಮಂದಿರ ಮಾಲೀಕರುEPFO ವೇತನ ಮಿತಿ ₹25,000ಕ್ಕೆ ಏರಿಕೆ; ಸೆಪ್ಟೆಂಬರ್ PF ಲೆಕ್ಕ ಹೇಗೆ? ಇಲ್ಲಿದೆ 3 ಲೆಕ್ಕಾಚಾರಬೆಂಗಳೂರು ಸೇರಿ ರಾಜ್ಯದ ಹಲವೆಡೆ ಭಾರಿ ಮಳೆ; 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್